Asha Parekh: ನಟಿ ಆಶಾ ಪಾರೇಖ್ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ
Dada Saheb Phalke Award: ಹಿರಿಯ ನಟಿ ಆಶಾ ಪಾರೇಖ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದೆ. ಭಾರತ ಸರ್ಕಾರದ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ.
ಭಾರತೀಯ ಚಿತ್ರರಂಗದ ಹಿರಿಯ ನಟಿ ಆಶಾ ಪಾರೇಖ್ (Asha Parekh) ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಆಗಿದೆ. ಈ ವರ್ಷ ಅವರು ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಲಿದ್ದಾರೆ. ಭಾರತ ಸರ್ಕಾರದ (Central Government) ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. 2019ನೇ ಸಾಲಿನ ಪ್ರಶಸ್ತಿಯು ರಜನಿಕಾಂತ್ ಅವರಿಗೆ ಸಿಕ್ಕಿತ್ತು. 2020ನೇ ವರ್ಷದ ದಾದಾ ಸಾಹೇಬ್ ಫಾಲ್ಕೆ (Dada Saheb Phalke Award) ಪ್ರಶಸ್ತಿಯನ್ನು ಆಶಾ ಪಾರೇಖ್ ಅವರಿಗೆ ನೀಡಲಾಗುತ್ತಿದೆ. ಭಾರತೀಯ ಚಿತ್ರಕ್ಕೆ ಆಶಾ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ‘ಪದ್ಮಶ್ರೀ’, ‘ಫಿಲ್ಮ್ಫೇರ್’ ಸೇರಿದಂತೆ ಅನೇಕ ಗೌರವಗಳು ಸಂದಿವೆ. ಅವುಗಳ ಸಾಲಿಗೆ ಈಗ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸೇರ್ಪಡೆ ಆಗಿದೆ.
1952ರಲ್ಲಿ ಆಶಾ ಪಾರೇಖ್ ಅವರು ಚಿತ್ರರಂಗದಲ್ಲಿ ನಟನೆ ಆರಂಭಿಸಿದರು. ಬಾಲ ನಟಿಯಾಗಿ ಅವರು ಗುರುತಿಸಿಕೊಂಡರು. ಆಗ ಅವರನ್ನು ಬೇಬಿ ಆಶಾ ಪಾರೇಖ್ ಎಂದು ಕರೆಯಲಾಗುತ್ತಿತ್ತು. 1959ರಲ್ಲಿ ‘ದಿಲ್ ದೇಕೆ ದೇಖೋ’ ಚಿತ್ರದ ಮೂಲಕ ಹೀರೋಯಿನ್ ಆಗಿ ಬಡ್ತಿ ಪಡೆದುಕೊಂಡರು. ಆ ಸಿನಿಮಾದಲ್ಲಿ ಅವರು ಶಮ್ಮಿ ಕಪೂರ್ಗೆ ಜೋಡಿಯಾಗಿ ನಟಿಸಿದರು. ಮೊದಲ ಚಿತ್ರದಲ್ಲಿ ಭರ್ಜರಿ ಯಶಸ್ಸು ಪಡೆದುಕೊಂಡರು. ನಂತರ ಅನೇಕ ಸಿನಿಮಾಗಳಲ್ಲಿ ನಟಿಸಿ ಅವರು ಜನಮೆಚ್ಚುಗೆ ಗಳಿಸಿದರು.
Dadasaheb Phalke Award to be given to veteran actress Asha Parekh this year
(File Pic) pic.twitter.com/lGj5Kl92Oa
— ANI (@ANI) September 27, 2022
Heartiest congratulations to Asha Parekh Ji to be bestowed with the prestigious #DadaSahebPhalke Award this year.
She has been one of the most influential actors in the history of Hindi cinema touching many lives through her extraordinary acting.  pic.twitter.com/bgSSc78uUK
— Prakash Javadekar (@PrakashJavdekar) September 27, 2022
ಆಶಾ ಪಾರೇಖ್ ಅವರಿಗೆ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಸಂತಸ ತಂದಿದೆ. ಎಲ್ಲರೂ ಅವರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಆಶಾ ಪಾರೇಖ್ ನಟಿಸಿದ ಗಮನಾರ್ಹ ಸಿನಿಮಾಗಳನ್ನು ನೆನಪು ಮಾಡಿಕೊಳ್ಳಲಾಗುತ್ತಿದೆ.
1973ರವರೆಗೆ ಆಶಾ ಪಾರೇಖ್ ಅವರು ಹಿಂದಿ ಚಿತ್ರರಂಗದ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾಗಿದ್ದರು. 1992ರಲ್ಲಿ ಅವರಿಗೆ ಭಾರತ ಸರ್ಕಾರವು ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತು. ಹಿಂದಿ ಸಿನಿಮಾ ಮಾತ್ರವಲ್ಲದೇ ಪಂಜಾಬಿ ಭಾಷೆಯ ಚಿತ್ರಗಳಲ್ಲೂ ಆಶಾ ನಟಿಸಿದರು. 1999ರ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ಬಣ್ಣ ಹಚ್ಚಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:32 pm, Tue, 27 September 22