ಕನ್ನಡದ ‘ರಾ ರಾ ರಕ್ಕಮ್ಮ’ ಹಿಟ್​ ಆದ ಬೆನ್ನಲ್ಲೇ ಬರ್ತಿದೆ ತೆಲುಗಿನ ಬೇರೆ ಚಿತ್ರದ ‘ರಾ ರಾ ರೆಡ್ಡಿ’ ಹಾಡು

Anjali | Ra Ra Reddy: ಸ್ಪೆಷಲ್​ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡರೆ ನಟಿಯರ ಜನಪ್ರಿಯತೆ ಹೆಚ್ಚುತ್ತದೆ. ‘ರಾ ರಾ ರೆಡ್ಡಿ’ ಹಾಡಿನ ಮೂಲಕ ಮೋಡಿ ಮಾಡಲು ಅಂಜಲಿ ರೆಡಿ ಆಗಿದ್ದಾರೆ.

ಕನ್ನಡದ ‘ರಾ ರಾ ರಕ್ಕಮ್ಮ’ ಹಿಟ್​ ಆದ ಬೆನ್ನಲ್ಲೇ ಬರ್ತಿದೆ ತೆಲುಗಿನ ಬೇರೆ ಚಿತ್ರದ ‘ರಾ ರಾ ರೆಡ್ಡಿ’ ಹಾಡು
ಅಂಜಲಿ
TV9kannada Web Team

| Edited By: Madan Kumar

Jul 05, 2022 | 11:03 AM

ಚಿತ್ರದ ಬಿಡುಗಡೆಗೂ ಮುನ್ನವೇ ಹಾಡುಗಳು ಹಿಟ್​ ಆದರೆ ಆ ಸಿನಿಮಾ ಅರ್ಧ ಗೆ​ದ್ದಂತೆಯೇ ಸರಿ ಎಂಬುದು ಚಿತ್ರರಂಗದ ಮಂದಿಯ ಲೆಕ್ಕಾಚಾರ. ಅದಕ್ಕಾಗಿ ಪ್ರತಿ ಚಿತ್ರದ ಸಂಗೀತ ನಿರ್ದೇಶಕರು ಎಲ್ಲಿಲ್ಲದ ಕಸರತ್ತು ನಡೆಸುತ್ತಾರೆ. ಈ ವಿಚಾರದಲ್ಲಿ ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾ ಯಶಸ್ವಿ ಆಗಿದೆ. ಈ ಚಿತ್ರದ ‘ರಾ ರಾ ರಕ್ಕಮ್ಮ..’ (Ra Ra Rakkamma) ಹಾಡು ಸೂಪರ್​ ಹಿಟ್​ ಆಗಿದೆ. ಎಲ್ಲರ ಬಾಯಲ್ಲೂ ಈ ಗೀತೆ ಗುನುಗುತ್ತಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್​ ಲೋಕನಾಥ್​ ಅವರ ಕೆಲಸಕ್ಕೆ ಸೂಕ್ತ ಪ್ರತಿಫಲ ಸಿಕ್ಕಿದೆ. ಈ ಹಾಡು ಹಿಟ್​ ಆಗಿರುವ ಬೆನ್ನಲ್ಲೇ ತೆಲುಗಿನಲ್ಲಿ ಬೇರೊಂದು ಸಿನಿಮಾದಿಂದ ‘ರಾ ರಾ ರೆಡ್ಡಿ..’ (Ra Ra Reddy) ಎಂಬ ಹಾಡು ಬಿಡುಗಡೆ ಆಗುತ್ತಿದೆ. ಇದೇನು ಕಾಕತಾಳೀಯವೋ ತಿಳಿದಿಲ್ಲ.

‘ರಾ ರಾ ರಕ್ಕಮ್ಮ’ ಮತ್ತು ‘ರಾ ರಾ ರೆಡ್ಡಿ’ ಹಾಡಿನ ಟೈಟಲ್​ ನಡುವೆ ಸಾಮ್ಯತೆ ಇರುವುದರಿಂದ ಕೌತುಕ ಮೂಡಿದೆ. ನಿತಿನ್​ ಹೀರೋ ಆಗಿ ನಟಿಸಿರುವ ‘ಮಾಚೆರ್ಲಾ ನಿಯೋಜಕವರ್ಗಂ’ ಸಿನಿಮಾದ ಹಾಡು ಇದು. ನಿತಿನ್​ ಅಭಿಮಾನಿಗಳ ವಲಯದಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ. ಆ ನಿರೀಕ್ಷೆಗೆ ತಕ್ಕಂತೆಯೇ ‘ರಾ ರಾ ರೆಡ್ಡಿ..’ ಹಾಡು ಮೂಡಿಬಂದಿದೆ ಎಂಬುದರ ಝಲಕ್ ತೋರಿಸಲು ಈಗ ಪೋಸ್ಟರ್ ರಿಲೀಸ್​ ಮಾಡಲಾಗಿದೆ.

ಈ ಸಿನಿಮಾದಲ್ಲಿ ನಿತಿನ್​ ಜೊತೆ ಕೃತಿ ಶೆಟ್ಟಿ ಮತ್ತು ಕ್ಯಾಥರೀನ್​ ತ್ರೆಸಾ ನಟಿಸುತ್ತಿದ್ದಾರೆ. ಕೊನೇ ಹಾಡಿನ ಚಿತ್ರೀಕರಣ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಖ್ಯಾತ ನಟಿ ಅಂಜಲಿ ಅವರು ‘ರಾ ರಾ ರೆಡ್ಡಿ.. ಐ ಆ್ಯಮ್​ ರೆಡಿ..’ ಎಂದು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಈ ಸಾಂಗ್​ನಲ್ಲಿ ಅವರು ತುಂಬ ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ ಸಾಕ್ಷಿ ಒದಗಿಸುತ್ತಿದೆ. ಇದರ ಲಿರಿಕಲ್​ ವಿಡಿಯೋ ಜುಲೈ 9ರಂದು ಬಿಡುಗಡೆ ಆಗಲಿದೆ.

ಸ್ಪೆಷಲ್​ ಸಾಂಗ್​ನಲ್ಲಿ ಡ್ಯಾನ್ಸ್​ ಮಾಡಿದರೆ ನಟಿಯರ ಜನಪ್ರಿಯತೆ ಹೆಚ್ಚುತ್ತದೆ. ‘ಹೂ ಅಂತೀಯಾ ಮಾವ..’ ಹಾಡಿನಲ್ಲಿ ಸ್ಟೆಪ್​ ಹಾಕಿದ ಸಮಂತಾಗೆ ಭರ್ಜರಿ ಯಶಸ್ಸು ಸಿಕ್ಕಿತು. ‘ರಾ ರಾ ರಕ್ಕಮ್ಮ..’ ಹಾಡಿನಲ್ಲಿ ಡ್ಯಾನ್ಸ್​ ಮಾಡಿದ ಜಾಕ್ವೆಲಿನ್​ ಫರ್ನಾಂಡಿಸ್​ ಕೂಡ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈಗ ‘ರಾ ರಾ ರೆಡ್ಡಿ..’ ಗೀತೆಯಿಂದ ಅಂಜಲಿ ಸಹ ಅಂಥದ್ದೇ ಯಶಸ್ಸು ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​

ಇದನ್ನೂ ಓದಿ

 ‘ರಾ ರಾ ರಕ್ಕಮ್ಮ’ ಹಾಡಿಗೆ 150 ಮಕ್ಕಳಿಂದ ಮಸ್ತ್​ ಡ್ಯಾನ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada