AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್

ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಅವರು ಇಂಥ ಬಟ್ಟೆಗಳನ್ನು ಹಾಕುವುದಿಲ್ಲ. ಆದರೆ ಮೊದಲ ಬಾರಿಗೆ ಅವರು ಎಡವಿದ್ದಾರೆ. ‘ಭೂತ್ ಬಂಗ್ಲ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅವರ ಬಟ್ಟೆಗಳನ್ನು ನೋಡಿ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಮಾಡಿದ ಪ್ರಯತ್ನಕ್ಕೆ ನೆಗೆಟಿವ್ ಕಮೆಂಟ್​ಗಳು ಬಂದಿವೆ.

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್
Akshay KumarImage Credit source: PTI
ಮದನ್​ ಕುಮಾರ್​
|

Updated on: Apr 07, 2026 | 8:28 PM

Share

ಬಾಲಿವುಡ್‌ ನಟ ಅಕ್ಷಯ್ ಕುಮಾರ್ (Akshay Kumar) ಅವರು ಯಾವಾಗಲೂ ತಮ್ಮ ಶಿಸ್ತು ಮತ್ತು ಸ್ಟೈಲಿಶ್ ಉಡುಗೆಯಿಂದಲೇ ಗುರುತಿಸಿಕೊಳ್ಳುವವರು. ಆದರೆ, ಇದೇ ಮೊದಲ ಬಾರಿಗೆ ಅವರ ಫ್ಯಾಷನ್ ಆಯ್ಕೆ ತಪ್ಪಾಗಿದೆ. ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಏಪ್ರಿಲ್ 6ರಂದು ‘ಭೂತ್ ಬಂಗ್ಲ’ (Bhoot Bangla) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ಸಂಪೂರ್ಣವಾಗಿ ಹರಿದ ನೀಲಿ ಶರ್ಟ್ ಧರಿಸಿದ್ದರು. ಅದರ ಮೇಲೆ ಹರಿದ ಬ್ಲೇಜರ್ ಮತ್ತು ಕುತ್ತಿಗೆಗೆ ಎರಡು ಟೈಗಳನ್ನು ಧರಿಸಿ ವೇದಿಕೆ ಏರಿದ್ದರು. ಅವರ ಈ ಲುಕ್ ನೋಡಿ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಕುಮಾರ್ ಅವರ ಈ ಅವತಾರದ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ತಮ್ಮ ಈ ವಿಚಿತ್ರ ಅವತಾರದ ಬಗ್ಗೆ ಸ್ವತಃ ಅಕ್ಷಯ್ ಕುಮಾರ್ ಅವರೇ ಆ ವೇದಿಕೆಯ ಮೇಲೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಹಾರರ್-ಕಾಮಿಡಿ ಥೀಮ್‌ಗೆ ತಕ್ಕಂತೆ ಈ ಲುಕ್ ಮಾಡಲಾಗಿದ್ದು, ‘ಈ ಬಟ್ಟೆಯನ್ನು ದೆವ್ವಗಳು ಈ ರೀತಿ ಹರಿದಿವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ, ನೆಟ್ಟಿಗರು ಮಾತ್ರ ಇವರನ್ನು ಸುಮ್ಮನೆ ಬಿಟ್ಟಿಲ್ಲ. ಮನಸ್ಸಿಗೆ ಬಂದಂತೆ ಟ್ರೋಲ್ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಈ ಹೊಸ ಫ್ಯಾಷನ್ ಪ್ರಯೋಗ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ‘ಅತಿಯಾದ ಹಣ ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತದೆ’ ಎಂದು ಒಬ್ಬರು ಟೀಕಿಸಿದ್ದಾರೆ. ‘ಇವರು ಒಬ್ಬ ಜೋಕರ್‌ ರೀತಿ ಕಾಣುತ್ತಿದ್ದಾರೆ’ ಎಂಬ ಕಮೆಂಟ್ ಕೂಡ ಬಂದಿದೆ. ‘ಬಡವರು ಹೀಗೆ ಮಾಡಿದರೆ ಚಪ್ರಿ ಅಂತಾರೆ. ಅದೇ ಶ್ರೀಮಂತರು ಹಾಕಿದರೆ ಅದು ಫ್ಯಾಷನ್’ ಎಂಬ ಟೀಕೆಗಳೂ ವ್ಯಕ್ತವಾಗಿವೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

‘ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಅವರ ಬಟ್ಟೆಯನ್ನು ಪತ್ನಿ ಟ್ವಿಂಕಲ್ ಖನ್ನಾ ಆಯ್ಕೆ ಮಾಡುತ್ತಾರೆ. ಬಹುಶಃ ಹಿಂದಿನ ರಾತ್ರಿ ಇಬ್ಬರ ನಡುವೆ ಜಗಳವಾಗಿರಬೇಕು. ಅದಕ್ಕೆ ಟ್ವಿಂಕಲ್ ಹೀಗೆ ಸೇಡು ತೀರಿಸಿಕೊಂಡಿದ್ದಾರೆ ಅನ್ನಿಸುತ್ತದೆ’ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ, ‘ಭೂತ್ ಬಂಗ್ಲ’ ಸಿನಿಮಾದ ಪ್ರಚಾರವನ್ನು ಡಿಫರೆಂಟ್ ಆಗಿ ಮಾಡಲು ಪ್ರಯತ್ನಿಸಿದ ಅಕ್ಷಯ್ ಕುಮಾರ್ ಅವರು ಈ ರೀತಿ ಟ್ರೋಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More