AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijayanagara Election Results: ವಿಜಯನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್​​ನ ಗವಿಯಪ್ಪಗೆ ಗೆಲುವು, ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಸೋಲು

Vijayanagar Assembly Election Results 2023 Live Counting Updates: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎಎಪಿಯಿಂದ ಶಂಕರದಾಸ, ಕಾಂಗ್ರೆಸ್ ಪಕ್ಷದಿಂದ ಎಚ್.ಆರ್‌.ಗವಿಯಪ್ಪ ಮತ್ತು ಬಿಜೆಪಿಯಿಂದ ಸಿದ್ದಾರ್ಥಸಿಂಗ್ ಕಣದಲ್ಲಿದ್ದಾರೆ. ಸಿದ್ದಾರ್ಥ ಸಿಂಗ್, ಆನಂದ್ ಸಿಂಗ್ ಪುತ್ರ. ಎಚ್.ಆರ್‌.ಗವಿಯಪ್ಪ ಅನುಭವಿ ರಾಜಕಾರಣಿ, ಅವರ ಹಿರಿತನದ ಮುಂದೆ ಬಿಜೆಪಿಯ ಸಿದ್ದಾರ್ಥ ಗೆಲ್ಲಲಿದ್ದಾರೆಯೇ ಎಂಬುದು ಕಾದು ನೋಡಬೇಕಿದೆ

Vijayanagara Election Results: ವಿಜಯನಗರ ವಿಧಾನಸಭಾ ಕ್ಷೇತ್ರ ಎಲೆಕ್ಷನ್ 2023 ರಿಸಲ್ಟ್: ಕಾಂಗ್ರೆಸ್​​ನ ಗವಿಯಪ್ಪಗೆ ಗೆಲುವು, ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ಸೋಲು
ಸಿದ್ದಾರ್ಥ ಸಿಂಗ್
ರಶ್ಮಿ ಕಲ್ಲಕಟ್ಟ
|

Updated on:May 13, 2023 | 12:29 PM

Share

Vijayanagara Assembly Election Results 2023: 2021 ರಲ್ಲಿ, ವಿಜಯನಗರವನ್ನು ಅಧಿಕೃತವಾಗಿ ಬಳ್ಳಾರಿಯಿಂದ ಬೇರ್ಪಡಿಸಿ ರಾಜ್ಯದ 31 ನೇ ಜಿಲ್ಲೆಯಾಗಿ ಮಾರ್ಪಡಿಸಲಾಯಿತು. ವಿಜಯನಗರವು ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಹಿಂದಿನ ರಾಜಧಾನಿಯಾದ ಹಂಪಿಯ ತವರು ಎಂದು ಕರೆಯಲ್ಪಡುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್ ಆರ್ ಗವಿಯಪ್ಪ 32 ಸಾವಿರ ಮತಗಳ ಅಂತರದಿಂದ ಗೆದ್ದಿದ್ದು , ಸಿದ್ಧಾರ್ಥ್ ಸಿಂಗ್ ಸೋಲು ಅನುಭವಿಸಿದ್ದಾರೆ.  ಈ ಕ್ಷೇತ್ರವು ಆರು ವಿಭಾಗಗಳು, ಎರಡು ಉಪವಿಭಾಗಗಳು ಮತ್ತು 18 ಗ್ರಾಮ ಸಮೂಹಗಳನ್ನು ಒಳಗೊಂಡಿದೆ. 2018ರ ಚುನಾವಣೆವರೆಗೂ ಆನಂದ್‌ ಸಿಂಗ್‌ ಈ ಕ್ಷೇತ್ರದ ಏಕಮಾತ್ರ ಶಾಸಕರಾಗಿ ಉಳಿದುಕೊಂಡಿದ್ದಾರೆ. 2008ಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆನಂದ್ ಸಿಂಗ್ (52418 ಮತ) ಕಾಂಗ್ರೆಸ್‌ನ ಎಚ್ ಆರ್ ಗವಿಯಪ್ಪ (25921ಮತ) ಎದುರು ಜಯ ಗಳಿಸಿದ್ದರು. ಇವರಿಬ್ಬರ ನಡುವಿನ ಗೆಲುವಿನ ಅಂತರ 26497 ಮತಗಳದ್ದಾಗಿತ್ತು. 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ ಕಾಂಗ್ರೆಸ್‌ನ ಎಚ್ ಅಬ್ದುಲ್ ವಹಾಬ್ ವಿರುದ್ದ ಗೆದ್ದಿದ್ದರು. 2018ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಆನಂದ್ ಸಿಂಗ್ 83214 ಮತ ಗಳಿಸಿ ಶಾಸಕರಾದರು.

2018 ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್‌ನ ಮತದಾನದ ಶೇಕಡಾವಾರು ಶೇಕಡಾ 72.47 ರಷ್ಟಿತ್ತು,. ಆನಂದ್ ಸಿಂಗ್ 83,214 ಮತಗಳನ್ನು ಪಡೆದು ಜಯಗಳಿಸಿದರೆ, ಬಿಜೆಪಿಯ ಎಚ್ ಆರ್ ಗವಿಯಪ್ಪ ಅವರು 74,986 ಮತಗಳನ್ನು ಗಳಿಸಿದರು. ಈ ಬಾರಿ ಎಎಪಿಯಿಂದ ಶಂಕರದಾಸ, ಕಾಂಗ್ರೆಸ್ ಪಕ್ಷದಿಂದ ಎಚ್.ಆರ್‌.ಗವಿಯಪ್ಪ ಮತ್ತು ಬಿಜೆಪಿಯಿಂದ ಸಿದ್ದಾರ್ಥ ಸಿಂಗ್ ಕಣದಲ್ಲಿದ್ದಾರೆ. ಸಿದ್ದಾರ್ಥ ಸಿಂಗ್, ಆನಂದ್ ಸಿಂಗ್ ಪುತ್ರ. ಎಚ್.ಆರ್‌.ಗವಿಯಪ್ಪ ಅನುಭವಿ ರಾಜಕಾರಣಿ, ಅವರ ಹಿರಿತನದ ಮುಂದೆ ಬಿಜೆಪಿಯ ಸಿದ್ದಾರ್ಥ್ ಗೆಲ್ಲಲಿದ್ದಾರೆಯೇ ಎಂಬುದು ಕಾದು ನೋಡಬೇಕಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 2:10 am, Sat, 13 May 23

ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಜುಲೈ 14 ರಂದು ಸೇತುವೆಯನ್ನು ಉದ್ಘಾಟಿಸಲಿರುವ ಕೇಂದ್ರ ಸಚಿವ ಗಡ್ಕರಿ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಹರಿಪ್ರಸಾದ್​ರ ಪಕ್ಷಕ್ಕೆ ಮಹಿಳಾ ಸಿಎಂ ಮಾಡುವ ಯೋಗ್ಯತೆ ಇಲ್ಲ: ಅಧ್ಯಕ್ಷೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಬಲಾಬಲ ಪ್ರದರ್ಶಿಸುವ ಅವಶ್ಯಕತೆ ಡಿಕೆ ಶಿವಕುಮಾರ್ ಅವರಿಗಿಲ್ಲ: ಡಿಕೆ ಸುರೇಶ್
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಪೊಲಾರ್ಡ್, ಪೂರನ್ ಸಿಡಿಲಬ್ಬರ: ಫೈನಲ್​ಗೆ MI ಪಡೆ
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಶಿವಣ್ಣನಿಗೆ ವಿಶ್ ಮಾಡಲು ಚಿಕ್ಕಮಗಳೂರಿನಿಂದ ಬಂದ ಕಾಫಿ ನಾಡು ಚಂದು
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ
ಆರೋಗ್ಯವಂತ ಬಾಣಂತಿಯರ ಹಾಲನ್ನು ಮಾತ್ರ ಸಂಗ್ರಹಿಸಲಾಗುತ್ತದೆ: ವೈದ್ಯಾಧಿಕಾರಿ