Kadur Election Result: ಕಡೂರು ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ದತ್ತಾ ಪಕ್ಷಾಂತರ ಕಾರಣದಿಂದ ಕಡೂರಿನಲ್ಲಿ ಪ್ರತಿಷ್ಠೆಯ ತ್ರಿಕೋನ ಸ್ಪರ್ಧೆ
Kaduru Assembly Election Result 2023 Live Counting Updates: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಮೇಲಾಟಗಳಿಂದ ಸುದ್ದಿಯಲ್ಲಿರುವ ಕಡೂರು ವಿಧಾನಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

Kadur Assembly Election Results 2023: ಇತ್ತೀಚಿನ ದಿನಗಳಲ್ಲಿ ಸಾಕಷ್ಟು ರಾಜಕೀಯ ಮೇಲಾಟಗಳಿಂದ ಸುದ್ದಿಯಲ್ಲಿರುವ ಕಡೂರು ವಿಧಾನಸಭಾ ಕ್ಷೇತ್ರವು ಈ ಬಾರಿ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್ವಿ ದತ್ತಾ ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಮತ್ತೆ ಜೆಡಿಎಸ್ ಸೇರ್ಪಡೆಯಾಗಿ ಕಣದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ 2008, 2013 ಹಾಗೂ 2018ರಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ, ವೈಎಸ್ವಿ ದತ್ತಾ, 2013ರಲ್ಲಿ ಮಾತ್ರ ಸುಮಾರು 42 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು.
ಕಳೆದ ಬಾರಿ ದತ್ತಾ ವಿರುದ್ಧ 16 ಸಾವಿರ ಮತಗಳಿಂದ ಗೆದ್ದಿದ್ದ ಬೆಳ್ಳಿ ಪ್ರಕಾಶ್ ಅಲಿಯಾಸ್ ಕೆಎಸ್ ಪ್ರಕಾಶ್ಗೆ ಬಿಜೆಪಿ ಮತ್ತೆ ಟಿಕೆಟ್ ನೀಡಿದೆ. ಕಳೆದ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದ ಕೆಎಸ್ ಆನಂದ್ಗೆ ಮತ್ತೆ ಈ ಬಾರಿ ಟಿಕೆಟ್ ನೀಡಲಾಗಿದೆ. ಕೆಎಸ್ ಆನಂದ ಬದಲಿಗೆ ತನಗೆ ಟಿಕೆಟ್ ಬೇಕೆಂದು ಮನವಿ ಮಾಡಿ, ವೈಎಸ್ವಿ ದತ್ತಾ ಕಾಂಗ್ರೆಸ್ ಸೇರಿದ್ದರು. ಹೀಗಾಗಿ ಕಡೂರು ಕ್ಷೇತ್ರವು ಈ ಬಾರಿ ಮೂವರಿಗೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಬಯಲು ಸೀಮೆ ಭಾಗವಾಗಿರುವ ಕಡೂರು ವಿಧಾನಸಭಾ ಕ್ಷೇತ್ರ. ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದು. ನೀರಾವರಿ ಸಮಸ್ಯೆ ಇಲ್ಲಿನ ಪ್ರಮುಖವಾದ ಸಮಸ್ಯೆಯಾಗಿದೆ. ರಾಗಿ ಅಡಿಕೆ ತೆಂಗು ಈರುಳ್ಳಿ ಇಲ್ಲಿನ ಮೂಲ ಬೆಳೆಯಾಗಿದ್ದು ನೀರಿನ ಸಮಸ್ಯೆಗೆ ಇಲ್ಲಿನ ಜನತೆ ಕಂಗೆಟ್ಟು ಹೋಗಿದ್ದಾರೆ. ಲಿಂಗಾಯತ ಕುರುಬ ಪ್ರಬಲವಾದ ಸಮುದಾಯವಾಗಿದ್ರು . ಅಹಿಂದ ಮತಗಳೇ ನಿರ್ಣಾಯಕವಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ನ ಹಾಲಿ ಶಾಸಕರಾಗಿದ್ದ ವೈಎಸ್ ವಿ ದತ್ತ ಎದುರು ಸ್ಪರ್ಧೆ ಮಾಡಿದ್ದ ಬಿಜೆಪಿಯ ಬೆಳ್ಳಿ ಪ್ರಕಾಶ್ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ.
ವಿಧಾನಸಭೆ ಚುನಾವಣೆ ಲೈವ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಧಾನಸಭೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:22 am, Sat, 13 May 23