ಬೆಳಗ್ಗೆ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ

ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗುವಾಗ ನಸುಕಿನಲ್ಲೇ ಪ್ರದರ್ಶನ ಆರಂಭಿಸಲಾಗುತ್ತದೆ. ಈಗ ಹೊಸ ಬಿಗ್ ಬಜೆಟ್​ ಸಿನಿಮಾ ಕೂಡ ಇದೇ ಟ್ರೆಂಡ್​ ಪಾಲೋ ಮಾಡುತ್ತಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ನಸುಕಿನ 3 ಗಂಟೆಗೆ ಸಿನಿಮಾ ಪ್ರದರ್ಶನ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಬೆಳಗ್ಗೆ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ
ಚಿತ್ರಮಂದಿರ (ಸಾಂದರ್ಭಿಕ ಚಿತ್ರ)
Follow us
ಮದನ್​ ಕುಮಾರ್​
|

Updated on:Dec 04, 2024 | 7:43 PM

ಸ್ಟಾರ್​ ಹೀರೋಗಳ ಚಿತ್ರಗಳು ರಿಲೀಸ್​ ಆಗುವಾಗ ನಸುಕಿನಲ್ಲೇ ಪ್ರದರ್ಶನ ಶುರು ಮಾಡಲಾಗುತ್ತದೆ. ಈಗ ಹೊಸದೊಂದು ಬಿಗ್ ಬಜೆಟ್​ ಸಿನಿಮಾ ಕೂಡ ಇದೇ ಟ್ರೆಂಡ್​ ಪಾಲೋ ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ಡಿಸೆಂಬರ್​ 5ರಂದು ಬಿಡುಗಡೆ ಆಗುತ್ತಿದೆ. ಬೇಡಿಕೆ ಹೆಚ್ಚಿರುವ ಕಾರಣದಿಂದ ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ನಸುಕಿನ 3 ಗಂಟೆಗೆ  ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಅಂಥ ಚಿತ್ರಮಂದಿರಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಸಮಯ ಪಾಲನೆ ಮಾಡದೇ ಅನಧಿಕೃತವಾಗಿ ಚಲನಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಬುಕ್ ಮೈ ಶೋ ಮೂಲಕ ಬೆಳಗಿನಜಾವ 6.30ಕ್ಕೂ ಮುನ್ನ ಸಿನಿಮಾ ಪ್ರದರ್ಶನಕ್ಕೆ ಟಿಕೆಟ್​ ಮಾರಾಟ ಆಗುತ್ತಿರುವುದನ್ನು ಗಮನಿಸಿ ಕಾನೂನು ಕ್ರಮಕ್ಕೆ ಆದೇಶಿಸಲಾಗಿದೆ.

ಕರ್ನಾಟಕ ಸಿನಿಮಾ ರೆಗ್ಯುಲೇಷನ್ ಕಾಯ್ದೆಯ ನಿಮಯ 41ರ ಪ್ರಕಾರ, ಬೆಳಗ್ಗೆ 6.30ಕ್ಕೂ ಮೊದಲು ಯಾವುದೇ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡುವಂತಿಲ್ಲ. ಅಲ್ಲದೇ, ರಾತ್ರಿ 10.30ರ ನಂತರ ಯಾವುದೇ ಸಿನಿಮಾ ಪ್ರದರ್ಶನ ಆರಂಭ ಆಗುವಂತಿಲ್ಲ. ಈ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮ ಕೈಕೊಳ್ಳಲಾಗುತ್ತಿದೆ. ಇದರಿಂದ ಈ ಸಿನಿಮಾದ ಅನೇಕ ಶೋಗಳು ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಯುಐ’ ಸಿನಿಮಾ ಪ್ರಚಾರ: ಧಾರವಾಡದಲ್ಲಿ ಕಾಲೇಜು ದಿನಗಳ ನೆನಪು ಮಾಡಿಕೊಂಡ ಉಪ್ಪಿ

ಅಮೃತ್, ಅಂಜನ್, ಬಾಲಾಜಿ, ಬೃಂದಾ, ಚಂದ್ರೋದಯ, ಗೋವರ್ಧನ್, ಕಾಮಾಕ್ಯ, ಸಿನಿಫೈಲ್, ಕಿಯೋ, ಲಕ್ಷ್ಮಿ, ಮಹದೇಶ್ವರ, ಮೋಹನ್, ಪಿಎನ್​ಆರ್​, ಶ್ರೀಕೃಷ್ಣ, ವೆಂಕಟೇಶ್ವರ, ವಿ. ಸಿನಿಮಾ, ಶ್ರೀನಿವಾಸ್, ನವರಂಗ, ತಿರುಮಲ, ಸ್ವಾಗತ್, ವೈಭವ್, ಸಿದ್ದೇಶ್ವರ, ಭಾರತಿ, ರಾಧಾಕೃಷ್ಣ, ಪ್ರಸನ್ನ, ರವಿ, ವಿನಾಯಕ, ಪೂರ್ಣಿಮಾ, ರೇಣುಕಾ ಪ್ರಸನ್ನ, ವೈನಿಧಿ, ತ್ರಿವೇಣಿ, ಮುರಳಿ, ರವಿ ಡಿಜಿಟಲ್, ಪ್ರಕಾಶ್, ಶಾರದಾ, ವಿ.ಆರ್​. ಸಿನಿಮಾಸ್ ಮುಂತಾದ ಚಿತ್ರಮಂದಿರಗಳ ಮೇಲೆ ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ನಿಮಯ ಮೀರಿ ನಡೆಯುವ ಅವಧಿ ಪೂರ್ವ ಪ್ರದರ್ಶನಗಳನ್ನು ಸ್ಥಗಿತಗೊಳಿಸುವಂತೆಯೂ ಆದೇಶಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:41 pm, Wed, 4 December 24

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ಹಾಸನದಲ್ಲಿ ಜೆಡಿಎಸ್ ಪ್ರಭಾವ ಸಂಪೂರ್ಣವಾಗಿ ತಗ್ಗಿಸಲು ಕಾಂಗ್ರೆಸ್ ಹುನ್ನಾರ
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ವಿಜಯೇಂದ್ರ ತಂಡದಿಂದ ಕಲ್ಯಾಣ ಕರ್ನಾಟಕದಲ್ಲಿ ರೈತರ ಪರ ಹೋರಾಟ ಬೇಕಿತ್ತಾ?
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
ಲಕ್ಷ್ಮಿದೇವಿ ಸಮುದಾಯ ಭವನ ಉದ್ಘಾಟಿಸಿದ ಸಿದ್ದರಾಮಯ್ಯ
"ಇಸ್ಪೀಟ್ ಆಟ ಆಡಲೇಬೇಕಾ ಸರ್​"? ಪೊಲೀಸರಿಗೆ ಮಕ್ಕಳ ಪ್ರಶ್ನೆ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ಫೆಂಗಲ್ ಪರಿಣಾಮ: ಟೊಮೆಟೋಗೆ ಭಾರಿ ಬೇಡಿಕೆ, ದರವೂ ಹೆಚ್ಚಳ
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ರಜತ್ ಆಯ್ತು ಈಗ ತ್ರಿವಿಕ್ರಂಗೆ ತಲೆ ಬೋಳಿಸೋ ಚಾಲೆಂಜ್; ಒಪ್ಪಿದ್ರಾ?
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್
ವಿಜಯೇಂದ್ರ ಹೊಂದಾಣಿಕೆ ರಾಜಕಾರಣ ಮಾಡಬಾರದು: ಬಸನಗೌಡ ಯತ್ನಾಳ್