AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anushka Shetty: ಚಿತ್ರರಂಗದಲ್ಲಿ 17 ವರ್ಷ ಪೂರೈಸಿದ ಅನುಷ್ಕಾ ಶೆಟ್ಟಿ; ಕನ್ನಡತಿಯ ಸಾಧನೆಗೆ ಪರಭಾಷೆ ಮಂದಿ ಸೆಲೆಬ್ರೇಷನ್​

ಅನುಷ್ಕಾ ಶೆಟ್ಟಿ ಅವರ 17 ವರ್ಷಗಳ ಬಣ್ಣದ ಲೋಕದ ಪಯಣವನ್ನು ಸೆಲೆಬ್ರೇಟ್​ ಮಾಡಲಾಗಿದೆ. ಆ ಕ್ಷಣದ ಫೋಟೋಗಳು ವೈರಲ್​ ಆಗಿವೆ.

Anushka Shetty: ಚಿತ್ರರಂಗದಲ್ಲಿ 17 ವರ್ಷ ಪೂರೈಸಿದ ಅನುಷ್ಕಾ ಶೆಟ್ಟಿ; ಕನ್ನಡತಿಯ ಸಾಧನೆಗೆ ಪರಭಾಷೆ ಮಂದಿ ಸೆಲೆಬ್ರೇಷನ್​
ಅನುಷ್ಕಾ ಶೆಟ್ಟಿ
TV9 Web
| Edited By: |

Updated on:Jul 21, 2022 | 5:11 PM

Share

ಚಿತ್ರರಂಗದಲ್ಲಿ ನಟಿ ಅನುಷ್ಕಾ ಶೆಟ್ಟಿ (Anushka Shetty) ಅವರ ಸಾಧನೆ ದೊಡ್ಡದು. ಹಲವು ವರ್ಷಗಳ ಕಾಲ ಅವರು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದರು. ಅವರು ಬಣ್ಣದ ಲೋಕಕ್ಕೆ ಕಾಲಿಟ್ಟು 17 ವರ್ಷ ಕಳೆದಿದೆ. ಈಗಲೂ ಅವರು ತಮ್ಮ ಚಾರ್ಮ್​ ಉಳಿಸಿಕೊಂಡಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದ್ದಾರೆ. ಅನುಷ್ಕಾ ಶೆಟ್ಟಿ ನಟಿಸಿದ ಹಲವು ಸಿನಿಮಾಗಳು (Anushka Shetty Movies) ಸೂಪರ್​ ಹಿಟ್​ ಆಗಿವೆ. ಚಿತ್ರರಂಗದಲ್ಲಿ ಅವರು 17 ವರ್ಷ ಪೂರೈಸಿರುವುದಕ್ಕೆ ಟಾಲಿವುಡ್​ (Tollywood) ಮತ್ತು ಕಾಲಿವುಡ್​ ಮಂದಿ ಸಂಭ್ರಮಿಸುತ್ತಿದ್ದಾರೆ. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ವಿಶ್​ ಮಾಡುತ್ತಿದ್ದಾರೆ. ಅನುಷ್ಕಾ ಶೆಟ್ಟಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ಅವರು ಮೂಲತಃ ಕನ್ನಡದವರು. ಅವರ ಊರು ಮಂಗಳೂರು. ಶಿಕ್ಷಣ ಪಡೆದಿದ್ದು ಬೆಂಗಳೂರಿನಲ್ಲಿ. ಆದರೆ ಅವರು ಸಿನಿಮಾ ಜರ್ನಿ ಆರಂಭಿಸಿದ್ದು ತೆಲುಗು ಚಿತ್ರರಂಗದಲ್ಲಿ. ಬಳಿಕ ತಮಿಳು ಸಿನಿಮಾಗಳಿಂದಲೂ ಅವಕಾಶ ಬಂತು. ಅಲ್ಲಿಯೂ ಅವರು ಭರ್ಜರಿ ಗೆಲುವು ಪಡೆದುಕೊಂಡರು. ಒಂದಕ್ಕಿಂತ ಒಂದು ಡಿಫರೆಂಟ್​ ಪಾತ್ರಗಳನ್ನು ಮಾಡಿರುವ ಅವರನ್ನು ಕೋಟ್ಯಂತರ ಅಭಿಮಾನಿಗಳು ಆರಾಧಿಸುತ್ತಾರೆ.

ಟಾಲಿವುಡ್​ನ ಅನೇಕ ಸ್ಟಾರ್​ ನಟರ ಜೊತೆಗೆ ಅನುಷ್ಕಾ ಶೆಟ್ಟಿ ನಟಿಸಿದ್ದಾರೆ. ನಟ ಪ್ರಭಾಸ್​ ಜೊತೆಗೆ ಅವರಿಗೆ ಹೆಚ್ಚು ಬಾಂಧವ್ಯ ಇದೆ. ‘ಮಿರ್ಚಿ’, ‘ಬಾಹುಬಲಿ’ ಮುಂತಾದ ಸಿನಿಮಾಗಳಲ್ಲಿ ಈ ಜೋಡಿಯನ್ನು ನೋಡಿ ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ರಿಯಲ್​ ಲೈಫ್​ನಲ್ಲಿಯೂ ಅವರಿಬ್ಬರು ಜೋಡಿಯಾಗಲಿ ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ‘ನಾವು ಬೆಸ್ಟ್​ ಫ್ರೆಂಡ್ಸ್​’ ಎಂದು ಹೇಳುವ ಮೂಲಕ ಎಲ್ಲ ಗಾಸಿಪ್​ಗಳಿಗೆ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್​ ಅವರು ಫುಲ್​ಸ್ಟಾಪ್​ ಹಾಕಿದ್ದರು.

ಇದನ್ನೂ ಓದಿ
Image
‘ಅರುಂಧತಿ’ ಚಿತ್ರಕ್ಕೆ 13 ವರ್ಷ; ಬಿಗ್​ ಹಿಟ್​ ಸಿಗಲು ಕಾರಣರಾದ ಎಲ್ಲರನ್ನೂ ನೆನಪಿಸಿಕೊಂಡ ಅನುಷ್ಕಾ ಶೆಟ್ಟಿ
Image
ಅನುಷ್ಕಾ ಶೆಟ್ಟಿ-ವಿಜಯ್​ ಸೇತುಪತಿ ಕಾಂಬಿನೇಷನ್​ನಲ್ಲಿ ಬರುತ್ತಿದೆ ಹೊಸ ಸಿನಿಮಾ; ನಿರ್ದೇಶನ ಯಾರದ್ದು?
Image
ಅನುಷ್ಕಾ ಶೆಟ್ಟಿ ಪಾಲಿಗೆ ಮತ್ತೆ ನಾಗವಲ್ಲಿ ಪಾತ್ರ? ಫ್ಯಾನ್ಸ್ ಕಿವಿ ಚುರುಕಾಗಿಸಿದೆ ಈ ಸುದ್ದಿ
Image
ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ

2017ರಲ್ಲಿ ತೆರೆಕಂಡ ‘ಬಾಹುಬಲಿ 2’ ಸಿನಿಮಾ ದಾಖಲೆ ಬರೆಯಿತು. ಆ ಚಿತ್ರದಿಂದ ಅನುಷ್ಕಾ ಶೆಟ್ಟಿ ಅವರ ಖ್ಯಾತಿ ಜಗದಗಲ ಹರಡಿತು. ಆದರೂ ಕೂಡ ನಂತರದ ವರ್ಷಗಳಲ್ಲಿ ಅನುಷ್ಕಾ ಹೆಚ್ಚು ಸಿನಿಮಾಗಳನ್ನು ಮಾಡಲಿಲ್ಲ. ನಟಿಸಿದ ಒಂದೆರಡು ಚಿತ್ರಗಳಿಂದಲೂ ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ಈಗ ಅವರು ಮತ್ತೆ ನಟನೆಯಲ್ಲಿ ಸಕ್ರಿಯರಾಗಿದ್ದಾರೆ. ನಟ ನವೀನ್​ ಪೊಲಿಶೆಟ್ಟಿ ಜೊತೆ ಅವರು ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್​ ಭರದಿಂದ ಸಾಗುತ್ತಿದ್ದು, ಚಿತ್ರೀಕರಣದ ಸೆಟ್​ನಲ್ಲಿ ಕೇಕ್​ ಕಟ್​ ಮಾಡಲಾಗಿದೆ. ಆ ಮೂಲಕ ಅನುಷ್ಕಾ ಶೆಟ್ಟಿ ಅವರ 17 ವರ್ಷಗಳ ಬಣ್ಣದ ಲೋಕದ ಪಯಣವನ್ನು ಸೆಲೆಬ್ರೇಟ್​ ಮಾಡಲಾಗಿದೆ. ಈ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Published On - 5:11 pm, Thu, 21 July 22

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!