John Abraham: ಹೀರೋ ಅಂತ ಜಂಭ ತೋರಿದ್ದ ಜಾನ್ ಅಬ್ರಾಹಂ ವಿಲನ್​ ಆಗಿಬಿಟ್ರು; ಇದಕ್ಕೆ ನಟನ ಪ್ರತಿಕ್ರಿಯೆ ಏನು?

| Updated By: ಮದನ್​ ಕುಮಾರ್​

Updated on: Jul 01, 2022 | 9:55 AM

Ek Villain Returns: ಹೀರೋ ಆಗಿರುವುದು ಎಲ್ಲರಿಗೂ ಇಷ್ಟ. ಆದರೆ ಈಗ ಜಾನ್​ ಅಬ್ರಾಹಂ ವಿಲನ್​ ಆಗಿದ್ದಾರೆ. ಯಾಕೆ ಹೀಗಾಯ್ತು ಎಂಬ ಬಗ್ಗೆ ಅವರು ಮಾತನಾಡಿದ್ದಾರೆ.

John Abraham: ಹೀರೋ ಅಂತ ಜಂಭ ತೋರಿದ್ದ ಜಾನ್ ಅಬ್ರಾಹಂ ವಿಲನ್​ ಆಗಿಬಿಟ್ರು; ಇದಕ್ಕೆ ನಟನ ಪ್ರತಿಕ್ರಿಯೆ ಏನು?
ಜಾನ್ ಅಬ್ರಾಹಂ
Follow us on

ನಟ ಜಾನ್​ ಅಬ್ರಾಹಂ (John Abraham) ಅವರು ಇತ್ತೀಚಿನ ದಿನಗಳಲ್ಲಿ ಹಲವು ಕಾರಣಗಳಿಂದ ಸುದ್ದಿ ಆಗಿದ್ದಾರೆ. ದಕ್ಷಿಣದ ಸಿನಿಮಾಗಳ ಬಗ್ಗೆ, ಒಟಿಟಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅವರು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದ್ದರು. ಈಗ ಜಾನ್​ ಅಬ್ರಾಹಂ ನಟಿಸಿರುವ ‘ಏಕ್​ ವಿಲನ್​ ರಿಟರ್ನ್ಸ್​​’ (Ek Villain Returns) ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಹಿಂದಿ ಸಿನಿಪ್ರಿಯರ ವಲಯದಲ್ಲಿ ಇದು ಸಖತ್​ ಸದ್ದು ಮಾಡುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಜಾನ್​ ಅಬ್ರಾಹಂ ಅವರು ವಿಲನ್​ ಪಾತ್ರ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ‘ನಾನು ಬಾಲಿವುಡ್​ (Bollywood) ಹೀರೋ, ಪ್ರಾದೇಶಿಕ ಸಿನಿಮಾ ಮಾಡಲ್ಲ’ ಎಂದು ಜಂಭದಿಂದ ಮಾತನಾಡಿದ್ದ ಅವರು ಈಗ ವಿಲನ್​ ಪಾತ್ರಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ. ಹೀರೋ ಪಟ್ಟದಿಂದ ಕೆಳಗಿಳಿದು ವಿಲನ್​ ಆಗಿದ್ದರ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಂಬೈನಲ್ಲಿ ಅದ್ದೂರಿಯಾಗಿ ‘ಏಕ್​ ವಿಲನ್​ ರಿಟರ್ನ್ಸ್​’ ಸಿನಿಮಾದ ಟ್ರೇಲರ್​ ಲಾಂಚ್​ ಮಾಡಲಾಗಿದೆ. ಯೂಟ್ಯೂಬ್​ನಲ್ಲಿ ಈ ಟ್ರೇಲರ್​ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್​, ತಾರಾ ಸುತಾರಿಯಾ, ಜಾನ್​ ಅಬ್ರಾಹಂ, ದಿಶಾ ಪಟಾಣಿ ಮುಂತಾದವರು ನಟಿಸಿದ್ದಾರೆ. ಇದರಲ್ಲಿ ಜಾನ್ ಅಬ್ರಾಹಂ ಅವರಿಗೆ ನೆಗೆಟಿವ್​ ಪಾತ್ರ ಇದೆ. ಅದರ ಕುರಿತು ಅವರು ಟ್ರೇಲರ್​ ಲಾಂಚ್​ ವೇಳೆ ಮಾತನಾಡಿದ್ದಾರೆ.

‘ನನ್ನ ವೃತ್ತಿಜೀವನ ಆರಂಭ ಆಗಿದ್ದೇ ‘ಜಿಸ್ಮ್​’ ಸಿನಿಮಾದ ನೆಗೆಟಿವ್​ ರೋಲ್​ನಿಂದ. ಈಗ ಮತ್ತೆ ವಿಲನ್​ ಪಾತ್ರ ಮಾಡಿದ್ದಕ್ಕೆ ಖುಷಿ ಇದೆ. ಯಾವಾಗಲೂ ಹೀರೋ ಪಾತ್ರವನ್ನೇ ಮಾಡುವುದು ಬೋರಿಂಗ್​ ಎನಿಸುತ್ತದೆ. ಖಳನಟನಾಗಿ ಅಭಿನಯಿಸುವುದು ಕೂಡ ಒಳ್ಳೆಯದು’ ಎಂದು ಜಾನ್​ ಅಬ್ರಾಹಂ ಹೇಳಿದ್ದಾರೆ.

ಇದನ್ನೂ ಓದಿ
ಒನ್​ ಸೈಡ್​ ಪ್ರೇಮಿಗಳು ನೋಡ್ಲೇಬೇಕಾದ ಟ್ರೇಲರ್​ ಇದು; ಇಲ್ಲಿ ಒಳ್ಳೆಯವರು ಯಾರು? ಕೆಟ್ಟವರು ಯಾರು?
ನಾನು ಬಾಲಿವುಡ್ ಹೀರೋ, ನಾನು ಎಂದಿಗೂ ರೀಜನಲ್​ ಸಿನಿಮಾ ಮಾಡಲ್ಲ ಎಂದ ಜಾನ್​ ಅಬ್ರಾಹಂ
ಸ್ವೀಟ್​ ಕಂಡರೆ ಅತ್ತ ತಿರುಗಿಯೂ ನೋಡಲ್ಲ ಜಾನ್​ ಅಬ್ರಾಹಂ; ಅವರಿಗೆ ಇರೋ ಸಮಸ್ಯೆ ಏನು?
ವಿಡಿಯೋ ಮಾಡಿದ್ದಕ್ಕೆ ಅಭಿಮಾನಿಯ ಮೊಬೈಲ್​ ಕಸಿದುಕೊಂಡ ಜಾನ್​ ಅಬ್ರಾಹಂ; ಮುಂದೇನಾಯ್ತು?

ಪ್ರಾದೇಶಿಕ ಚಿತ್ರಗಳ ಬಗ್ಗೆ ತಾತ್ಸಾರದ ಮಾತಾಡಿದ್ದ ಜಾನ್​:

ಬಾಲಿವುಡ್​ನ ಅನೇಕ ಹೀರೋಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಶೇಷ ಪಾತ್ರಗಳನ್ನು ಮಾಡುವುದು ಟ್ರೆಂಡ್​ ಆಗಿದೆ. ಆದರೆ ಈ ವಿಚಾರದಲ್ಲಿ ಜಾನ್​ ಅಬ್ರಾಹಂ ನಿಲುವು ಬೇರೆ. ‘ನಾನು ಬಾಲಿವುಡ್​ ಹೀರೋ. ಪ್ರಾದೇಶಿಕ ಸಿನಿಮಾಗಳನ್ನು ಮಾಡುವುದಿಲ್ಲ’ ಎಂದು ಅವರು ಹೇಳಿದ್ದರು. ಅದೇ ರೀತಿ, ಒಟಿಟಿ ಬಗ್ಗೆಯೂ ಅವರು ಹಗುರವಾಗಿ ಮಾತನಾಡಿದ್ದರು.

‘ನಾನು ಬಿಗ್​ ಸ್ಕ್ರೀನ್​ ಹೀರೋ. ಅಲ್ಲಿಯೇ ನಾನು ಕಾಣಿಸಿಕೊಳ್ಳಲು ಬಯಸುತ್ತೇನೆ. ಈ ಸಂದರ್ಭದಲ್ಲಿ ನಾನು ದೊಡ್ಡ ಪರದೆಗಾಗಿಯೇ ಸಿನಿಮಾಗಳನ್ನು ಮಾಡುತ್ತೇನೆ. ಟ್ಯಾಬ್ಲೆಟ್​ನಲ್ಲಿ ಯಾರಾದರೂ ನನ್ನ ಸಿನಿಮಾ ನೋಡುತ್ತಾ ಅರ್ಧಕ್ಕೆ ನಿಲ್ಲಿಸಿ ವಾಶ್​ರೂಮ್​ಗೆ ಹೋದರೆ ನನಗೆ ಅವಮಾನ ಆದಂತೆ ಅನಿಸುತ್ತದೆ. 299 ಅಥವಾ 499 ರೂಪಾಯಿಗೆ ಒಟಿಟಿಯಲ್ಲಿ ಲಭ್ಯವಾಗಲು ನನಗೆ ಇಷ್ಟವಿಲ್ಲ. ಅದರಲ್ಲಿ ನನಗೆ ಸಮಸ್ಯೆ ಇದೆ’ ಎಂದು ಜಾನ್​ ಅಬ್ರಾಹಂ ಹೇಳಿದ್ದರು.

ಇದನ್ನೂ ಓದಿ: ‘ನಾನು ಹಿಂದಿ ಹೀರೋ’ ಎಂದು ಗರ್ವ ತೋರಿಸಿ ಸೋತ ಜಾನ್​ ಅಬ್ರಾಹಂ ಸಿನಿಮಾಗೆ ಈಗ ಒಟಿಟಿ ಮಾತ್ರ ಗತಿ

ಸೌತ್​ ಸಿನಿಮಾ ಬಗ್ಗೆ ಹಗುರಾಗಿ ಮಾತಾಡಿದ್ದ ಜಾನ್​ ಅಬ್ರಾಹಂ; ‘ಆರ್​ಆರ್​ಆರ್​’ ಎದುರಲ್ಲಿ ಹೀನಾಯ ಸೋಲು