Lingsugur Election Results: ಲಿಂಗಸೂಗುರು ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಬಿಜೆಪಿಯ ಮಾನಪ್ಪ ವಜ್ಜಲ್ ಗೆ ಗೆಲುವು!
Lingasugur Assembly Election Result 2023 Live Counting Updates: ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾನಪ್ಪ ವಜ್ಜಲ್ ಗೆದ್ದಿದ್ದಾರೆ.
ರಾಯಚೂರು: ಜಿಲ್ಲೆಯ ಲಿಂಗಸೂಗೂರು ಮತಕ್ಷೇತ್ರದಲ್ಲಿ ಬಿಜೆಪಿಯ ಮಾನಪ್ಪ ವಜ್ಜಲ್ ತಮ್ಮ ಸಮೀಪದ ಪ್ರತಿಸ್ಪರ್ಧಿ ದುರ್ಗಪ್ಪ ಎಸ್ ಹೂಲಗೇರಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ದುರ್ಗಪ್ಪ ಹೂಲಗೇರಿ, ಮಾನಪ್ಪ ವಜ್ಜಲ್ ಮತ್ತು ಜೆಡಿಎಸ್ ಪಕ್ಷದ ಸಿದ್ದು ಬಂಡಿ ನಡುವೆ ತುರುಸಿನ ಪೈಪೋಟಿ ನಡೆದಿತ್ತು. ಅಭ್ಯರ್ಥಿಗಳು ಕ್ರಮವಾಗಿ ಶೇಕಡ 33, ಶೇ 30 ಮತ್ತು ಶೇ 29 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ದುರ್ಗಪ್ಪ ಗೆದ್ದಿದ್ದು 4,946 ಮತಗಳ ಅಂತರದಿಂದ. 2019 ರಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾನಪ್ಪರನ್ನು ಹಟ್ಟಿ ಚಿನ್ನದ ಗಣಿ ಸಂಸ್ಥೆಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಅಧಿಕಾರ ಕೈಗೆ ಬಂದ ಮೇಲೆ ಮಾನಪ್ಪ ಹೆಚ್ಚೆಚ್ಚು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಸುಳ್ಳಲ್ಲ.
ಹಾಲಿ ಶಾಸಕ ದುರ್ಗಪ್ಪ ಮತ್ತು ಅವರ ಕುಟುಂಬದ ಸದಸ್ಯರು ಸಹ ಕ್ಷೇತ್ರದಲ್ಲಿ ಓಡಾಡಿಕೊಂಡು ಜನರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು. ದುರ್ಗಪ್ಪ ಬಗ್ಗೆ ಜನರಿಗಿದ್ದ ದೂರೆಂದರೆ, ಅವರು ಲಿಂಗಸೂಗೂರುನಲ್ಲಿ ಮನೆ ಮಾಡದೆ ಇಲ್ಕಲ್ ನಿಂದ ಓಡಾಡಿಕೊಂಡು ಇದ್ದಿದ್ದು. ಮಧ್ಯಾಹ್ನದ ನಂತರವೇ ಅವರು ಕ್ಷೇತ್ರಕ್ಕೆ ಬರುತ್ತಿದ್ದರಿಂದ ತಮಗೆ ಬೇಕಾದ ಸಮಯದಲ್ಲಿ ಸಿಗಲ್ಲ ಅಂತ ಜನ ದೂರುತ್ತಿದ್ದರು. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಕ್ಷೇತ್ರದ ಪ್ರಮುಖ ಮುಖಂಡರನ್ನು ದುರ್ಗಪ್ಪ ಕಡೆಗಣಿಸಿದ್ದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕೇವಲ 5 ಸಾವಿರ ಮತಗಳಿಂದ ಪರಾಭವಗೊಂಡಿದ್ದ ಸಿದ್ದು ಬಂಡಿ ಕೂಡಾ ಸಂಘಟನೆಯಲ್ಲಿ ಕೆಲಸದಲ್ಲಿ ತೊಡಗಿದ್ದರು. ಆದರೆ ಅವರ ಹಿಂದೆ ಪ್ರಬಲ ಮುಖಂಡರ ನೆರವು ಹಾಗೂ ಅನುಭವದ ಕೊರತೆ ಇತ್ತು. ಚುನಾವಣೆಯಲ್ಲಿ ಹಣಬಲ ಜೋರಾಗಿ ಕೆಲಸ ಮಾಡುತ್ತಿದೆ ಎಂದು ಅಪ್ ಪಕ್ಷದ ಶಿವಪುತ್ರ ಗಣಧಾಳ್ ಆರೋಪಿಸಿದ್ದರು.
Published On - 12:40 am, Sat, 13 May 23