AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಮ್ಮೆಯಿಂದ ರಾಖಿ ತೋರಿಸಿದ ಸಲ್ಮಾನ್ ಖಾನ್; ಸಹೋದರಿ ಮನೆಯಲ್ಲಿ ರಕ್ಷಾ ಬಂಧನ ಸಡಗರ

ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ಎಲ್ಲ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಅದಕ್ಕೆ ರಾಖಿ ಹಬ್ಬ ಕೂಡ ಹೊರತಾಗಿಲ್ಲ. ಸಹೋದರಿ ಅಲ್ವಿರಾ ಖಾನ್ ನಿವಾಸದಲ್ಲಿ ಸಲ್ಮಾನ್ ಖಾನ್ ಅವರು ರಕ್ಷಾ ಬಂಧನ ಹಬ್ಬವನ್ನು ಆಚರಿಸಿದ್ದಾರೆ. ಅಲ್ಲಿಂದ ಹೊರಬರುವಾಗ ಅವರು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು.

ಹೆಮ್ಮೆಯಿಂದ ರಾಖಿ ತೋರಿಸಿದ ಸಲ್ಮಾನ್ ಖಾನ್; ಸಹೋದರಿ ಮನೆಯಲ್ಲಿ ರಕ್ಷಾ ಬಂಧನ ಸಡಗರ
Salman Khan
ಮದನ್​ ಕುಮಾರ್​
|

Updated on: Aug 28, 2026 | 7:34 PM

Share

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ (Salman Khan) ಅವರು ತಮ್ಮ ಕುಟುಂಬದೊಂದಿಗೆ ರಕ್ಷಾ ಬಂಧನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಅವರ ಮುಂಬೈನ ನಿವಾಸದಲ್ಲಿ ನಡೆದ ರಾಖಿ ಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ಸಲ್ಮಾನ್ ಅವರು ತಮ್ಮ ಕೈಗೆ ಕಟ್ಟಲಾಗಿದ್ದ ರಾಖಿಗಳನ್ನು ಪಾಪರಾಜಿಗಳ ಮುಂದೆ ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಅಭಿಮಾನಿಗಳು ಸಲ್ಮಾನ್ ಖಾನ್ ಅವರಿಗೆ ರಕ್ಷಾ ಬಂಧನ ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ಅಲ್ವಿರಾ ಖಾನ್ ಅವರ ನಿವಾಸದಿಂದ ಹೊರಬರುವಾಗ ಪಾಪರಾಜಿಗಳ ಕ್ಯಾಮೆರಾಗಳಿಗೆ ಸಲ್ಮಾನ್ ಖಾನ್ ಕಾಣಿಸಿದರು. ಮೆರೂನ್ ಟೀ-ಶರ್ಟ್, ಬ್ಲೂ ಜೀನ್ಸ್ ಹಾಗೂ ಕೌಬಾಯ್ ಹ್ಯಾಟ್ ಧರಿಸಿದ್ದ ಸಲ್ಮಾನ್ ಖಾನ್ ಅವರು ಸಿಂಪಲ್ ಆಗಿ ಕಾಣಿಸಿಕೊಂಡರೂ, ಅವರ ಹಣೆಯಲ್ಲಿದ್ದ ತಿಲಕ ಹಾಗೂ ಮುಂಗೈಯಲ್ಲಿದ್ದ ಬಣ್ಣ ಬಣ್ಣದ ರಾಖಿಗಳು ಹಬ್ಬದ ಕಳೆಯನ್ನು ಹೆಚ್ಚಿಸಿದ್ದವು. ಕಾರು ಹತ್ತುವ ಮುನ್ನ ಪಾಪರಾಜಿಗಳು ರಾಖಿ ತೋರಿಸುವಂತೆ ವಿನಂತಿಸಿದಾಗ, ಸಲ್ಮಾನ್ ಖಾನ್ ಮುಗುಳ್ನಗುತ್ತಾ ತಮ್ಮ ಕೈ ಎತ್ತಿ ರಾಖಿಗಳನ್ನು ಪ್ರದರ್ಶಿಸಿದರು.

ಖಾನ್ ಕುಟುಂಬದ ಸಂಭ್ರಮ:

ಹಬ್ಬದ ನಿಮಿತ್ತ ಅಲ್ವಿರಾ ಅವರ ಮನೆಗೆ ಬಂದ ಹಿರಿಯ ನಟಿ ಹೆಲನ್ ಅವರನ್ನು ಸಲ್ಮಾನ್ ಖಾನ್ ಪ್ರೀತಿಯಿಂದ ಅಪ್ಪಿಕೊಂಡು ಸ್ವಾಗತಿಸಿದರು. ಸಹೋದರ ಸೊಹೈಲ್ ಖಾನ್ ಅವರ ಪುತ್ರ ನಿರ್ವಾಣ್ ಖಾನ್ ಕೂಡ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದರು. ಸಲ್ಮಾನ್ ಖಾನ್ ಕುಟುಂಬವು ಪ್ರತಿವರ್ಷ ಅಲ್ವಿರಾ ಅವರ ಮನೆಯಲ್ಲಿಯೇ ರಕ್ಷಾಬಂಧನ ಹಬ್ಬವನ್ನು ಆಚರಿಸಿಕೊಂಡು ಬರುವುದು ವಾಡಿಕೆ.

ಸಲ್ಮಾನ್ ಖಾನ್ ಸಹೋದರಿಯರು:

ಸಲ್ಮಾನ್ ಖಾನ್ ಪೋಷಕರಾದ ಸಲೀಮ್ ಖಾನ್ ಹಾಗೂ ಸಲ್ಮಾ ಖಾನ್ ಅವರ ಸ್ವಂತ ಪುತ್ ಅಲ್ವಿರಾ ಖಾನ್. ಅವರು ಫ್ಯಾಷನ್ ಡಿಸೈನರ್ ಮತ್ತು ಸಿನಿಮಾ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ನಟ ಹಾಗೂ ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಅವರನ್ನು ಅಲ್ವಿರಾ ವಿವಾಹವಾಗಿದ್ದಾರೆ. ಸಲ್ಮಾನ್ ಅವರ ಮತ್ತೊಬ್ಬ ಸಹೋದರಿ ಅರ್ಪಿತಾ ಖಾನ್ ಶರ್ಮಾ. ಅರ್ಪಿತಾ ಅವರನ್ನು ಸಲೀಮ್ ಖಾನ್ ದತ್ತು ತೆಗೆದುಕೊಂಡಿದ್ದು, ಸಲ್ಮಾ, ಹೆಲನ್ ಹಾಗೂ ಇಡೀ ಖಾನ್ ಕುಟುಂಬ ಅತ್ಯಂತ ಪ್ರೀತಿಯಿಂದ ಸಾಕಿ ಬೆಳೆಸಿದೆ. ಅರ್ಪಿತಾ ಅವರು ನಟ ಆಯುಷ್ ಶರ್ಮಾ ಅವರನ್ನು ಮದುವೆಯಾಗಿದ್ದಾರೆ.

ಇದನ್ನೂ ಓದಿ: ‘ಬೀಯಿಂಗ್ ಹ್ಯೂಮನ್’ ವಂಚನೆ ಪ್ರಕರಣ: ನಟ ಸಲ್ಮಾನ್ ಖಾನ್​ಗೆ ಸಮನ್ಸ್ ಜಾರಿ

ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ನಟಿಸಿದ ‘ಮಾತೃಭೂಮಿ’ ಸಿನಿಮಾದ ಬಿಡುಗಡೆ ವಿಳಂಬ ಆಗಿದೆ. ಈ ಚಿತ್ರವನ್ನು ರಿಲೀಸ್ ಮಾಡಲು ಹಲವು ವಿಘ್ನಗಳು ಎದುರಾಗುತ್ತಿವೆ. ಹಾಗಾಗಿ, ಅದನ್ನು ಬದಿಗಿಟ್ಟು ಸಲ್ಮಾನ್ ಖಾನ್ ಅವರು ಹೊಸ ಪ್ರಾಜೆಕ್ಟ್​ಗಳ ಕಡೆಗೆ ಗಮನ ಹರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನ ಜಲಕಂಠೇಶ್ವರ ಸ್ವಾಮಿ ದೇಗುಲದಲ್ಲಿ ಪ್ರಧಾನಿ ಮೋದಿ ವಿಶೇಷ ಪೂಜೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ
ಚೆನ್ನೈನಲ್ಲಿ ಮೋದಿ ರೋಡ್‌ ಶೋ: 13 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ