BBK8 Elimination: ‘ಸೆಕೆಂಡ್ ಇನ್ನಿಂಗ್ಸ್ನಲ್ಲಿ ಔಟ್ ಆದ ಮೊದಲ ವ್ಯಕ್ತಿ ನಾನು’
ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು

‘ಕನ್ನಡ ಬಿಗ್ ಬಾಸ್ ಸೀಸನ್ 8’ ಎರಡನೇ ಇನ್ನಿಂಗ್ಸ್ನಲ್ಲಿ ಮೊದಲು ಮನೆಯಿಂದ ಹೊರ ಹೋಗುವ ಸ್ಪರ್ಧಿ ಯಾರು ಎನ್ನುವ ಪ್ರಶ್ನೆಗೆ ಕಲರ್ಸ್ ಕನ್ನಡ ವಾಹಿನಿ ಉತ್ತರ ಕೊಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಗ್ ಬಾಸ್ನ ಪ್ರೋಮೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಪ್ರಶಾಂತ್ ಸಂಬರಗಿ ಎಲಿಮಿನೇಟ್ ಆಗಿದ್ದು ಕಂಡು ಬಂದಿದೆ. ಆದರೆ, ಈವಾರದ ಎಲಿಮಿನೇಷನ್ನಲ್ಲಿ ಒಂದು ಟ್ವಿಸ್ಟ್ ಇದೆ.
ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ನಿಧಿ ಸುಬ್ಬಯ್ಯ, ಮಂಜು ಪಾವಗಡ, ದಿವ್ಯಾ ಸುರೇಶ್ ಮತ್ತು ಪ್ರಿಯಾಂಕಾ ತಿಮ್ಮೇಶ್ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಸಾಮಾನ್ಯವಾಗಿ ಶನಿವಾರದ ಎಪಿಸೋಡ್ನಲ್ಲಿ ನಾಮಿನೇಟ್ ಆದ ಕೆಲವರನ್ನು ಸೇವ್ ಮಾಡಲಾಗುತ್ತದೆ. ಆದರೆ, ಈ ಬಾರಿ ಆರೀತಿ ಆಗಿಲ್ಲ. ಎಲಿಮಿನೇಟ್ ಆದವರ ಹೆಸರನ್ನು ಭಾನುವಾರ ಹೇಳುತ್ತೇನೆ ಎಂದು ಸುದೀಪ್ ಹೇಳಿದ್ದರು.
ಈಗ ಹಂಚಿಕೊಂಡಿರುವ ಪ್ರೋಮೊದಲ್ಲಿ, ಪ್ರಶಾಂತ್ ಎಲಿಮಿನೇಟ್ ಆಗಿದ್ದಾರೆ ಎಂದು ಸುದೀಪ್ ವೇದಿಕೆ ಮೇಲೆ ಘೋಷಣೆ ಮಾಡಿದರು. ಇದಾದ ಬೆನ್ನಲ್ಲೇ, ಪ್ರಶಾಂತ್ ದೊಡ್ಮನೆಯಿಂದ ಹೊರಟರು. ‘ಎರಡನೇ ಇನ್ನಿಂಗ್ಸ್ನಲ್ಲಿ ಎಲಿಮಿನೇಟ್ ಆಗುತ್ತಿರುವ ಮೊದಲ ಸ್ಪರ್ಧಿ ನಾನೇ’ ಎಂದು ಅವರು ಬೇಸರ ಹೊರ ಹಾಕಿದರು.
ಪ್ರಶಾಂತ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಬಿಗ್ ಬಾಸ್ನ 11 ಸ್ಪರ್ಧಿಗಳಿಗೆ ಸುದೀಪ್ ಸೂಚನೆ ಒಂದನ್ನು ನೀಡಿದರು. ‘ಪ್ರಶಾಂತ್ ಈ ವಾರ ಎಲಿಮಿನೇಟ್ ಆಗಿಲ್ಲ. ಆದರೆ, ಅವರು ಬಂದ ಕೂಡಲೇ ಪ್ರಶಾಂತ್ ಕಾಣಿಸುತ್ತಿಲ್ಲ ಎಂಬ ರೀತಿಯಲ್ಲಿ ಆ್ಯಕ್ಟ್ ಮಾಡಿ’ ಎಂದು ಕಿಚ್ಚ ಸಲಹೆ ನೀಡಿದರು. ನಂತರ ಪ್ರಶಾಂತ್ ಮನೆ ಒಳಗೆ ಮತ್ತೆ ಬಂದಿದ್ದಾರೆ. ಸುದೀಪ್ ನೀಡಿದ ಸೂಚನೆಯಂತೆ ಮನೆ ಮಂದಿ ನಡೆದುಕೊಂಡಿದ್ದು, ಸಾಕಷ್ಟು ಮಜ ನೀಡಿದೆ.
View this post on Instagram
ಎಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಬಂದು ಕೆಲವೇ ದಿನ ಕಳೆದಿದೆ. ಯಾರು ಹೇಗೆ ಪರ್ಫಾರ್ಮೆನ್ಸ್ ಮಾಡುತ್ತಾರೆ ಅನ್ನೋದು ಇನ್ನು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಈ ಕಾರಣಕ್ಕೆ ಈ ವಾರ ಎಲಿಮಿನೇಷನ್ ನಡೆಯುತ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಕನ್ನಡ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಮೊದಲು ಎಲಿಮಿನೇಟ್ ಆಗೋರು ಇವರೇನಾ?
Published On - 7:26 pm, Sun, 27 June 21




