AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

200 ಕೋಟಿ ದಾಟಿದ ‘ಹನುಮಾನ್ ಅಂಶ್’ ಗಳಿಕೆ, 100 ಪಟ್ಟು ಲಾಭ

ಅಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳ ಆಧಾರಿತ ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಗಳ ಗಡಿಯನ್ನು ದಾಟಿದೆ. ಕೇವಲ 2 ಕೋಟಿ ಬಜೆಟ್​ನ ಸಿನಿಮಾ ಇದಾಗಿದ್ದು, 200 ಕೋಟಿ ಗಳಿಕೆಯಿಂದಾಗಿ ಸಿನಿಮಾ ಈಗಾಗಲೇ ತನ್ನ ಬಜೆಟ್​​ನ 100 ಪಟ್ಟು ಗಳಿಕೆ ಮಾಡಿದಂತಾಗಿದೆ. ಆ ಮೂಲಕ ಭಾರತದ ಈ ವರ್ಷದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.

200 ಕೋಟಿ ದಾಟಿದ ‘ಹನುಮಾನ್ ಅಂಶ್’ ಗಳಿಕೆ, 100 ಪಟ್ಟು ಲಾಭ
Hanuman Ansh1
ಮಂಜುನಾಥ ಸಿ.
|

Updated on:Sep 12, 2026 | 5:36 PM

Share

ಮುಖ್ಯಾಂಶಗಳು

  • ಹನುಮಾನ್ ಅಂಶ್ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ.
  • ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿ ಗಳಿಸಿದೆ ಹನುಮಾನ್ ಅಂಶ್
  • ಹೊಸ ದಾಖಲೆ ಬರೆದಿದೆ ಹನುಮಾನ್ ಅಂಶ್ ಸಿನಿಮಾ

‘ಹನುಮಾನ್ ಅಂಶ್’ ಅತ್ಯಂತ ಸಣ್ಣ ಬಜೆಟ್​​ನ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅದ್ವಿತೀಯ ದಾಖಲೆಗಳನ್ನು ಬರೆಯುತ್ತಿದೆ. ಕೇವಲ 2 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆದ ಈ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿ ಗಳಿಕೆ ದಾಟಿದ್ದು, 500 ಕೋಟಿಯತ್ತ ಮುನ್ನುಗ್ಗುತ್ತಿದೆ. ‘ಹನುಮಾನ್ ಅಂಶ್’ ಸಿನಿಮಾ, ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ದಾಖಲೆಯನ್ನೂ ಸಹ ಅಳಿಸಿ ಮುನ್ನುಗ್ಗುತ್ತಿದ್ದು, ಈ ವರ್ಷದ ಈ ವರೆಗಿನ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.

ಅಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳ ಆಧಾರಿತ ಭಕ್ತಿಪ್ರಧಾನ ಚಿತ್ರ ‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂ. ಗಳ ಗಡಿಯನ್ನು ದಾಟಿದೆ. ಕೇವಲ 2 ಕೋಟಿ ಬಜೆಟ್​ನ ಸಿನಿಮಾ ಇದಾಗಿದ್ದು, 200 ಕೋಟಿ ಗಳಿಕೆಯಿಂದಾಗಿ ಸಿನಿಮಾ ಈಗಾಗಲೇ ತನ್ನ ಬಜೆಟ್​​ನ 100 ಪಟ್ಟು ಗಳಿಕೆ ಮಾಡಿದಂತಾಗಿದೆ. ಆ ಮೂಲಕ ಭಾರತದ ಈ ವರ್ಷದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.

‘ಹನುಮಾನ್ ಅಂಶ್’ ಚಿತ್ರವು ಬಿಡುಗಡೆಯಾದ ದಿನ ಕೇವಲ 10 ಲಕ್ಷ ರೂ.ಗಳನ್ನು ಮಾತ್ರ ಗಳಿಸಿತ್ತು. ಆ ಮೂಲಕ ಅತ್ಯಂತ ನಿರಾಶಾದಾಯಕ ಆರಂಭವನ್ನು ಕಂಡಿತ್ತು. ಮೊದಲ ಎರಡು ವಾರಗಳಲ್ಲಿ ಈ ಚಿತ್ರದ ಒಟ್ಟು ನಿವ್ವಳ ಗಳಿಕೆ ಕೇವಲ 1.48 ಕೋಟಿ ರೂ.ಗಳಷ್ಟಿತ್ತು. ಆದರೆ ಆ ಬಳಿಕ ಸಿನಿಮಾ ನೋಡಿದ ಜನ, ಖುದ್ದು ತಾವೇ ಸಿನಿಮಾದ ಬಗ್ಗೆ ಪ್ರಚಾರ ಮಾಡಲು ಆರಂಭಿಸಿದರು. ಇದರಿಂದ ಸಿನಿಮಾ ಬಿಡುಗಡೆಯಾದ 16ನೇ ದಿನದಂದು ಚಿತ್ರದ ಗಳಿಕೆಯಲ್ಲಿ ಭಾರಿ ಜಿಗಿತ ಕಂಡುಬಂದಿತು. ಬಾಕ್ಸ್ ಆಫೀಸ್‌ನಲ್ಲಿ ಮೂರು, ನಾಲ್ಕು ಮತ್ತು ಐದನೇ ವಾರಗಳಲ್ಲಿ ಈ ಚಿತ್ರವು ದಾಖಲೆ ಪ್ರಮಾಣದ ಗಳಿಕೆ ಮಾಡಿತು. ನಾಲ್ಕನೇ ವಾರದಲ್ಲಿ 61 ಕೋಟಿ ರೂ. ಹಾಗೂ ಐದನೇ ವಾರದಲ್ಲಿ 90 ಕೋಟಿ ರೂ.ಗಳನ್ನು ಬಾಚಿಕೊಂಡಿತು. ಈ ಯಶಸ್ಸಿನ ಓಟವು ಆರನೇ ವಾರಾಂತ್ಯದಲ್ಲೂ ಮುಂದುವರಿದು, ಥಿಯೇಟರ್‌ಗಳಲ್ಲಿ ತನ್ನ 36ನೇ ದಿನವಾದ ಶುಕ್ರವಾರದಂದು ಚಿತ್ರವು 10.50 ಕೋಟಿ ರೂ. ನಿವ್ವಳ ಗಳಿಕೆ ಮಾಡಿತು. ಇದರೊಂದಿಗೆ ಇದರ ದೇಶೀಯ ನಿವ್ವಳ ಗಳಿಕೆ 174 ಕೋಟಿ ರೂ.ಗಳಿಗೆ ತಲುಪಿದೆ.

ಇದನ್ನೂ ಓದಿ:‘ಹನುಮಾನ್ ಅಂಶ್’ ಸಿನಿಮಾದ ಅಭೂತಪೂರ್ವ ಯಶಸ್ಸಿಗೆ ಹೇಮಾ ಮಾಲಿನಿ ಸಂತಸ

ಈ ಚಿತ್ರ ಇದೀಗ ವಿದೇಶದಲ್ಲೂ ಸಹ ಬಿಡುಗಡೆ ಆಗಿದೆ. ಆ ಮೂಲಕ ಸಿನಿಮಾದ ಗಳಿಕೆಯಲ್ಲಿ ದೊಡ್ಡ ಮಟ್ಟದ ಏರಿಕೆ ಆಗುವುದು ಖಾತ್ರಿ ಆಗಿದೆ. ಸಿನಿಮಾ ಈಗಾಗಲೇ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 205 ಕೋಟಿಗೂ ಅಧಿಕ ಮೊತ್ತ ಗಳಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಸಿನಿಮಾದ ಗಳಿಕೆ ಇನ್ನೂ ಹೆಚ್ಚಾಗುವುದು ಖಾತ್ರಿ ಎನ್ನಲಾಗುತ್ತಿದೆ.

ವಿಶಾಲ್ ಚತುರ್ವೇದಿ ಬರೆದು ನಿರ್ದೇಶಿಸಿರುವ ‘ಹನುಮಾನ್ ಅಂಶ್’ ಚಿತ್ರವು, ತನ್ನ ತಾಯಿಯ ಮರಣದ ನಂತರ ದೇವರನ್ನು ಹುಡುಕುತ್ತಾ ಆಧ್ಯಾತ್ಮಿಕ ಪಯಣ ಬೆಳೆಸುವ ಯುವಕ ಲಕ್ಷ್ಮೀನಾರಾಯಣನ (ನೀಮ್ ಕರೋಲಿ ಬಾಬಾ) ಕಥೆಯನ್ನು ಹೊಂದಿದೆ. ಜೀವನ, ಸಾವು ಮತ್ತು ಮಾನವನ ನೋವುಗಳಿಗೆ ಉತ್ತರ ಹುಡುಕುತ್ತಾ ಆತ ಉತ್ತರ ಭಾರತದಾದ್ಯಂತ ಪ್ರಯಾಣ ಬೆಳೆಸುತ್ತಾನೆ ಮತ್ತು ಅಂತಿಮವಾಗಿ ಪೂಜ್ಯ ಸಂತ ನೀಮ್ ಕರೋಲಿ ಬಾಬಾ ಆಗಿ ಬದಲಾಗುತ್ತಾನೆ. ಈ ಚಿತ್ರದಲ್ಲಿ ಶೋಭಿನವ್ ಸತ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅವರೊಂದಿಗೆ ವಿಹಾನ್ ಶೆಡ್ಗೆ, ಚಂದನ್ ಕೆ ಆನಂದ್, ಪೂರ್ಣಿಮಾ ತಿವಾರಿ, ಅನಿಲ್ ರಸ್ತೋಗಿ, ಗುಲ್ಶನ್ ಪಾಂಡೆ ಮತ್ತು ಭಾಗ್ವಾನ್ ದಾಸ್ ಪಟೇಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:34 pm, Sat, 12 September 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!