AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದೇವರು ಒಬ್ಬನೇ..’; ಮಕ್ಕಳಿಗೆ ಧರ್ಮದ ಪಾಠ ಮಾಡುವ ವಿಧಾನ ಬಿಚ್ಚಿಟ್ಟ ಸೈಫ್ ಅಲಿ ಖಾನ್

ನಟ ಸೈಫ್ ಅಲಿ ಖಾನ್ ಮತ್ತು ನಟಿ ಕರೀನಾ ಕಪೂರ್ ಖಾನ್ ಅವರು ಮಕ್ಕಳ ವಿಷಯವನ್ನು ಮುಕ್ತವಾಗಿ ಮಾತನಾಡುತ್ತಾರೆ. ಮಕ್ಕಳಿಗೆ ಅವರು ಧರ್ಮದ ಬಗ್ಗೆ ಯಾವ ರೀತಿ ತಿಳಿವಳಿಕೆ ನೀಡುತ್ತಿದ್ದಾರೆ ಎಂಬುದರ ಕುರಿತು ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ದೇವರು ಒಬ್ಬನೇ..’; ಮಕ್ಕಳಿಗೆ ಧರ್ಮದ ಪಾಠ ಮಾಡುವ ವಿಧಾನ ಬಿಚ್ಚಿಟ್ಟ ಸೈಫ್ ಅಲಿ ಖಾನ್
Saif Ali Khan Family
ಮದನ್​ ಕುಮಾರ್​
|

Updated on: Jun 29, 2026 | 4:12 PM

Share

ಮುಖ್ಯಾಂಶಗಳು

  • ಕೌಟುಂಬಿಕ ಮೌಲ್ಯಗಳ ಕುರಿತು ಮನಬಿಚ್ಚಿ ಮಾತನಾಡಿದ ನಟ ಸೈಫ್ ಅಲಿ ಖಾನ್.
  • ತಮ್ಮ ಮಕ್ಕಳಿಗೆ ಧರ್ಮದ ಬಗ್ಗೆ ಮುಕ್ತ ಮತ್ತು ಆಧ್ಯಾತ್ಮಿಕ ಮನೋಭಾವದ ಪಾಠ.
  • ‘ದೇವರು ಒಬ್ಬನೇ, ಆದರೆ ಹಲವು ಹೆಸರುಗಳಿವೆ’ ಎಂದು ಪಾಠ ಮಾಡುವ ಸೈಫ್.

ಬಾಲಿವುಡ್‌ನ ಸ್ಟಾರ್ ದಂಪತಿಗಳಾದ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರು ತಮ್ಮ ಮಕ್ಕಳಾದ ತೈಮೂರ್ (Taimur Ali Khan) ಮತ್ತು ಜೆಹ್ ಅವರನ್ನು ಎಲ್ಲ ಧರ್ಮಗಳನ್ನು ಗೌರವಿಸುವ ಮುಕ್ತ ಮನೋಭಾವದೊಂದಿಗೆ ಬೆಳೆಸುತ್ತಿದ್ದಾರೆ. ಇತ್ತೀಚೆಗೆ ನಡೆದ ‘ವಿ ವಿಮೆನ್ಸ್ ಲಂಡನ್ ಎಡಿಷನ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೈಫ್, ತಾವು ಮಕ್ಕಳಿಗೆ ಧರ್ಮದ ಬಗ್ಗೆ ಹೇಗೆ ಪಾಠ ಮಾಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ. ‘ನಾನು ನನ್ನ ಮಕ್ಕಳಿಗೆ ದೇವರು ಒಬ್ಬನೇ, ಆದರೆ ಅವನಿಗೆ ಹಲವು ಹೆಸರುಗಳಿವೆ ಅಂತ ಹೇಳಿಕೊಡುತ್ತೇನೆ. ಇದು ಅತ್ಯಂತ ಸರಳವಾದ ವಿಷಯ’ ಎಂದು ಸೈಫ್ ಅಲಿ ಖಾನ್ (Saif Ali Khan) ತಿಳಿಸಿದ್ದಾರೆ.

ಧರ್ಮದ ಕುರಿತು ಮುಂದುವರಿದು ಮಾತನಾಡಿದ ಸೈಫ್, ‘ನಾನು ವೈಯಕ್ತಿಕವಾಗಿ ಅತಿ ಹೆಚ್ಚು ಧಾರ್ಮಿಕ ಪ್ರವೃತ್ತಿಯ ವ್ಯಕ್ತಿಯೇನಲ್ಲ. ಆದರೆ ನನ್ನ ತಾಯಿ (ಶರ್ಮಿಳಾ ಟಾಗೋರ್) ನನಗೆ ಇದನ್ನೇ ಕಲಿಸಿದ್ದರು ಮತ್ತು ನಾನು ನನ್ನ ಮಕ್ಕಳಿಗೆ ಇದನ್ನೇ ಕಲಿಸುತ್ತಿದ್ದೇನೆ. ನೀವು ದೇವರನ್ನು ಬೇರೆ ಬೇರೆ ಸ್ಥಳಗಳಲ್ಲಿ ಆರಾಧಿಸಬಹುದು. ನಿಮ್ಮ ಧರ್ಮವು ಇತರೆ ಮನುಷ್ಯರ ಕಡೆಗೆ ಪ್ರೀತಿ ಮತ್ತು ಕ್ಷಮಾಪಣೆಯನ್ನು ಕಲಿಸಿದರೆ, ಅಷ್ಟೇ ಸಾಕು, ಅದೇ ನಿಜವಾದ ಧರ್ಮ’ ಎಂದಿದ್ದಾರೆ.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸೈಫ್, ತಾವು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ಬೆಳೆದಿದ್ದಾಗಿ ಮತ್ತು ಪ್ರತಿ ದಿನ ಪ್ರಾರ್ಥನೆಯೊಂದಿಗೆ ಶಾಲೆ ಆರಂಭವಾಗುತ್ತಿತ್ತು ಎಂದು ಹೇಳಿದರು. ಆ ದಿನಗಳಲ್ಲಿ ಮಕ್ಕಳು ಒಂದು ಧರ್ಮದ ಪ್ರಾರ್ಥನೆ ಮುಗಿಸಿ, ನಂತರ ಇತರ ಧರ್ಮಗಳ ಪ್ರಾರ್ಥನೆಗಳನ್ನೂ ಹೇಳುತ್ತಿದ್ದರು. ನಾವು ದೀಪಾವಳಿಯನ್ನು ಎಷ್ಟು ಸಡಗರದಿಂದ ಆಚರಿಸುತ್ತೇವೆಯೋ, ಅಷ್ಟೇ ಸಂಭ್ರಮದಿಂದ ಕ್ರಿಸ್‌ಮಸ್ ಕೂಡ ಆಚರಿಸುತ್ತೇವೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸೈಫ್ ತಮ್ಮ ಹಿರಿಯ ಮಗ ತೈಮೂರ್ ಜೊತೆ ನಡೆಸಿದ ಸಂಭಾಷಣೆಯೊಂದನ್ನು ನೆನಪಿಸಿಕೊಂಡರು. ‘ಇತ್ತೀಚೆಗೆ ನಾನು ತೈಮೂರ್‌ಗೆ ‘ಧರ್ಮ ಮತ್ತು ಮೆಥಡಾಲಜಿ ನಡುವೆ ಏನು ವ್ಯತ್ಯಾಸ ಎಂದು ಕೇಳಿದ್ದೆ. ಅದಕ್ಕೆ 9 ವರ್ಷದ ತೈಮೂರ್, ಧರ್ಮದಲ್ಲಿ ನಾವು ಪ್ರಾರ್ಥನೆ ಮಾಡುತ್ತೇವೆ, ಆದರೆ ಮೆಥಡಾಲಜಿಯಲ್ಲಿ ಪ್ರಾರ್ಥನೆ ಮಾಡುವುದಿಲ್ಲ ಅಂತ ಉತ್ತರಿಸಿದ. ಆತನ ಆ ಜಾಣ್ಮೆಯ ಉತ್ತರ ನನಗೆ ತುಂಬಾ ಇಷ್ಟವಾಯಿತು‘ ಎಂದು ಸೈಫ್ ಹೆಮ್ಮೆಯಿಂದ ಹೇಳಿದ್ದಾರೆ.

ಇದನ್ನೂ ಓದಿ: ‘ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ಹೋದ್ರೆ ಅದು ಜೀವನವೇ ಅಲ್ಲ’: ಸೈಫ್ ಅಲಿ ಖಾನ್

‘ನಮ್ಮ ಮನೆಯಲ್ಲಿ ಇಂತಹ ವಿಷಯಗಳ ಬಗ್ಗೆ ನಿರಂತರವಾಗಿ ಚರ್ಚೆಗಳು ನಡೆಯುತ್ತಿರುತ್ತವೆ. ನನ್ನ ತಾಯಿಗೂ ಈ ವಿಷಯಗಳಲ್ಲಿ ಮುಕ್ತ ಮನಸ್ಸಿತ್ತು, ನನ್ನ ಪತ್ನಿ ಕರೀನಾ ಕೂಡ ಅದೇ ಆಲೋಚನೆಯುಳ್ಳವಳು. ಹೀಗಾಗಿ ನಮ್ಮದು ಧರ್ಮಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಮನೋಭಾವದ ದಾರಿಯಾಗಿದೆ’ ಎಂದು ಸೈಫ್ ಅಲಿ ಖಾನ್ ಅವರು ತಮ್ಮ ಕುಟುಂಬದ ಮುಕ್ತ ವಾತಾವರಣದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಇಂಡಿ ಮೈತ್ರಿಕೂಟದಿಂದ ಸುಪ್ರೀಂ ಚಲೋ ಮೆರವಣಿಗೆ
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ಅಜ್ಜಿಯ ಅಂತ್ಯಕ್ರಿಯೆಗೂ ಬಿಡಲಿಲ್ಲ ಎಂದ ಸಿಜೆಪಿ ನಾಯಕರಿಗೆ ವಿಡಿಯೋ ತಿರುಗೇಟು
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ನಾಡಹಬ್ಬ ಮೈಸೂರು ದಸರಾದಲ್ಲಿ ಪ್ಲಾಸ್ಟಿಕ್, ಫ್ಲೆಕ್ಸ್​ಗೆ ಸಂಪೂರ್ಣ ಕಡಿವಾಣ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ