AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘3 ಈಡಿಯಟ್ಸ್​’, ‘ಬಾಹುಬಲಿ’ಗಿಂತಲೂ ‘ಪುಷ್ಪ’ ಸಿನಿಮಾದ ಯಶಸ್ಸು ದೊಡ್ಡದು ಎಂದ ಆಮಿರ್ ಖಾನ್

ಬಾಲಿವುಡ್​ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್​ ಖಾನ್​ ಮಾತನಾಡಿದ್ದಾರೆ. ಈ ವೇಳೆ ಸಿನಿಮಾದ ಯಶಸ್ಸನ್ನು ಯಾವ ರೀತಿಯಲ್ಲಿ ಅಳೆಯಬೇಕು ಎಂಬುದನ್ನು ಅವರು ಹೇಳಿದ್ದಾರೆ.

‘3 ಈಡಿಯಟ್ಸ್​’, ‘ಬಾಹುಬಲಿ’ಗಿಂತಲೂ ‘ಪುಷ್ಪ’ ಸಿನಿಮಾದ ಯಶಸ್ಸು ದೊಡ್ಡದು ಎಂದ ಆಮಿರ್ ಖಾನ್
ಅಲ್ಲು ಅರ್ಜುನ್​-ಆಮಿರ್​ ಖಾನ್​
TV9 Web
| Edited By: |

Updated on:Jan 18, 2022 | 7:22 PM

Share

ಅಲ್ಲು ಅರ್ಜುನ್​ (Allu Arjun) ನಟನೆಯ ‘ಪುಷ್ಪ: ದಿ ರೈಸ್​’ (Pushpa: The Rise) ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾದ ಕಲೆಕ್ಷನ್​ 300 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ಚಿತ್ರ ಬ್ಲಾಕ್​ಬಸ್ಟರ್​ ಹಿಟ್​ ಎನಿಸಿಕೊಂಡಿದೆ. ಈ ಸಿನಿಮಾ ಬಾಲಿವುಡ್​ನಲ್ಲೂ ಒಳ್ಳೆಯ ಕಲೆಕ್ಷನ್​ ಮಾಡಿದೆ. ಹಿಂದಿಗೆ ಡಬ್​ ಆಗಿ ತೆರೆ ಕಂಡ ಈ ಚಿತ್ರದ ಕಲೆಕ್ಷನ್​ 100 ಕೋಟಿ ರೂಪಾಯಿ ಸಮೀಪಿಸಿದೆ. ಈ ಚಿತ್ರದ ಬಗ್ಗೆ ಆಮಿರ್​ ಖಾನ್​ (Aamir Khan) ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅಲ್ಲದೆ, ಗಳಿಕೆ ವಿಚಾರದಲ್ಲಿ ‘ಪುಷ್ಪ’ ಸಿನಿಮಾ ‘3 ಈಡಿಯಟ್ಸ್​’ ಅನ್ನೂ ಹಿಂದಿಕ್ಕಿದೆ ಎನ್ನುವ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.  

ಬಾಲಿವುಡ್​ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್​ ಖಾನ್​ ಮಾತನಾಡಿದ್ದಾರೆ. ಈ ವೇಳೆ ಸಿನಿಮಾದ ಯಶಸ್ಸನ್ನು ಯಾವ ರೀತಿಯಲ್ಲಿ ಅಳೆಯಬೇಕು ಎಂಬುದನ್ನು ಅವರು ಹೇಳಿದ್ದಾರೆ. ‘ಚಿತ್ರದ ಯಶಸ್ಸನ್ನು ಅಳೆಯಲು ವಾರಾಂತ್ಯದ ಕಲೆಕ್ಷನ್​ ಹಾಗೂ ಸಿನಿಮಾದ ಒಟ್ಟೂ ಕಲೆಕ್ಷನ್​ ನಡುವೆ ಹೋಲಿಕೆ ಮಾಡಿ ನೋಡಬೇಕು. ‘3 ಈಡಿಯಟ್ಸ್​’ ಸಿನಿಮಾ ವಾರಾಂತ್ಯದಲ್ಲಿ 40 ಕೋಟಿ ಗಳಿಕೆ ಮಾಡಿತ್ತು. ಈ ಚಿತ್ರದ ಒಟ್ಟೂ ಗಳಿಕೆ 200 ಕೋಟಿ ರೂಪಾಯಿ. ಅಂದರೆ, ವಾರಾಂತ್ಯದ ಕಲೆಕ್ಷನ್​ಗಿಂತ ಐದು ಪಟ್ಟು ಹೆಚ್ಚು ಈ ಸಿನಿಮಾ ಗಳಿಕೆ ಮಾಡಿತ್ತು. ಹೀಗಾಗಿ, ಈ ಚಿತ್ರ ಉತ್ತಮವಾಗಿದೆ ಎನ್ನಬಹುದು. ವಾರಾಂತ್ಯದಲ್ಲಿ 100 ಕೋಟಿ ಗಳಿಸಿ, ಸಿನಿಮಾದ ಒಟ್ಟೂ ಗಳಿಕೆ 200 ಕೋಟಿ ಎಂದರೆ, ಆ ಸಿನಿಮಾ ಉತ್ತಮವಾಗಿಲ್ಲ ಎಂದರ್ಥ’ ಎಂದಿದ್ದಾರೆ ಆಮಿರ್​ ಖಾನ್ .

‘ಪುಷ್ಪ ಸಿನಿಮಾ ಮೊದಲ ವಾರಾಂತ್ಯದ ಕಲೆಕ್ಷನ್​ಗಿಂತ ​7.04 ಪಟ್ಟು ಹೆಚ್ಚು ಒಟ್ಟೂ ಕಲೆಕ್ಷನ್​ ಮಾಡಿದೆ. ಈ ಫಾರ್ಮುಲಾ ವಿಚಾರದಲ್ಲಿ, ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ (6.87), ಬಾಹುಬಲಿ: ದಿ ಬಿಗಿನಿಂಗ್​ (5.31) 3 ಈಡಿಯಟ್ಸ್​ (5) ರೇಟಿಂಗ್​ ಕಡಿಮೆ. ಈ ಲೆಕ್ಕಕ್ಕೆ ಹೋಲಿಕೆ ಮಾಡಿದರೆ ಪುಷ್ಪ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಚಿತ್ರವನ್ನು ನೋಡೋಕೆ ಪ್ರೇಕ್ಷಕರು ಮತ್ತೆಮತ್ತೆ ಚಿತ್ರಮಂದಿರಕ್ಕೆ ಆಗಮಿಸಿದ್ದಾರೆ’ ಎಂದಿದ್ದಾರೆ ಆಮಿರ್​ ಖಾನ್​.

ಇದನ್ನೂ ಓದಿ: ಅಕ್ಷಯ್​ ಕುಮಾರ್​ ಮೇಲೆ ಕಣ್ಣಿಟ್ಟ ‘ಪುಷ್ಪ’ ನಿರ್ದೇಶಕ ಸುಕುಮಾರ್​; ಅಭಿಮಾನಿಗಳಲ್ಲಿ ಹೆಚ್ಚಿತು ನಿರೀಕ್ಷೆ

ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ

Published On - 6:04 pm, Tue, 18 January 22

Follow Us
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಬಿಎಸ್​ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ಜಿಬಿಎ ಚುನಾವಣೆಗೆ ಕೊನೆಗೂ ಮುಹೂರ್ತ: ಎಲೆಕ್ಷನ್​​ ಯಾವಾಗ ಗೊತ್ತಾ?
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ವಿಜಯ್​​ರನ್ನು ದೇವರೇ ಕಾಪಾಡಬೇಕು ಎಂದ ಹೆಚ್​​ಡಿಕೆ: ಕಾರಣ ಇಲ್ಲಿದೆ
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ. ಮೌಲ್ಯದ ಚಿನ್ನದ ಕಿರೀಟ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಸಲೂನ್‌ನಲ್ಲಿ ಶಿಸ್ತಿನಿಂದ ಕೇಶ ವಿನ್ಯಾಸ ಮಾಡಿಸಿಕೊಂಡ ಮಂಗ!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!
ಲಕ್ಷಾಂತರ ರೂ. ಮೌಲ್ಯದ ಚಿನ್ನ, ನಗದು ಕದ್ದು ಮನೆಗೆ ಬೆಂಕಿ ಹಚ್ಚಿದ ಕಳ್ಳರು!