‘ಸತ್ಯ ಹೊರ ಬರುತ್ತೆ, ನನ್ನ ಪತ್ನಿ ಹೆಸರು ತರಬೇಡಿ’; ಇಡಿ ದಾಳಿ ಬಳಿಕ ಧಿಮಾಕಿನಲ್ಲಿ ಮಾತನಾಡಿದ ರಾಜ್ ಕುಂದ್ರಾ

ರಾಜ್ ಕುಂದ್ರಾ ಅವರ ಮೇಲಿನ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಈ ಪ್ರಕರಣದಿಂದ ದೂರವಿಡುವಂತೆ ಕೋರಿದ್ದಾರೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅವರ ಹೆಸರನ್ನು ಎಳೆದು ತರಲಾಗುತ್ತಿರುವುದು ಅವರಿಗೆ ಬೇಸರ ತಂದಿದೆ.

‘ಸತ್ಯ ಹೊರ ಬರುತ್ತೆ, ನನ್ನ ಪತ್ನಿ ಹೆಸರು ತರಬೇಡಿ’; ಇಡಿ ದಾಳಿ ಬಳಿಕ ಧಿಮಾಕಿನಲ್ಲಿ ಮಾತನಾಡಿದ ರಾಜ್ ಕುಂದ್ರಾ
ಶಿಲ್ಪಾ- ರಾಜ್ ಕುಂದ್ರಾ
Follow us
ರಾಜೇಶ್ ದುಗ್ಗುಮನೆ
|

Updated on: Nov 30, 2024 | 12:00 PM

ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಅವರು ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿ ಆಗುತ್ತಲೇ ಇದ್ದಾರೆ. ಅವರ ಹೆಸರು ಅಕ್ರಮ ಹಣ ವರ್ಗಾವಣೆ ಪ್ರಕರಣದ ಜೊತೆ ತಳುಕು ಹಾಕಿಕೊಂಡಿದೆ. ಅವರ ಮನೆಯ ಮೇಲೆ ಜಾರಿ ನಿರ್ದೇಶನ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ವಿರುದ್ಧ ಬಂದಿರುವ ಆರೋಪ ಸುಳ್ಳು ಎಂಬುದು ಮುಂದೊಂದು ದಿನ ಸಾಬೀತಾಗುತ್ತದೆ ಎಂದಿರುವ ಅವರು, ಈ ಪ್ರಕರಣದಲ್ಲಿ ಪತ್ನಿ ಹೆಸರನ್ನು ಎಳೆದು ತರಬೇಡಿ ಎಂದು ಕೋರಿದ್ದಾರೆ.

‘ಇದು ಯಾರಿಗೆಲ್ಲ ಸಂಬಂಧಿಸಿದೆಯೋ ಅವರಿಗೆ ನೇರವಾಗಿ ಹೇಳುತ್ತಿದ್ದೇನೆ. ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ತನಿಖೆಗೆ ನಾನು ಸಹಕರಿಸುತ್ತಿದ್ದೇನೆ. ಹಣ ವರ್ಗಾವಣೆ, ಅಶ್ಲೀಲ ಸಿನಿಮಾ ನಿರ್ಮಾಣ ಮತ್ತಿತ್ಯಾದಿ ಪ್ರಕರಣಗಳನ್ನು ಇದು ಒಳಗೊಂಡಿದೆ. ಯಾವುದನ್ನು ಸೆನ್ಸೇಷನ್ ಮಾಡಿದರೂ ಸತ್ಯ ಮರೆ ಆಗುವುದಿಲ್ಲ. ಕೊನೆಯಲ್ಲಿ ಸತ್ಯ ಹೊರಬರಲೇಬೇಕು’ ಎಂದು ಅವರು ಹೇಳಿದ್ದಾರೆ.

ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಹೆಸರನ್ನು ಕೂಡ ಎಳೆದು ತರಲಾಗುತ್ತಿದೆ. ಈ ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರದ ಬಗ್ಗೆ ಹೇಳಲಾಗುತ್ತಿದೆ. ಇದಕ್ಕೆ ರಾಜ್​ಕುಂದ್ರಾ ಸಿಟ್ಟಾಗಿದ್ದಾರೆ. ‘ಸಂಬಂಧಿಸದೇ ಇಲ್ಲದ ವಿಚಾರಗಳಲ್ಲಿ ನನ್ನ ಪತ್ನಿಯ ಹೆಸರನ್ನು ಎಳೆದು ತರಬೇಡಿ’ ಎಂದು ಅವರು ಕೋರಿಕೊಂಡಿದ್ದಾರೆ.

ರಾಜ್ ಕುಂದ್ರಾ ಅವರು ಸಾಕಷ್ಟು ಕೇಸ್​ಗಳನ್ನು ಎದುರಿಸುತ್ತಿದ್ದಾರೆ. ಅಶ್ಲೀಲ ಸಿನಿಮಾ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಅತಿ ದೊಡ್ಡ ಬಿಟ್ ಕಾಯಿನ್ ಹಗರಣದಲ್ಲೂ ಅವರ ಹೆಸರು ಸಿಲುಕಿದೆ. ನೂರಾರು ಕೋಟಿ ರೂಪಾಯಿ ಒಡೆಯನಾಗಿರೋ ರಾಜ್ ಕುಂದ್ರಾ ಈ ರೀತಿಯ ವಿಚಾರಗಳಿಂದ ಸುದ್ದಿಯಲ್ಲಿ ಇದ್ದಾರೆ.

ಇದನ್ನೂ ಓದಿ: ‘ಶಿಲ್ಪಾನ ಮದುವೆ ಆಗಲು ರಾಜ್ ಕುಂದ್ರಾ ಹಣ ಸುರಿದಿದ್ದರು’; ಅನಿಲ್ ಕಪೂರ್  

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿಚ್ಛೇದನ ಪಡೆಯುತ್ತಾರೆ ಎಂದು ಈ ಮೊದಲು ಹೇಳಲಾಗಿತ್ತು. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಸಖತ್ ಅಪ್ಸೆಟ್ ಆದರು. ಇದನ್ನು ರಾಜ್​ಕುಂದ್ರಾ ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಈಗ ಮಾಡಿರುವ ಪೋಸ್ಟ್​ನಲ್ಲೂ ತಮ್ಮ ತಪ್ಪು ಇಲ್ಲ ಎಂದೇ ಹೇಳಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.