AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ನಿರ್ದೇಶಕ ಕೇಳಿದರೆ ಬೆತ್ತಲೆಯಾಗಿ ನಟಿಸಲು ರೆಡಿ ಇದ್ದೇನೆ: ನಟಿ ಆಂಡ್ರೆಯಾ

Andrea Jeremiah: ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಆಂಡ್ರೆಯಾ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರ ಹೊಸ ಸಿನಿಮಾದ ಬಗ್ಗೆ ಕೆಲವು ಗಾಸಿಪ್​​ಗಳು ಹರಿದಾಡುತ್ತಿವೆ. ಅವರು ‘ಪಿಸಾಸು 2’ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾನಲ್ಲಿ ಬೆತ್ತಲೆ ದೃಶ್ಯಗಳು ಇವೆ ಎಂಬ ಸುದ್ದಿ ಇದೆ. ಈ ಬಗ್ಗೆ ಸ್ವತಃ ಆಂಡ್ರಿಯಾ ಮಾತನಾಡಿದ್ದಾರೆ.

ಆ ನಿರ್ದೇಶಕ ಕೇಳಿದರೆ ಬೆತ್ತಲೆಯಾಗಿ ನಟಿಸಲು ರೆಡಿ ಇದ್ದೇನೆ: ನಟಿ ಆಂಡ್ರೆಯಾ
Andrea
ಮಂಜುನಾಥ ಸಿ.
|

Updated on:Nov 27, 2025 | 6:18 PM

Share

ಆಂಡ್ರಿಯಾ ಜೆರ್ಮಿಯಾ (Andrea Jeremiah) ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು. ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಆಂಡ್ರೆಯಾ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಂಡ್ರಿಯಾ ಒಳ್ಳೆಯ ನಟಿ ಆಗಿರುವ ಜೊತೆಗೆ ಒಳ್ಳೆಯ ಗಾಯಕಿಯೂ ಸಹ ಹೌದು. ಇತ್ತೀಚೆಗೆ ಅವರ ಹೊಸ ಸಿನಿಮಾದ ಬಗ್ಗೆ ಕೆಲವು ಗಾಸಿಪ್​​ಗಳು ಹರಿದಾಡುತ್ತಿವೆ. ಅವರು ‘ಪಿಸಾಸು 2’ ಸಿನಿಮಾನಲ್ಲಿ ನಟಿಸುತ್ತಿದ್ದು, ಈ ಸಿನಿಮಾನಲ್ಲಿ ಬೆತ್ತಲೆ ದೃಶ್ಯಗಳು ಇವೆ ಎಂಬ ಸುದ್ದಿ ಇದೆ. ಈ ಬಗ್ಗೆ ಸ್ವತಃ ಆಂಡ್ರಿಯಾ ಮಾತನಾಡಿದ್ದಾರೆ.

‘ಪಿಸಾಸು’ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಮಿಸ್ಕಿನ್ ನಿರ್ದೇಶಿಸಿದ್ದರು. ಅದು ಅವರಿಗೆ ದೊಡ್ಡ ಗೆಲುವು ತಂದುಕೊಟ್ಟಿತ್ತು. ‘ಪಿಸಾಸು 2’ ಸಿನಿಮಾವನ್ನು ಅವರೇ ನಿರ್ದೇಶಿಸುತ್ತಿದ್ದು, ಆಂಡ್ರೆಯಾ ಆ ಸಿನಿಮಾದ ನಾಯಕಿ. ಸಿನಿಮಾನಲ್ಲಿ ಬೆತ್ತಲೆ ದೃಶ್ಯಗಳು ಇದ್ದು, ಬೆತ್ತಲೆ ದೃಶ್ಯಗಳಲ್ಲಿ ಆಂಡ್ರೆಯಾ ನಟಿಸಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಇತ್ತೀಚೆಗಷ್ಟೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಟಿ ಉತ್ತರಿಸಿದ್ದಾರೆ.

‘ಪಿಸಾಸು 2’ ಸಿನಿಮಾ ಚಿತ್ರಕತೆ ಬರೆಯುವ ಸಮಯದಲ್ಲಿ ಕೆಲವು ಬೆತ್ತಲೆ ದೃಶ್ಯಗಳು ಇದ್ದವು. ಆದರೆ ನಿರ್ದೇಶಕ ಮಿಸ್ಕಿನ್ ಅವರು ಅದನ್ನು ತೆಗೆದು ಹಾಕಿದ್ದಾರೆ. ಆದರೆ ಒಂದೊಮ್ಮೆ ಬೆತ್ತಲೆ ದೃಶ್ಯಗಳಲ್ಲಿ ಇದ್ದಿದ್ದರೂ ಸಹ ನಾನು ನಟಿಸುತ್ತಿದ್ದೆ. ಮಿಸ್ಕಿನ್ ಹೊಸ ನಿರ್ದೇಶಕರಲ್ಲ, ಅವರ ಬಗ್ಗೆ ನನಗೆ ಗೌರವ, ನಂಬಿಕೆ ಇದೆ. ಅವರೊಬ್ಬ ಪ್ರತಿಭಾವಂತ ನಿರ್ದೇಶಕ, ಸಿನಿಮಾಕ್ಕಾಗಿ ಬೆತ್ತಲೆ ದೃಶ್ಯದಲ್ಲಿ ನಟಿಸಬೇಕು ಎಂದಿದ್ದಾರೆ ನಾನು ಹಿಂಜರಿಯದೆ ನಟಿಸಿರುತ್ತಿದ್ದೆ’ ಎಂದಿದ್ದಾರೆ ಆಂಡ್ರೆಯಾ.

ಮುಂದುವರೆದು ಮಾತನಾಡಿರುವ ಆಂಡ್ರೆಯಾ, ‘ಪಿಸಾಸು 2’ ಸಿನಿಮಾನಲ್ಲಿ ಬೆತ್ತಲೆ ದೃಶ್ಯಗಳು ಇಲ್ಲ, ಆದರೆ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳು ಇವೆ’ ಎಂದಿದ್ದಾರೆ. ‘ಪಿಸಾಸು 2’ ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾನಲ್ಲಿ ಆಂಡ್ರೆಯಾ ಜೊತೆಗೆ ವಿಜಯ್ ಸೇತುಪತಿ, ರಾಜ್​​ಕುಮಾರ್ ಪಿಚ್ಚುಮನಿ ಅವರುಗಳು ನಟಿಸಿದ್ದಾರೆ.

ಆಂಡ್ರೆಯಾ ಅವರು, ಸೂಪರ್ ಹಿಟ್ ಸಿನಿಮಾಗಳಾದ, ‘ಆಯರತ್ತಿಲ್ ಒರುವನ್’, ‘ವಿಶ್ವರೂಪಂ’, ‘ವಡ ಚೆನ್ನೈ’, ‘ಮಂಕತ್ತ’, ಮಲಯಾಳಂನ ಸೂಪರ್ ಹಿಟ್ ಸಿನಿಮಾ, ‘ಅನ್ನಯಂ ರಸೂಲುಂ’, ‘ಉತ್ತಮ ವಿಲನ್’, ‘ಮಾಸ್ಟರ್’ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ನಿರ್ದೇಶಕ ಮಿಸ್ಕಿನ್, ‘ತುಪ್ಪರಿವಾಲನ್’, ‘ಸೈಕೊ’, ‘ಪಿಸಾಸು’, ‘ಮುಗಮುಡಿ’ ಇನ್ನೂ ಕೆಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Thu, 27 November 25