‘ಪುಷ್ಪ 2’ ವಿವಾದದ ಮಧ್ಯೆಯೇ ಅಲ್ಲು ಅರ್ಜುನ್ ದಿಟ್ಟ ನಿರ್ಧಾರ; ಐದು ವರ್ಷಗಳ ತಪಸ್ಸಿಗೆ ಬ್ರೇಕ್
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರದ ಯಶಸ್ಸಿನ ನಂತರ ಐದು ವರ್ಷಗಳ ಕಾಲ ಬೆಳೆಸಿದ್ದ ಉದ್ದ ಕೂದಲು ಮತ್ತು ಗಡ್ಡವನ್ನು ಕತ್ತರಿಸಲು ನಿರ್ಧರಿಸಿದ್ದಾರೆ. ಇದು ಅವರ ಮಗಳೊಂದಿಗಿನ ಬಾಂಧವ್ಯಕ್ಕೂ ತೊಂದರೆ ಮಾಡಿದೆ ಎಂದು ಅವರು ಹೇಳಿದ್ದರು. ಈಗ ಅವರು ಹೊಸ ಚಿತ್ರಗಳಲ್ಲಿ ಕೆಲಸ ಮಾಡಲಿದ್ದಾರೆ ಮತ್ತು ಹೊಸ ಲುಕ್ ನೊಂದಿಗೆ ಪ್ರೇಕ್ಷಕರ ಮುಂದೆ ಕಾಣಿಸಿಕೊಳ್ಳಲಿದ್ದಾರೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ ಮೂಲಕ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರದ ಗಳಿಕೆ 1,800 ಕೋಟಿ ರೂಪಾಯಿ ಆಗುತ್ತಿದೆ. ಅದೇ ರೀತಿ ‘ಪುಷ್ಪ 2’ ಸಿನಿಮಾ ವಿವಾದಗಳ ಮೂಲಕವೂ ಸುದ್ದಿ ಆಗುತ್ತಿದೆ. ಇವುಗಳ ಮಧ್ಯೆ ಅಲ್ಲು ಅರ್ಜುನ್ ಐದು ವರ್ಷಗಳ ತಪಸ್ಸಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿದೆ.
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಚಿತ್ರಕ್ಕಾಗಿ ಉದ್ದನೆಯ ಕೂದಲು ಹಾಗೂ ಗಡ್ಡ ಬಿಟ್ಟಿದ್ದರು. ಈಗ ಅಲ್ಲು ಅರ್ಜುನ್ ಬೇರೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಈ ಲುಕ್ಗೆ ಬ್ರೇಕ್ ಹಾಕಬೇಕಿದೆ. ಹೀಗಾಗಿ ಅವರು ಗಡ್ಡ ಟ್ರಿಮ್ ಮಾಡಿ, ಉದ್ದನೆಯ ಕೂದಲಿಗೆ ಕತ್ತರಿ ಪ್ರಯೋಗ ಮಾಡಲಿದ್ದಾರೆ. ಅವರು ಶೀಘ್ರವೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್ನ ಫೋಟೋ ಪೋಸ್ಟ್ ಮಾಡಲಿದ್ದಾರೆ ಎನ್ನಲಾಗಿದೆ.
ಅಲ್ಲು ಅರ್ಜುನ್ ಅವರು ಉದ್ದನೆಯ ಗಡ್ಡ ಹಾಗೂ ಕೂದಲನ್ನು ಬಿಡಲು ಸಾಕಷ್ಟು ಶ್ರಮ ಹಾಕಿದ್ದರು. ಇದು ಅವರಿಗೆ ತಪಸ್ಸಿನ ರೀತಿಯೇ ಆಗಿತ್ತು. ಉದ್ದನೆಯ ಗಡ್ಡ ಬಿಟ್ಟಾಗ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅದು ಅವರಿಗೆ ಅಭ್ಯಾಸ ಇಲ್ಲದ ಕಾರಣ ಕಿರಿಕಿರಿ ಉಂಟು ಮಾಡಿದ್ದೂ ಇದೆ. ಇದನ್ನು ಅವರು ಸಹಿಸಿಕೊಂಡಿದ್ದಾರೆ. ಈಗ ಆ ಲುಕ್ಗೆ ಅವರು ಬ್ರೇಕ್ ಹಾಕುತ್ತಿದ್ದಾರೆ.
ಇದನ್ನೂ ಓದಿ: ‘ಅವರನ್ನು ಮಾತ್ರ ಅಪರಾಧಿಯನ್ನಾಗಿ ಮಾಡುವುದು ಸರಿಯಲ್ಲ’; ಅಲ್ಲು ಅರ್ಜುನ್ ಪರ ಬ್ಯಾಟ್ ಬೀಸಿದ ಪವನ್ ಕಲ್ಯಾಣ್
ಅಲ್ಲು ಅರ್ಜುನ್ ಅವರು ಗಡ್ಡಕ್ಕೆ ಕತ್ತರಿ ಹಾಕಲೇಬೇಕಾದ ಅನಿವಾರ್ಯತೆ ಏಕಿದೆ ಎಂಬುದನ್ನು ವಿವರಿಸಿದ್ದರು. ‘ನಾನು ಗಡ್ಡ ಬಿಟ್ಟಿರುವುದರಿಂದ ನನ್ನ ಮಗಳು ನನ್ನ ಹತ್ತಿರಕ್ಕೂ ಬರುತ್ತಿಲ್ಲ. ಅವಳಿಗೆ ಸರಿಯಾಗಿ ಕಿಸ್ ಮಾಡೋಕೂ ಆಗಿಲ್ಲ. ಕಳೆದ ಕೆಲ ವರ್ಷಗಳಿಂದ ಅವಳಿಗೆ ನಾನು ಸರಿಯಾಗಿ ಮುತ್ತು ಕೊಡಲೇ ಇಲ್ಲ. ಹೀಗಾಗಿ, ಮೊದಲು ಗಡ್ಡಕ್ಕೆ ಕತ್ತರಿ ಹಾಕಬೇಕು’ ಎಂದಿದ್ದರು ಅವರು. ಈಗ ‘ಪುಷ್ಪ 2’ ಕೆಲಸಗಳು ಪೂರ್ಣ ಪ್ರಮಾಣದಲ್ಲಿ ಪೂರ್ಣಗೊಂಡಿರುವುದರಿಂದ ಅಲ್ಲು ಅರ್ಜುನ್ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.