AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೇರಾ ಪೇರಿ’ ತಂಟೆಗೆ ಬರಬೇಡಿ, ಎಚ್ಚರಿಕೆ ಕೊಟ್ಟ ಅಕ್ಷಯ್ ಕುಮಾರ್

Akshay Kumar: ಈ ಸಿನಿಮಾದ ಮೂರನೇ ಭಾಗದ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪ್ರತಿ ಭಾರಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಮೊದಲಿಗೆ ಸಿನಿಮಾದ ಮುಖ್ಯ ಪಾತ್ರಧಾರಿ ಪರೇಶ್ ರಾವಲ್ ಸಿನಿಮಾದಿಂದ ಹೊರನಡೆದರು. ಸಿನಿಮಾದ ನಿರ್ದೇಶಕ ಪ್ರಿಯದರ್ಶನ್ ಸಹ ಸಿನಿಮಾದಿಂದ ಬೇಸರಗೊಂಡು ಹೊರನಡೆದರು. ಈಗ ಸಿನಿಮಾದ ಹಕ್ಕಿನ ವಿಷಯದಲ್ಲಿ ನಿರ್ಮಾಣ ಸಂಸ್ಥೆಗಳ ನಡುವೆ ಕಿತ್ತಾಟ ಆರಂಭವಾಗಿದೆ.

‘ಹೇರಾ ಪೇರಿ’ ತಂಟೆಗೆ ಬರಬೇಡಿ, ಎಚ್ಚರಿಕೆ ಕೊಟ್ಟ ಅಕ್ಷಯ್ ಕುಮಾರ್
Hera Pheri
ಮಂಜುನಾಥ ಸಿ.
|

Updated on: Jul 05, 2026 | 9:16 PM

Share

ಹೇರಾ ಪೇರಿ’ (Hera Peri) ಹಿಂದಿ ಚಿತ್ರರಂಗದ ಕಲ್ಟ್ ಕ್ಲಾಸಿಕ್ ಸಿನಿಮಾ ಎನಿಸಿಕೊಂಡಿದೆ. ಆ ಸಿನಿಮಾಕ್ಕೆ ಪ್ರತ್ಯೇಕ ಅಭಿಮಾನಿ ವರ್ಗವೇ ಇದೆ. ಈ ಸಿನಿಮಾದ ಎರಡು ಭಾಗ ಈಗಾಗಲೇ ಬಿಡುಗಡೆ ಆಗಿದ್ದು, ಎರಡೂ ಸಿನಿಮಾಗಳು ದೊಡ್ಡ ಹಿಟ್ ಆಗಿವೆ. ಇದೀಗ ಈ ಸಿನಿಮಾದ ಮೂರನೇ ಭಾಗದ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಪ್ರತಿ ಭಾರಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತಲೇ ಇದೆ. ಮೊದಲಿಗೆ ಸಿನಿಮಾದ ಮುಖ್ಯ ಪಾತ್ರಧಾರಿ ಪರೇಶ್ ರಾವಲ್ ಸಿನಿಮಾದಿಂದ ಹೊರನಡೆದರು. ಸಿನಿಮಾದ ನಿರ್ದೇಶಕ ಪ್ರಿಯದರ್ಶನ್ ಸಹ ಸಿನಿಮಾದಿಂದ ಬೇಸರಗೊಂಡು ಹೊರನಡೆದರು. ಈಗ ಸಿನಿಮಾದ ಹಕ್ಕಿನ ವಿಷಯದಲ್ಲಿ ನಿರ್ಮಾಣ ಸಂಸ್ಥೆಗಳ ನಡುವೆ ಕಿತ್ತಾಟ ಆರಂಭವಾಗಿದೆ.

‘ಹೇರಾ ಪೇರಿ’ ಸಿನಿಮಾ ಸರಣಿಗಳ ಮೂವರು ನಾಯಕರುಗಳಲ್ಲಿ ಒಬ್ಬರಾಗಿರುವ ಅಕ್ಷಯ್ ಕುಮಾರ್, ಅವರ ನಿರ್ಮಾಣ ಸಂಸ್ಥೆಯಾದ ಕೇಪ್ ಆಫ್ ಗುಡ್ ಫಿಲ್ಮ್ಸ್ ‘ಹೇರಾ ಫೇರಿ 3’ ಚಿತ್ರದ ಹಕ್ಕುಗಳು ತಮ್ಮ ಬಳಿ ಇರುವುದಾಗಿ ಘೋಷಿಸಿದೆ. ಈ ಕುರಿತು ಕಂಪನಿಯು ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದ್ದು, ಚಿತ್ರಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಅನಧಿಕೃತ ಹಕ್ಕುಗಳನ್ನು ಪಡೆಯದಂತೆ ಅಥವಾ ಅದರ ಹೆಸರಿನಲ್ಲಿ ಯಾವುದೇ ವಹಿವಾಟು ನಡೆಸದಂತೆ ಎಚ್ಚರಿಕೆ ನೀಡಿದೆ.

ಕಂಪನಿಯು ನೀಡಿರುವ ಸಾರ್ವಜನಿಕ ನೋಟಿಸ್‌ನಲ್ಲಿ, ‘ಹೇರಾ ಫೇರಿ 3’ ಚಿತ್ರದ ನಿರ್ಮಾಣ ಮತ್ತು ವಿತರಣೆಗೆ ಸಂಬಂಧಿಸಿದ ಸಂಪೂರ್ಣ ಮತ್ತು ವಿಶೇಷ ಹಕ್ಕುಗಳನ್ನು ತಮ್ಮ ಸಂಸ್ಥೆಯು ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಮೂರನೇ ವ್ಯಕ್ತಿಗಳು ಅಥವಾ ಸಂಸ್ಥೆಗಳು ಈ ಚಿತ್ರದ ಹಕ್ಕುಗಳನ್ನು ಹೊಂದಿದ್ದೇವೆ ಎಂದು ಸುಳ್ಳು ಹಕ್ಕು ಸಾಧಿಸುವುದರ ವಿರುದ್ಧ ಸಂಸ್ಥೆಯು ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಯಾವುದೇ ವಿತರಕರು, ಪ್ರದರ್ಶಕರು ಅಥವಾ ಸಂಬಂಧಿತ ವ್ಯಕ್ತಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ‘ಕೇಪ್ ಆಫ್ ಗುಡ್ ಫಿಲ್ಮ್ಸ್’ನಿಂದ ಪೂರ್ವಾನುಮತಿ ಪಡೆಯದೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸೂಚಿಸಲಾಗಿದೆ. ಸಂಸ್ಥೆಯು ಇಂತಹ ಅನಧಿಕೃತ ಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಲು ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯ ಯಾವುದೇ ಪ್ರಯತ್ನಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದೆ.

ಇದನ್ನೂ ಓದಿ:ಮಹಿಳಾ ಪ್ರಧಾನ ಕಥಾಹಂದರ ಇರುವ ‘ವಿದಿ’ ಸಿನಿಮಾಗೆ ಜಯಮಾಲಾ ಬೆಂಬಲ

‘ಹೇರಾ ಫೇರಿ’ ಸರಣಿಯು ಬಾಲಿವುಡ್‌ನ ಅತ್ಯಂತ ಜನಪ್ರಿಯ ಕಾಮಿಡಿ ಚಿತ್ರಗಳಲ್ಲಿ ಒಂದಾಗಿದೆ. ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅವರ ಐಕಾನಿಕ್ ಪಾತ್ರಗಳಿಗಾಗಿ ಈ ಸರಣಿ ಅಪಾರ ಅಭಿಮಾನಿಗಳನ್ನು ಹೊಂದಿದೆ. ಇತ್ತೀಚೆಗಷ್ಟೆ ಬೇರೊಂದು ನಿರ್ಮಾಣ ಸಂಸ್ಥೆಯು ‘ಹೇರಾ ಪೇರಿ 3’ ಸಿನಿಮಾ ನಿರ್ಮಾಣ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಅದರ ಬೆನ್ನಲ್ಲೆ ಇದೀಗ ಅಕ್ಷಯ್ ಕುಮಾರ್ ಅವರ ನಿರ್ಮಾಣ ಸಂಸ್ಥೆಯು ಈ ಪ್ರಕಟಣೆಯನ್ನು ಹೊರಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ಈ ಬಾರಿ ತುಂಬಿದ ಕರ್ನಾಟಕದ ಮೊದಲ ಡ್ಯಾಂನ ಭೋರ್ಗರೆತ ಹೇಗಿದೆ ನೋಡಿ
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ರೈಲಿಗೆ ಬಾಂಬ್ ಬೆದರಿಕೆ: ಪ್ರಯಾಣಿಕರನ್ನ ಕೆಳಗಿಳಿಸಿ ತಪಾಸಣೆ, ಓರ್ವ ವಶಕ್ಕೆ!
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಮನಮೋಹಕವಾಗಿ ಕಾಣುವ ಕೂಡ್ಲು ಫಾಲ್ಸ್ ಅಷ್ಟೇ ಅಪಾಯಕಾರಿ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಕೊನೆಗೂ ತುಂಬಿದ ತುಂಗಾ ಜಲಾಶಯ, ತುಂಗಭದ್ರ ನದಿ ಪಾತ್ರದಲ್ಲಿ ಸಂಭ್ರಮ
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಪಶ್ಚಿಮ ಘಟ್ಟ ಭಾಗದಲ್ಲಿ ಮಳೆ; ಮಲಪ್ರಭಾ ನದಿ ತಟದ ಮಾರುತಿ ಮಂದಿರ ಮುಳುಗಡೆ!
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮಹಾರಾಷ್ಟ್ರದದಲ್ಲಿ ಮಳೆ ಆರ್ಭಟಕ್ಕೆ ನಿಪ್ಪಾಣಿಯಲ್ಲಿ ಸೇತುವೆಗಳು ಜಲಾವೃತ
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ ಡ್ರೈವರ್!
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ವಿಎಒ ಭುವನಾ ದುರ್ಮರಣ: ಮಗಳ ಮದುವೆ ಕನಸು ಕಂಡಿದ್ದ ಕುಟುಂಬಕ್ಕೆ ಬರಸಿಡಿಲು
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!
ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು, ಧಾರಾಕಾರ ಮಳೆ: ಪ್ರವಾಸಿಗರು ಫುಲ್ ಖುಷ್!