Adipurush Movie: ತಿರುಪತಿಯಲ್ಲಿ ‘ಆದಿಪುರುಷ್’ ಅದ್ದೂರಿ ಪ್ರೀ-ರಿಲೀಸ್ ಇವೆಂಟ್; ದಿನಾಂಕ ತಿಳಿಸಿದ ಪ್ರಭಾಸ್
‘ಆದಿಪುರುಷ್’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲು ಪ್ಲಾನ್ ಸಿದ್ಧಗೊಂಡಿದೆ.s

ಪ್ರಭಾಸ್ ನಟನೆಯ ‘ಆದಿಪುರುಷ್’ ಸಿನಿಮಾ (Adipurush Movie) ಬಗ್ಗೆ ಹೈಪ್ ಸೃಷ್ಟಿ ಆಗಿದೆ. ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದ ಈ ಚಿತ್ರಕ್ಕಾಗಿ ಪ್ರಭಾಸ್ (Prabhas) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಿನಿಮಾ ಟ್ರೋಲ್ಗಳ ಮೂಲಕ ಹೆಚ್ಚು ಸುದ್ದಿ ಆಗಿತ್ತು. ಈಗ ಸಿನಿಮಾ ಎಲ್ಲರನ್ನೂ ಸೆಳೆಯುತ್ತಿದೆ. ಈ ಚಿತ್ರಕ್ಕೆ ಭರ್ಜರಿಯಾಗಿ ಪ್ರೀ-ರಿಲೀಸ್ ಇವೆಂಟ್ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಭಾಸ್ ಮಾಹಿತಿ ಹಂಚಿಕೊಂಡಿದ್ದಾರೆ.
‘ಆದಿಪುರುಷ್’ ಚಿತ್ರಕ್ಕೆ ಭರ್ಜರಿ ಪ್ರಚಾರ ನೀಡಲಾಗುತ್ತಿದೆ. ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲು ಪ್ಲಾನ್ ಸಿದ್ಧಗೊಂಡಿದೆ. ತಿರುಪತಿಯಲ್ಲಿ ಜೂನ್ 6ರಂದು ‘ಆದಿಪುರುಷ್’ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಲಿದೆ. ಈ ದಿನಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದು, ದೊಡ್ಡ ದೊಡ್ಡ ಸ್ಟಾರ್ಗಳು ಈ ಕಾರ್ಯಕ್ರಮಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ.
‘ಆದಿಪುರುಷ್’ ಚಿತ್ರತಂಡ ಈಗಾಗಲೇ ಸಂದರ್ಶನ ನೀಡುವುದರಲ್ಲಿ ಬ್ಯುಸಿಯಾಗಿದೆ. ಈ ಸಿನಿಮಾ ರಾಮಾಯಣ ಆಧರಿಸಿ ಸಿದ್ಧಗೊಳ್ಳುತ್ತಿದೆ. ‘ಆದಿಪುರುಷ್’ ಸಿನಿಮಾ ಪ್ರಭಾಸ್ ಕೆರಿಯರ್ನಲ್ಲಿ ದೊಡ್ಡ ಚಿತ್ರ. ಈ ಸಿನಿಮಾಗಾಗಿ 550 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
Mark your calendars for June 6th as #Adipurush descends upon the sacred grounds of Tirupati for an epic pre-release event! ? ?
Prepare for an unforgettable journey into the realm of pure cinematic wonder ? ?#Adipurush #JaiShriRam #Prabhas #AdipurushPrereleaseEvent pic.twitter.com/HzI7zGma51
— Prabhas (@PrabhasRaju) May 24, 2023
ಇತ್ತೀಚೆಗೆ ‘ಆದಿಪುರುಷ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ‘ಟಿ ಸೀರೀಸ್’ನ ಭೂಷಣ್ ಕುಮಾರ್ ಅವರು ‘ಆದಿಪುರುಷ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ಮೊದಲ ದಿನ ಈ ಚಿತ್ರಕ್ಕೆ ಎಷ್ಟು ಕಲೆಕ್ಷನ್ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
ಇದನ್ನೂ ಓದಿ: ಪ್ರಭಾಸ್ ಮೇಲೆ ರೇಪ್ ಕೇಸ್ ಇದೆ, ಜೂ ಎನ್ಟಿಆರ್ ಪೋರ್ನ್ ಸಿನಿಮಾದಲ್ಲಿ ನಟಿಸಿದ್ದಾನೆ: ಸ್ಯಾಕ್ರಿಫೈಸ್ ಸ್ಟಾರ್ ಸುನಿಶ್ಚಿತ್
ಪ್ರಭಾಸ್ ಅವರು ‘ಆದಿಪುರುಷ್’ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ‘ಬಾಹುಬಲಿ 2’ ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ‘ಆದಿಪುರುಷ್’ ಚಿತ್ರ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದಲ್ಲದೇ ‘ಸಲಾರ್’, ‘ಪ್ರಾಜೆಕ್ಟ್ ಕೆ’ ಸಿನಿಮಾದ ಕೆಲಸದಲ್ಲೂ ಪ್ರಭಾಸ್ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Wed, 24 May 23




