AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸರ್ಕಲ್​​ನಲ್ಲಿ ನಿಂತು ಗುಂಡು ಹೊಡೆಸಿಕೊಳ್ತೀನಿ’: ಪ್ರೇಕ್ಷಕರಿಗೆ ನಾಯಕಿ ಚಾಲೆಂಜ್

Swetha Lakshman movie: ಸಿನಿಮಾಗಳ ಪ್ರೀ ರಿಲೀಸ್ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ನಾಯಕ, ನಿರ್ದೇಶಕರುಗಳು ಪ್ರೇಕ್ಷಕರನ್ನುದ್ದೇಶಿಸಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡುವುದು, ತಮ್ಮ ಸಿನಿಮಾ ಬಗ್ಗೆ ಪ್ರಶಂಸೆ ಮಾಡುವುದು ಸಾಮಾನ್ಯ. ನಾಯಕಿಯರು ಹೆಚ್ಚೇನೂ ಮಾತನಾಡುವುದಿಲ್ಲ. ಆದರೆ ಇಲ್ಲೊಬ್ಬ ನಾಯಕಿ, ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಸವಾಲು ಹಾಕಿದ್ದಾರೆ.

‘ಸರ್ಕಲ್​​ನಲ್ಲಿ ನಿಂತು ಗುಂಡು ಹೊಡೆಸಿಕೊಳ್ತೀನಿ’: ಪ್ರೇಕ್ಷಕರಿಗೆ ನಾಯಕಿ ಚಾಲೆಂಜ್
Shweatha
ಮಂಜುನಾಥ ಸಿ.
|

Updated on: Aug 28, 2026 | 1:28 PM

Share

ಸಿನಿಮಾ (Cinema) ಪ್ರಚಾರದ ಕಾರ್ಯಕ್ರಮಗಳಲ್ಲಿ ನಾಯಕಿಯರು ನಾಯಕನ ಗುಣಗಾನ, ನಿರ್ದೇಶಕ, ನಿರ್ಮಾಪಕರ ಗುಣಗಾನ ಮಾಡಿ ವೇದಿಕೆ ಇಳಿಯುತ್ತಾರೆ, ಆದರೆ ಇಲ್ಲೊಬ್ಬ ನಾಯಕಿ ತಮ್ಮ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಗೆ ಸವಾಲು ಹಾಕಿದ್ದಾರೆ. ‘ನಮ್ಮ ಸಿನಿಮಾ ಇಷ್ಟವಾಗಲಿಲ್ಲವೆಂದರೆ ನಡು ರಸ್ತೆಯಲ್ಲಿ ನಿಂತು ಗುಂಡು ಹೊಡೆಸಿಕೊಳ್ಳುತ್ತೇನೆ’ ಎಂದಿದ್ದಾರೆ. ಅಷ್ಟಕ್ಕೂ ಯಾರು ಈ ನಟಿ? ಯಾವ ಸಿನಿಮಾದಲ್ಲಿ ನಟಿಸಿದ್ದಾರೆ? ಹಾಕಿರುವ ಸವಾಲೇನು? ಮಾಹಿತಿ ಇಲ್ಲಿದೆ…

ತೆಲುಗಿನಲ್ಲಿ, ‘ಸಹಾ’ ಹೆಸರಿನ ಸಣ್ಣ ಬಜೆಟ್​ನ ಸಿನಿಮಾ ಒಂದು ನಿರ್ಮಾಣವಾಗಿದೆ. ಸಿನಿಮಾನಲ್ಲಿ ಶ್ವೇತಾ ಲಕ್ಷ್ಮಣನ್ ನಾಯಕಿಯಾಗಿ ನಟಿಸಿದ್ದಾರೆ. ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ ಇದಾಗಿದ್ದು, ಇತ್ತೀಚೆಗಷ್ಟೆ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾವುಕರಾಗಿ ಮಾತನಾಡಿದ ನಟಿ ಶ್ವೇತಾ ಲಕ್ಷ್ಮಣನ್, ‘ನಮ್ಮ ಬಳಿ ಹಣ ಇರಲಿಲ್ಲ, ಆದರೆ ಸಿನಿಮಾದ ಮೇಲೆ ನಂಬಿಕೆ ಇತ್ತು. ಎಲ್ಲರೂ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ದಯವಿಟ್ಟು ಸಿನಮಾ ನೋಡಿ’ ಎಂದರು.

‘ಈ ಸಿನಿಮಾ ನಿಮಗೆ ಖಂಡಿತ ನಿರಾಸೆ ಮಾಡುವುದಿಲ್ಲ. ಚಿತ್ರಮಂದಿರಕ್ಕೆ ಹೋಗಿ ನೀವು ಎಂಜಾಯ್ ಮಾಡಲಿಲ್ಲವೆಂದರೆ ನಾನು ಚಾಲೆಂಜ್ ಮಾಡುತ್ತೇನೆ, ಅಮೀರ್ ಪೇಟ್ ಸರ್ಕಲ್​​ನಲ್ಲಿ ನಿಂತು ತಲೆ ಗುಂಡು ಹೊಡೆಸಿಕೊಳ್ಳುತ್ತೇನೆ’ ಎಂದಿದ್ದಾರೆ ನಟಿ. ‘ತೆಲುಗು ಪ್ರೇಕ್ಷಕರು ಒಳ್ಳೆಯ ಸಿನಿಮಾ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ನಾವು ಒಂದೊಳ್ಳೆ ಕಂಟೆಂಟ್ ತೆಗೆದುಕೊಂಡು ಬಂದಿದ್ದೇವೆ. ಒಳ್ಳೆಯ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ ಮತ್ತು ಕಡಿಮೆ ದರಕ್ಕೆ ಟಿಕೆಟ್ ಕೊಡುತ್ತಿದ್ದೇವೆ. ನಮ್ಮ ಸಿನಿಮಾ ಹಿಟ್ ಮಾಡುವುದು ನಿಮ್ಮ ಜವಾಬ್ದಾರಿ’ ಎಂದಿದ್ದಾರೆ ನಟಿ. ನಟಿ ಶ್ವೇತಾ ಅವರ ಹೇಳಿಕೆಯ ವಿಡಿಯೋ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ವಿಮರ್ಶೆ ಮಾಡಿದ ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಚಿತ್ರತಂಡ

ನಾಯಕಿ ಸುತ್ತ ಸುತ್ತುವ ಪ್ರೇಮಕತೆ ಇದಾಗಿದ್ದು, ತ್ರಿಕೋನ ಪ್ರೇಮಕತೆಯುಳ್ಳ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಶಾಲೆ, ಕಾಲೇಜು ಪ್ರೇಮಕತೆಯ ಜೊತೆಗೆ ಮದುವೆಯ ಬಳಿಕ ನಾಯಕ-ನಾಯಕಿ ದಾಂಪತ್ಯದಲ್ಲಿ ಮೂಡುವ ಬಿರುಕಿನ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಶಿಕುಮಾರ್ ಕಾಸಾರಾಮ್, ಶ್ವೇತಾ ಲಕ್ಷ್ಮಣನ್ ಜೊತೆಗೆ ವ್ರಜನ ಪಾಂಡ್ಯಾ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಶಾಂತ್ ದೋತಿ ಈ ಸಿನಿಮಾ ನಿರ್ದೇಶಿಸಿದ್ದು, ತೇಜ ವೆಲ್ಪುಚರ್ಲ ಸಿನಿಮಾದ ನಿರ್ಮಾಪಕ. ಸಿನಿಮಾ ಸೆಪ್ಟೆಂಬರ್ 4ಕ್ಕೆ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us