ಅಭಿಮಾನಿಗಳ ಜೊತೆ ‘ಪುಷ್ಪ 2’ ಸಿನಿಮಾ ವೀಕ್ಷಿಸಲಿದ್ದಾರೆ ಅಲ್ಲು ಅರ್ಜುನ್; ಎಲ್ಲಿ? ಯಾವಾಗ?

ತೆಲಂಗಾಣ, ಆಂಧ್ರ ಪ್ರದೇಶ, ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 4) ರಾತ್ರಿಯಿಂದಲೇ ಶೋ ಆರಂಭ ಆಗಲಿದೆ. ಅಲ್ಲು ಅರ್ಜುನ್ ಅವರು ಹೈದರಾಬಾದ್​ನ ಐಕಾನಿಕ್ ಥಿಯೇಟರ್ ‘ಸಂಧ್ಯಾ’ಗೆ ಭೇಟಿ ನೀಡಲಿದ್ದಾರೆ. ಅವರು ಒಮ್ಮೆ ಭೇಟಿ ನೀಡಿ ಅಭಿಮಾನಿಗಳನ್ನು ಖುಷಿಪಡಿಸಲಿದ್ದಾರೆ.

ಅಭಿಮಾನಿಗಳ ಜೊತೆ ‘ಪುಷ್ಪ 2’ ಸಿನಿಮಾ ವೀಕ್ಷಿಸಲಿದ್ದಾರೆ ಅಲ್ಲು ಅರ್ಜುನ್; ಎಲ್ಲಿ? ಯಾವಾಗ?
ಅಲ್ಲು ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on: Dec 04, 2024 | 1:02 PM

ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ರಿಲೀಸ್​ಗೆ ಕ್ಷಣಗಣನೆ ಆರಂಭ ಆಗಿದೆ. ಈ ಸಿನಿಮಾಗೆ ಹಲವು ಕಡೆಗಳಲ್ಲಿ ಪ್ರೀಮಿಯರ್ ಶೋಗಳನ್ನು ಇಡಲಾಗುತ್ತಿದೆ. ಈ ವೇಳೆ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಈ ಸಿನಿಮಾನ ಅವರು ಅಭಿಮಾನಿಗಳ ಜೊತೆ ವೀಕ್ಷಣೆ ಮಾಡಲಿದ್ದಾರೆ. ಅದು ಎಲ್ಲಿ ಹಾಗೂ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ತೆಲಂಗಾಣ, ಆಂಧ್ರ ಪ್ರದೇಶ, ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 4) ರಾತ್ರಿಯಿಂದಲೇ ಶೋ ಆರಂಭ ಆಗಲಿದೆ. ಅಲ್ಲು ಅರ್ಜುನ್ ಅವರು ಹೈದರಾಬಾದ್​ನ ಐಕಾನಿಕ್ ಥಿಯೇಟರ್ ‘ಸಂಧ್ಯಾ’ಗೆ ಭೇಟಿ ನೀಡಲಿದ್ದಾರೆ. ಅವರು ಒಮ್ಮೆ ಭೇಟಿ ನೀಡಿ ಅಭಿಮಾನಿಗಳನ್ನು ಖುಷಿಪಡಿಸಲಿದ್ದಾರೆ. ಅಲ್ಲು ಅರ್ಜುನ್ ಜೊತೆ ಇನ್ನೂ ಯಾವೆಲ್ಲ ಸೆಲೆಬ್ರಿಟಿಗಳು ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಅಲ್ಲು ಅರ್ಜುನ್ ಅವರು ಎಲ್ಲಿ ಕಾಣಿಸಿಕೊಂಡರೂ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಈಗ ಅವರು ಥಿಯೇಟರ್ ಬಳಿ ಬಂದರೆ ಫ್ಯಾನ್ಸ್ ದೊಡ್ಡ ಸಂಖ್ಯೆಯಲ್ಲಿ ಬರೋದು ಪಕ್ಕಾ. ಹೀಗಾಗಿ ಅವರು ಆಗಮಿಸೋ ಸಂದರ್ಭದಲ್ಲಿ ಪೊಲೀಸ್ ಬಿಗಿ ಭದ್ರತೆ ಕೊಡಲು ನಿರ್ಧರಿಸಲಾಗಿದೆ.

ಅಲ್ಲು ಅರ್ಜುನ್ ಅವರಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ಸಿಕ್ಕಿದೆ. ‘ಪುಷ್ಪ’ ಚಿತ್ರ ಗೆದ್ದಿರುವುದರಿಂದ ‘ಪುಷ್ಪ 2’ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, 100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ನಾಗ ಚೈತನ್ಯ ಹಾಗೂ ಶೋಭಿತಾ ಮದುವೆಗೆ ಸೆಲೆಬ್ರಿಟಿಗಳ ದಂಡು; ಸಿನಿಮಾ ರಿಲೀಸ್ ಮಧ್ಯೆಯೂ ಬರ್ತಾರೆ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಜೊತೆ, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ನಟಿಸುತ್ತಿದ್ದಾರೆ. ಸುಕುಮಾರ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?