Kangana Ranaut: ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?

Sonu Sood: ‘ಈತ ಎಂಥ ಫ್ರಾಡ್. ಈ ದುಸ್ಥಿತಿಯನ್ನು ಹಣ ಮಾಡಲು ಬಳಸಿಕೊಂಡಿದ್ದಾನೆ. ಆಕ್ಸಿಜನ್​ ಕಾನ್ಸಂಟ್ರೇಟರ್​ ಮಷಿನ್ ಬೆಲೆ 2 ಲಕ್ಷ ರೂಪಾಯಿ’ ಎಂದು ಟ್ವೀಟ್​ ಮಾಡಲಾಗಿದೆ.

  • TV9 Web Team
  • Published On - 13:01 PM, 4 May 2021
Kangana Ranaut: ಸೋನು ಸೂದ್​ಗೆ ಫ್ರಾಡ್​ ಎಂದ ಕಂಗನಾ; ಈ ಸಮಯದಲ್ಲಿ ದುಡ್ಡು ಮಾಡ್ತಿದ್ದಾರಾ ರಿಯಲ್​ ಹೀರೋ?
ಕಂಗನಾ ರಣಾವತ್​ - ಸೋನು ಸೂದ್​

ನಟ ಸೋನು ಸೂದ್​ ಅವರ ಸಮಾಜ ಸೇವೆ ಬಗ್ಗೆ ಹೊಸದಾಗಿ ಹೇಳಬೇಕಾದ್ದು ಏನೂ ಇಲ್ಲ. ಕಳೆದ ವರ್ಷ ಲಾಕ್​ಡೌನ್​ ಕಾಲದಿಂದಲೂ ಅವರು ಜನ ಸೇವೆಗಾಗಿ ಪಣ ತೊಟ್ಟಿದ್ದಾರೆ. ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ಅವರ ಈ ಕಾರ್ಯ ಮುಂದುವರೆಯುತ್ತಿದೆ. ಸೋನು ಸೂದ್​ ಅವರನ್ನು ಎಷ್ಟೋ ಜನರು ದೇವರು ಎಂದೇ ಪೂಜಿಸುತ್ತಿದ್ದಾರೆ! ಆದರೆ ಅಂಥ ನಟನನ್ನು ಕಂಗನಾ ಈಗ ಫ್ರಾಡ್​ ಎಂದು ಕರೆದಿದ್ದಾರೆ.

ಬಾಲಿವುಡ್​ ಮಾತ್ರವಲ್ಲದೆ ದಕ್ಷಿಣ ಭಾರತದ ಭಾಷೆಯ ಸಿನಿಮಾಗಳಲ್ಲೂ ಫೇಮಸ್​ ಆಗಿರುವ ಸೋನು ಸೂದ್​ ಅವರು ಹಲವು ಕಂಪನಿಗಳಿಗೆ ರಾಯಬಾರಿ ಆಗಿದ್ದಾರೆ. ಅದೇ ರೀತಿ ಆಕ್ಸಿಜನ್​ ಕಾನ್ಸಂಟ್ರೇಟರ್​ ಮಷಿನ್​ಗಳ ಒಂದು ಕಂಪನಿಗೂ ಅವರು ರಾಯಬಾರಿ. ಅದರ ಒಂದು ಜಾಹೀರಾತಿನ ಚಿತ್ರವನ್ನು ಬಳಸಿಕೊಂಡು ಟ್ವಿಟರ್​ ಬಳಕೆದಾರರೊಬ್ಬರು ಟ್ರೋಲ್​ ಮಾಡಿದ್ದಾರೆ.

‘ಈತ ಎಂಥ ಫ್ರಾಡ್. ಈ ದುಸ್ಥಿತಿಯನ್ನು ಹಣ ಮಾಡಲು ಬಳಸಿಕೊಂಡಿದ್ದಾನೆ. ಆಕ್ಸಿಜನ್​ ಕಾನ್ಸಂಟ್ರೇಟರ್​ ಮಷಿನ್ ಬೆಲೆ 2 ಲಕ್ಷ ರೂಪಾಯಿ’ ಎಂದು ಟ್ವೀಟ್​ ಮಾಡಲಾಗಿದೆ. ಅದನ್ನು ನಟಿ ಕಂಗನಾ ರಣಾವತ್​ ಕೂಡ ಲೈಕ್​ ಮಾಡಿದ್ದಾರೆ. ಆ ಮೂಲಕ ಸೋನು ಸೂದ್​ ಫ್ರಾಡ್​ ಎಂಬುದಕ್ಕೆ ತಮ್ಮ ಸಹಮತ ಕೂಡ ಇದೆ ಎಂಬುದನ್ನು ಪರೋಕ್ಷವಾಗಿ ಕಂಗನಾ ಹೇಳಿದಂತಾಗಿದೆ. ಇದು ಈಗ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.

(ಕಂಗನಾ ಲೈಕ್​ ಮಾಡಿರುವ ಟ್ವೀಟ್​)

ಕೊರೊನಾ ವೈರಸ್​ ಎರಡನೇ ಅಲೆಗೆ ಜನರು ಕಂಗಾಲಾಗಿದ್ದಾರೆ. ದಿನದಿಂದ ದಿನಕ್ಕೆ ವಾತಾವರಣ ಬಿಗಿಯಾಗುತ್ತಿದೆ. ಸೂಕ್ತ ಸಮಯಕ್ಕೆ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿಲ್ಲ. ಅದರಲ್ಲೂ ಆಕ್ಸಿಜನ್​ ಮತ್ತು ವೆಂಟಿಲೇಟರ್​ಗಾಗಿ ಸೋಂಕಿತರು ಪರದಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್​ ಕೂಡ ಸಿಗದವರ ಕಷ್ಟ ಹೇಳತೀರದು. ಇಂಥ ಸಮಯದಲ್ಲಿ ಕೆಲವು ಸೆಲೆಬ್ರಿಟಿಗಳು ಜನರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಆದರೆ ಕಂಗನಾ ಏನೂ ಮಾಡಿಲ್ಲ ಎಂದು ಇತ್ತೀಚೆಗೆ ನಟಿ ರಾಖಿ ಸಾವಂತ್​ ಅವರು ಕಂಗನಾ ವಿರುದ್ಧ ಗುಡುಗಿದ್ದರು.

ಹರ್ಷವರ್ಧನ್​ ರಾಣೆ, ಸುನೀಲ್​ ಶೆಟ್ಟಿ, ಸುಷ್ಮಿತಾ ಸೇನ್,​ ಜಗ್ಗೇಶ್, ಅರ್ಜುನ್​ ಗೌಡ, ಹರ್ಷಿಕಾ ಪೂಣಚ್ಚ, ಭುವನ್​ ಪೊನ್ನಣ್ಣ ಮುಂತಾದ ಸೆಲೆಬ್ರಿಟಿಗಳು ಈ ಕಷ್ಟದ ಸಂದರ್ಭದಲ್ಲಿ ಜನರ ಸಹಾಯಕ್ಕೆ ನಿಂತಿದ್ದಾರೆ.

ಇದನ್ನೂ ಓದಿ:

100 ಕೋಟಿ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸಹಾಯ ಮಾಡುವುದರಲ್ಲಿ ಖುಷಿ ಸಿಗುತ್ತೆ : ನಟ ಸೋನು ಸೂದ್

ಬೆಂಗಳೂರು ಪೊಲೀಸರಿಗೆ ನೆರವಿನ ಹಸ್ತ ನೀಡಿದ ಬಾಲಿವುಡ್ ನಟ ಸೋನು ಸೂದ್