AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ; ಭಾವುಕರಾದ ಹೇಮಾ ಮಾಲಿನಿ ಮಗಳು

ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪತ್ನಿ ಹೇಮಾ ಮಾಲಿನಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಕ್ಷಣವು ಇಡೀ ಕುಟುಂಬಕ್ಕೆ ಭಾವುಕ ಮತ್ತು ಹೆಮ್ಮೆಯಾಗಿತ್ತು. ಅಹಾನಾ ಡಿಯೋಲ್ ಕೂಡ ಉಪಸ್ಥಿತರಿದ್ದರು. ಧರ್ಮೇಂದ್ರ ಅವರ ಭಾರತೀಯ ಚಿತ್ರರಂಗದ ಅಪಾರ ಕೊಡುಗೆಗೆ ಇದು ಸಲ್ಲಿದ ಗೌರವ.

ಧರ್ಮೇಂದ್ರಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ; ಭಾವುಕರಾದ ಹೇಮಾ ಮಾಲಿನಿ ಮಗಳು
ಹೇಮಾ ಮಾಲಿನಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: May 26, 2026 | 8:12 AM

Share

ಬಾಲಿವುಡ್‌ನ ಹಿರಿಯ ನಟ, ‘ಹೀ-ಮ್ಯಾನ್’ ಎಂದೇ ಪ್ರಸಿದ್ಧರಾಗಿದ್ದ ಧರ್ಮೇಂದ್ರ (Dharmendra) ಅವರಿಗೆ ಮೇ 25 ರಂದು ಮರಣೋತ್ತರವಾಗಿ ದೇಶದ ಪ್ರತಿಷ್ಠಿತ ‘ಪದ್ಮವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರಪತಿ ಭವನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಧರ್ಮೇಂದ್ರ ಅವರ ಪರವಾಗಿ ಅವರ ಪತ್ನಿ, ನಟಿ ಹೇಮಾ ಮಾಲಿನಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಇಡೀ ವಾತಾವರಣವೇ ಭಾವನಾತ್ಮಕವಾಗಿತ್ತು. ಪ್ರಶಸ್ತಿ ಸ್ವೀಕರಿಸುವಾಗ ಹೇಮಾ ಮಾಲಿನಿ ಅವರ ಮುಖದಲ್ಲಿ ಪತಿಯನ್ನು ಕಳೆದುಕೊಂಡ ದುಃಖ ಹಾಗೂ ಹೆಮ್ಮೆಯ ಭಾವ ಒಟ್ಟಿಗೇ ಎದ್ದು ಕಾಣುತ್ತಿತ್ತು.

ಈ ವಿಶೇಷ ಸಮಾರಂಭದಲ್ಲಿ ಹೇಮಾ ಮಾಲಿನಿ ಅವರೊಂದಿಗೆ ಮಗಳು ಅಹಾನಾ ಡಿಯೋಲ್ ಮತ್ತು ಅಳಿಯ ವೈಭವ್ ವೋಹ್ರಾ ಉಪಸ್ಥಿತರಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ತಂದೆಗೆ ಸಿಕ್ಕ ಅತ್ಯುನ್ನತ ಗೌರವವನ್ನು ನೋಡಿದಾಗ ಅಹಾನಾ ಅವರಿಗೆ ತಮ್ಮ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಅವರ ಕಣ್ಣುಗಳು ಆನಂದಭಾಷ್ಪದಿಂದ ತುಂಬಿಬಂದವು. ಆ ವೇಳೆ ಪಕ್ಕದಲ್ಲೇ ಇದ್ದ ಪತಿ ವೈಭವ್ ವೋಹ್ರಾ ಅವರು ಪತ್ನಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಇನ್ನು ಸಮಾರಂಭದಲ್ಲಿ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದ ಹೇಮಾ ಮಾಲಿನಿ, ಅತ್ಯಂತ ಸರಳ ಹಾಗೂ ಆಕರ್ಷಕವಾಗಿ ಕಾಣಿಸುತ್ತಿದ್ದರು.

ಕಾರ್ಯಕ್ರಮ ಆರಂಭವಾಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ್ದ ಹೇಮಾ ಮಾಲಿನಿ, ‘ನಮ್ಮ ಮತ್ತೊಬ್ಬ ಪುತ್ರಿ ಇಶಾ ಡಿಯೋಲ್ ಕೂಡ ಈ ಸಮಾರಂಭದಲ್ಲಿ ಇರಬೇಕಿತ್ತು. ಆದರೆ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಅವರಿಗೆ ಬರಲು ಸಾಧ್ಯವಾಗಲಿಲ್ಲ. ಇದು ಇಡೀ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ಮತ್ತು ಅಷ್ಟೇ ಭಾವುಕ ಕ್ಷಣವಾಗಿದೆ. ಧರ್ಮೇಂದ್ರ ಅವರಿಗೆ ದೊರೆತ ಈ ಗೌರವದಿಂದ ಇಡೀ ಕುಟುಂಬ ಸಂತೋಷವಾಗಿದೆ. ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಕೂಡ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ’ ಎಂದು ಹೆಳಿದರು.

300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

ನಟ ಧರ್ಮೇಂದ್ರ ಅವರು ತಮ್ಮ ಜೀವಿತಾವಧಿಯಲ್ಲಿ ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸುಮಾರು ಆರು ದಶಕಗಳ ಸುದೀರ್ಘ ಸಿನಿ ಪಯಣದಲ್ಲಿ ಅವರು 300ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ವಿಶಿಷ್ಟ ನಟನೆ ಹಾಗೂ ಅದ್ಭುತ ವ್ಯಕ್ತಿತ್ವದಿಂದಾಗಿ ಅವರು ಕೋಟ್ಯಂತರ ಪ್ರೇಕ್ಷಕರ ಹೃದಯ ಗೆದ್ದಿದ್ದರು. ‘ಶೋಲೆ’, ‘ಫೂಲ್ ಔರ್ ಪತ್ತರ್’, ‘ಅನ್ಪದ್’, ‘ಹಕಿಕತ್’, ‘ಬಂದಿನಿ’, ‘ಸೀತಾ ಔರ್ ಗೀತಾ’, ‘ಮೇರಾ ಗಾಂವ್ ಮೇರಾ ದೇಶ್’ ಸೇರಿದಂತೆ ಅಸಂಖ್ಯಾತ ಸೂಪರ್‌ಹಿಟ್ ಚಿತ್ರಗಳ ಮೂಲಕ ಅವರು ಹಿಂದಿ ಚಿತ್ರರಂಗದ ಅಪ್ರತಿಮ ನಾಯಕನಾಗಿ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: ಧರ್ಮೇಂದ್ರ ಪರವಾಗಿ ಪದ್ಮ ವಿಭೂಷಣ ಪ್ರಶಸ್ತಿ ಸ್ವೀಕರಿಸಿದ ನಟಿ ಹೇಮಾ ಮಾಲಿನಿ

1960 ರಲ್ಲಿ ಬಿಡುಗಡೆಯಾದ ‘ದಿಲ್ ಭಿ ತೇರಾ ಹಮ್ ಭಿ ತೇರೆ’ ಚಿತ್ರದ ಮೂಲಕ ಧರ್ಮೇಂದ್ರ ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದರು. ಇನ್ನು ಅವರು ನಿಧನರಾದ ನಂತರ ತೆರೆಕಂಡ ‘ಇಕ್ಕಿಸ್’ ಅವರ ವೃತ್ತಿಜೀವನದ ಕೊನೆಯ ಸಿನಿಮಾವಾಯಿತು. ತಮ್ಮ ಬದುಕಿನ ಕೊನೆಯ ದಿನಗಳವರೆಗೂ ನಟನೆಯಲ್ಲಿ ಸಕ್ರಿಯರಾಗಿದ್ದ ಧರ್ಮೇಂದ್ರ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ, ಅವರು ನಟಿಸಿದ ಸಿನಿಮಾಗಳು ಮತ್ತು ಅವರ ನೆನಪುಗಳು ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಎಂದಿಗೂ ಶಾಶ್ವತವಾಗಿ ಉಳಿಯಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ಮೇಲಾಧಿಕಾರಿಗಳ ಕಿರುಕುಳ, ಕೆಲಸದ ಒತ್ತಡಕ್ಕೆ ಬಲಿಯಾದ್ರಾ ಮಹಿಳಾ ಅಧಿಕಾರಿ?
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಟ ದರ್ಶನ್, ವಿನಯ್ ಕುಲಕರ್ಣಿ ಭೇಟಿ ಮಾಡಿಲ್ಲ: ಪ್ರಿಯಾಂಕ್ ಖರ್ಗೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ನಾನಿನ್ನೂ ಬದುಕಿದ್ದೇನೆ; ಬಂಡಾಯ ನಾಯಕರಿಗೆ ಮಮತಾ ಬ್ಯಾನರ್ಜಿ ಎಚ್ಚರಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಪುರುಷರ ಹಕ್ಕುಗಳ ರಕ್ಷಣೆಗೆ ಹೊಸ ವೇದಿಕೆ
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಬೆಳಗಾವಿ: ಧಾರಾಕಾರ ಮಳೆಗೆ ಕುಸಿದ ಮನೆ ಗೋಡೆ; 7 ಜನರು ಜಸ್ಟ್ ಮಿಸ್​!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ಮಳೆಯಿಂದಾಗಿ ಭೂಕುಸಿತದ ಭೀತಿ: ಆಗುಂಬೆ ಘಾಟಿಯಲ್ಲಿ ಘನ ವಾಹನಗಳ ಸಂಚಾರ ಬಂದ್!
ದಾವಣಗೆರೆ: ಹಳ್ಳ ಹಿಡಿದ 'ಎಸ್ಐಆರ್' ಪ್ರಕ್ರಿಯೆ
ದಾವಣಗೆರೆ: ಹಳ್ಳ ಹಿಡಿದ 'ಎಸ್ಐಆರ್' ಪ್ರಕ್ರಿಯೆ
ರಾಮಮಂದಿರ ದೇಣಿಗೆ ಕಳ್ಳತನ; RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ರಾಮಮಂದಿರ ದೇಣಿಗೆ ಕಳ್ಳತನ; RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ಪ್ರಧಾನಿ ಮೋದಿಯಿಂದ ಜೋಧ್‌ಪುರ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟನೆ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ
ರಾಜ್ಯದಲ್ಲಿ SIR ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ: ಪ್ರಹ್ಲಾದ್​ ಜೋಶಿ