AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶವಸಂಸ್ಕಾರದ ಬಟ್ಟೆ ಜೊತೆಯಲ್ಲೇ ಪ್ರಯಾಣ ಮಾಡುವ ಗಾಯಕ ಲಕ್ಕಿ ಅಲಿ; ಕಾರಣ ಏನು?

ಬಾಲಿವುಡ್​ನ ಜನಪ್ರಿಯ ಗಾಯಕ ಲಕ್ಕಿ ಅಲಿ ಅವರು ತಮ್ಮ ಸಾವಿನ ಬಗ್ಗೆ ಮಾತನಾಡಿದ್ದಾರೆ. ಅವರ ಈ ಮಾತುಗಳಿಂದ ಲಕ್ಷಾಂತರ ಅಭಿಮಾನಿಗಳು ಭಾವುಕರಾಗಿದ್ದಾರೆ. ಸಾಯುವುದಕ್ಕೆ ತಾವು ಸಿದ್ಧ ಎಂದು ಲಕ್ಕಿ ಅಲಿ ಅವರು ಹೇಳಿದ್ದಾರೆ. ಶವಸಂಸ್ಕಾರಕ್ಕೆ ಬಳಸುವ ಬಟ್ಟೆಯನ್ನು ಸದಾ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಶವಸಂಸ್ಕಾರದ ಬಟ್ಟೆ ಜೊತೆಯಲ್ಲೇ ಪ್ರಯಾಣ ಮಾಡುವ ಗಾಯಕ ಲಕ್ಕಿ ಅಲಿ; ಕಾರಣ ಏನು?
Lucky Ali
ಮದನ್​ ಕುಮಾರ್​
|

Updated on: Aug 10, 2026 | 6:21 PM

Share

ಪ್ರಸಿದ್ಧ ಗಾಯಕ ಲಕ್ಕಿ ಅಲಿ (Lucky Ali) ಅವರು ಇತ್ತೀಚೆಗೆ ನಡೆದ ತಮ್ಮ ಸಂಗೀತ ಕಾರ್ಯಕ್ರಮವೊಂದರಲ್ಲಿ ಸಾವಿನ ಕುರಿತು ಭಾವುಕರಾಗಿ ಮಾತನಾಡುವ ಮೂಲಕ ಅಭಿಮಾನಿಗಳ ಕಣ್ಣಾಲಿಗಳನ್ನು ತೇವಗೊಳಿಸಿದ್ದಾರೆ. ತಮ್ಮ ಸಂಗೀತದ ಮೂಲಕ ದಶಕಗಳಿಂದ ಶ್ರೋತೃಗಳ ಮನಗೆದ್ದಿರುವ 67 ವರ್ಷದ ಅವರು, ಅನಿವಾರ್ಯವಾದ ಸಾವಿಗೆ ತಾವು ಸದಾ ಸಿದ್ಧರಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ತಾವು ಪ್ರಯಾಣಿಸುವಾಗಲೆಲ್ಲಾ ಶವಸಂಸ್ಕಾರಕ್ಕೆ ಬಳಸುವ ಬಟ್ಟೆಯನ್ನು (Ihram) ಜೊತೆಯಲ್ಲೇ ಕೊಂಡೊಯ್ಯುವುದಾಗಿ ಬಹಿರಂಗಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಅಭಿಮಾನಿಗಳು ತೋರಿಸಿದ ಅಪಾರ ಪ್ರೀತಿ ಮತ್ತು ಬೆಂಬಲಕ್ಕೆ ಸ್ಪಂದಿಸುತ್ತಾ ಲಕ್ಕಿ ಅಲಿ ಅವರು ಈ ಮಾತುಗಳನ್ನಾಡಿದ್ದಾರೆ. ಅವರ ಈ ಭಾವುಕ ಮಾತುಗಳು ಹಾಗೂ ಗಾಯನವು ನೆರೆದಿದ್ದ ಹಲವರನ್ನು ಭಾವುಕರನ್ನಾಗಿಸಿತು. ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಸಭಿಕರೊಂದಿಗೆ ಸಂವಾದ ನಡೆಸುವಾಗ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ಲೋಕವನ್ನು ತೊರೆಯಲೇಬೇಕು ಎಂದು ಲಕ್ಕಿ ಅಲಿ ಹೇಳಿದರು. ತಾವು ಅಭಿಮಾನಿಗಳನ್ನು ತಮ್ಮ ಸಾವಿಗೆ ಸಿದ್ಧಪಡಿಸುತ್ತಿಲ್ಲ, ಬದಲಾಗಿ ವೈಯಕ್ತಿಕವಾಗಿ ಆ ಆಲೋಚನೆಯೊಂದಿಗೆ ಶಾಂತಿಯುತವಾಗಿ ಹೊಂದಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

‘ನನಗೆ ಗೊತ್ತು, ನಾನು ಕೂಡ ನಿಮ್ಮನ್ನೆಲ್ಲ ಪ್ರೀತಿಸುತ್ತೇನೆ. ಒಂದಲ್ಲ ಒಂದು ದಿನ ನಾವೆಲ್ಲರೂ ಹೋಗಲೇಬೇಕು. ನಾನು ನಿಮ್ಮನ್ನು ಅದಕ್ಕೆ ಸಿದ್ಧಪಡಿಸುತ್ತಿಲ್ಲ, ಆದರೆ ನಾನು ನಿಜವಾಗಿಯೂ ಸಿದ್ಧನಾಗಿದ್ದೇನೆ. ನಾನು ಎಲ್ಲೇ ಪ್ರಯಾಣಿಸಿದರೂ, ನನ್ನ ಶವದ ಬಟ್ಟೆ ಜೊತೆಯಲ್ಲೇ ಇಟ್ಟುಕೊಂಡು ಪ್ರಯಾಣಿಸುತ್ತೇನೆ. ನಾನು ಎಲ್ಲೇ ಮರಣ ಹೊಂದಿದರೂ, ನನ್ನನ್ನು ಅಲ್ಲಿಂದಲೇ ಕಳುಹಿಸಿಕೊಡಿ’ ಎಂದು ಅವರು ಹೇಳಿದರು.

ಲಕ್ಕಿ ಅಲಿ ಅವರ ಈ ಹೇಳಿಕೆಯು ಅಲ್ಲಿದ್ದ ಅಭಿಮಾನಿಗಳನ್ನು ತೀವ್ರ ಭಾವುಕರನ್ನಾಗಿಸಿತು. ಲೈವ್ ಸಂಗೀತ ಕಾರ್ಯಕ್ರಮದಲ್ಲಿದ್ದ ಅಭಿಮಾನಿಯೊಬ್ಬರು ಕಳೆದ ಮೂರು ದಶಕಗಳಿಂದ ಲಕ್ಕಿ ಅಲಿ ಅವರ ಸಂಗೀತವನ್ನು ಆಲಿಸುತ್ತಿರುವುದನ್ನು ನೆನಪಿಸಿಕೊಂಡು, ‘ಈಗ 30 ವರ್ಷಗಳಾಗಿವೆ, ನಾನು ಲಕ್ಕಿ ಅವರ ಸಂಗೀತವನ್ನು ಎಂದಿಗೂ ಕೈಬಿಟ್ಟಿಲ್ಲ’ ಎಂದು ಹೇಳಿದರು.

ಲಕ್ಕಿ ಅಲಿ ಅವರು ಈ ಕಾನ್ಸರ್ಟ್‌ನ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ, ಅವರ ಅಭಿಮಾನಿಗಳು ಕಮೆಂಟ್ ಸೆಕ್ಷನ್‌ನಲ್ಲಿ ಪ್ರೀತಿ ಮತ್ತು ಕಾಳಜಿ ಭರಿತ ಕಮೆಂಟ್​ಗಳನ್ನು ಮಾಡಿದ್ದಾರೆ. ಅಭಿಮಾನಿಯೊಬ್ಬರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳುತ್ತಾ, ‘ನಾನು ಈ ಸತ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತೇನೆ. ನನಗೆ ಇಂದಿಗೂ ಇದು 90ರ ದಶಕದ ಕೊನೆಯ ವರ್ಷಗಳು ಎನಿಸುತ್ತಿದೆ. ನನ್ನ ಮನಸ್ಸು ಅಲ್ಲೇ ಉಳಿದುಹೋಗಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಅತ್ತೆಯಿಂದ ಗಾಯಕ ಲಕ್ಕಿ ಅಲಿ ವಿರುದ್ಧ ದೂರು, ಪ್ರಕರಣ ರದ್ದು ಮಾಡಿದ ಹೈಕೋರ್ಟ್

ಮತ್ತೊಬ್ಬ ಅಭಿಮಾನಿ, ‘ಇಹ್ರಾಮ್ (ಶವ ಸಂಸ್ಕಾರದ ಬಟ್ಟೆ) ಜೊತೆಗೆ ಪ್ರಯಾಣಿಸುವುದು ನಿಮ್ಮ ಹೃದಯದಲ್ಲಿರುವ ನಂಬಿಕೆಯನ್ನು ತೋರಿಸುತ್ತದೆ. ಅಲ್ಲಾಹನು ನಿಮಗೆ ದೀರ್ಘ, ಆರೋಗ್ಯಕರ ಜೀವನವನ್ನು ಕರುಣಿಸಲಿ’ ಎಂದು ಕಾಮೆಂಟ್ ಮಾಡಿದ್ದಾರೆ. ತಮ್ಮ ವಿಶಿಷ್ಟ ಕಂಠಸಿರಿ ಮತ್ತು ಇಂಡಿಪೆಂಡೆಂಟ್ ಮ್ಯೂಸಿಕ್ ಮೂಲಕ ಹೆಸರುವಾಸಿಯಾದ ಲಕ್ಕಿ ಅಲಿ ಅವರು 1990ರ ದಶಕದಲ್ಲಿ ಅತ್ಯಂತ ಜನಪ್ರಿಯರಾದರು. ತದನಂತರ ಅವರು ‘ಕಹೋ ನಾ… ಪ್ಯಾರ್ ಹೈ’, ‘ಯುವಾ’, ‘ಬಚ್ನಾ ಏ ಹಸೀನೋ’, ‘ಅಂಜಾನಾ ಅಂಜಾನಿ’, ‘ತಮಾಷಾ’ ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಕಂಠದಾನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಕೊಡಗು: ಪ್ರವಾಸಿಗರ ಬಸ್ ಪಲ್ಟಿ; 22ಕ್ಕೂ ಹೆಚ್ಚು ಜನರಿಗೆ ಗಾಯ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಜೆಡಿಎಸ್ ಪಾದಯಾತ್ರೆ ತಡೆದ ಪೊಲೀಸರು: ಭಾರಿ ಹೈಡ್ರಾಮಾ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!