AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣಕ್ಕೆ ಬಂದ ಮತ್ತೊಬ್ಬ ಬಾಲಿವುಡ್​​ ಸ್ಟಾರ್ ನಟ

ಸಲ್ಮಾನ್ ಖಾನ್, ಆಮಿರ್ ಖಾನ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್ ಅಂಥಹವರೇ ಇದೀಗ ದಕ್ಷಿಣ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್​ನ ಮತ್ತೊಬ್ಬ ಸ್ಟಾರ್ ನಟ ದಕ್ಷಿಣದ ಸಿನಿಮಾನಲ್ಲಿ ನಟಿಸಲು ಬರುತ್ತಿದ್ದಾರೆ. ಈ ಹಿಂದೆ ದಕ್ಷಿಣದ ಕೆಲ ಸಿನಿಮಾಗಳ ರೀಮೇಕ್​​ನಲ್ಲಿ ನಟಿಸಿ ಸೂಪರ್ ಹಿಟ್ ನೀಡಿರುವ ಈ ನಟ ಇದೀಗ ನೇರವಾಗಿ ದಕ್ಷಿಣ ಭಾರತದ ಸಿನಿಮಾನಲ್ಲಿ ನಟನೆ ಮಾಡಲಿದ್ದಾರೆ ಯಾರದು?

ದಕ್ಷಿಣಕ್ಕೆ ಬಂದ ಮತ್ತೊಬ್ಬ ಬಾಲಿವುಡ್​​ ಸ್ಟಾರ್ ನಟ
Jr Ntr Shahid Kapoor
ಮಂಜುನಾಥ ಸಿ.
|

Updated on: Sep 04, 2026 | 2:07 PM

Share

ಮುಖ್ಯಾಂಶಗಳು

  • ದಕ್ಷಿಣದತ್ತ ಬಂದ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ
  • ತೆಲುಗು ಸಿನಿಮಾನಲ್ಲಿ ನಟಿಸಲಿರುವ ಶಾಹಿದ್ ಕಪೂರ್
  • ಶಾಹಿದ್ ಕಪೂರ್ ಮೊದಲ ಬಾರಿ ತೆಲುಗು ಸಿನಿಮಾನಲ್ಲಿ ನಟಿಸಲಿದ್ದಾರೆ.

ದಕ್ಷಿಣದ ಸಿನಿಮಾಗಳಲ್ಲಿ ಬಾಲಿವುಡ್ (Bollywood)​ ನಟ-ನಟಿಯರು ನಟಿಸುವುದೇ ಅಪರೂಪವಾಗಿತ್ತು. ನಟಿಸಿದರೂ ಸಹ ಅವರ ವರಸೆ ಬೇರೆಯದ್ದೇ ರೀತಿ ಇರುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್​ನ ಸೂಪರ್ ಸ್ಟಾರ್ ನಟ-ನಟಿಯರು ಸಹ ದಕ್ಷಿಣದ ಸಿನಿಮಾಗಳಲ್ಲಿ ನಟಿಸಲು ತುದಿಗಾಲಲ್ಲಿ ನಿಂತಿದ್ದಾರೆ. ದಕ್ಷಿಣದ ಚಿತ್ರರಂಗದ ಬಗ್ಗೆ ಉಡಾಫೆ ಭಾವ ಹೊಂದಿದ್ದ ಸಲ್ಮಾನ್ ಖಾನ್, ಆಮಿರ್ ಖಾನ್, ಸೈಫ್ ಅಲಿ ಖಾನ್, ಅಮಿತಾಬ್ ಬಚ್ಚನ್, ಹೃತಿಕ್ ರೋಷನ್ ಅಂಥಹವರೇ ಇದೀಗ ದಕ್ಷಿಣ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಬ್ಬ ಬಾಲಿವುಡ್ ಸ್ಟಾರ್ ನಟ ದಕ್ಷಿಣದತ್ತ ಬಂದಿದ್ದು, ಇದು ಅವರ ಮೊದಲ ದಕ್ಷಿಣ ಭಾರತದ ಸಿನಿಮಾ ಆಗಿದೆ.

ಜೂನಿಯರ್ ಎನ್​​ಟಿಆರ್ ನಟಿಸಿ ಕನ್ನಡದ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾ ಈಗಾಗಲೇ ಹಲವು ಸ್ಟಾರ್ ನಟ-ನಟಿಯರನ್ನು ಹೊಂದಿದ್ದು, ಇದೀಗ ಈ ಸಿನಿಮಾಕ್ಕೆ ಬಾಲಿವುಡ್​​ನ ಇಬ್ಬರು ಸ್ಟಾರ್ ನಟ ಮತ್ತು ನಟಿ ಎಂಟ್ರಿ ಕೊಟ್ಟಿದ್ದಾರೆ. ಬಾಲಿವುಡ್​​ನ ನಂಬರ್ 1 ನಟಿ ಎನಿಸಿಕೊಂಡಿರುವ ಆಲಿಯಾ ಭಟ್ ಅವರು ‘ಡ್ರ್ಯಾಗನ್’ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಸುದ್ದಿ ಈಗಾಗಲೇ ವೈರಲ್ ಆಗಿದೆ. ಆಲಿಯಾ ಭಟ್ ಅವರ ಜೊತೆಗೆ ಇದೇ ಸಿನಿಮಾನಲ್ಲಿ ಬಾಲಿವುಡ್​​ನ ಸ್ಟಾರ್ ನಟ ಶಾಹಿದ್ ಕಪೂರ್ ಸಹ ನಟಿಸುತ್ತಿದ್ದಾರೆ.

ರಾಜಮೌಳಿ ನಿರ್ದೇಶಿಸಿದ್ದ ‘ಆರ್​​ಆರ್​​ಆರ್’ ಸಿನಿಮಾದ ಮೂಲಕ ಆಲಿಯಾ ಭಟ್ ದಕ್ಷಿಣ ಚಿತ್ರರಂಗಕ್ಕೆ ಕಾಲಿರಿಸಿದ್ದರು. ಆ ಸಿನಿಮಾನಲ್ಲಿ ಅವರು ರಾಮ್ ಚರಣ್​​ಗೆ ಜೋಡಿಯಾಗಿ ನಟಿಸಿದ್ದರು. ಜೂ ಎನ್​​ಟಿಆರ್ ಜೊತೆಗೆ ಒಂದೇ ಒಂದು ಸೀನ್​​ನಲ್ಲಿ ನಟನೆ ಮಾಡಿದ್ದರು. ಹಾಗೂ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದು, ಜೂ ಎನ್​​ಟಿಆರ್ ಸಿನಿಮಾನಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಆ ಮೂಲಕ ಇದು ಅವರಿಗೆ ಎರಡನೇ ತೆಲುಗು ಸಿನಿಮಾ ಆಗಲಿದೆ. ಇದರ ಜೊತೆಗೆ ಶಾಹಿದ್ ಕಪೂರ್ ಸಹ ಈ ಸಿನಿಮಾನಲ್ಲಿ ನಟಿಸಲಿದ್ದು, ಇದು ಅವರಿಗೆ ಮೊದಲ ತೆಲುಗು ಸಿನಿಮಾ ಆಗಿದೆ.

ಇದನ್ನೂ ಓದಿ:ಸಂಭ್ರಮಿಸುವ ಸಮಯದಲ್ಲಿ ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ

ಶಾಹಿದ್ ಕಪೂರ್ ಅವರಿಗೆ ದಕ್ಷಿಣದ ಸಿನಿಮಾಗಳು ಹೊಸದೇನೂ ಅಲ್ಲ. ‘ಅರ್ಜುನ್ ರೆಡ್ಡಿ’, ‘ಜೆರ್ಸಿ’ ಸೇರಿದಂತೆ ಇನ್ನೂ ಕೆಲವು ದಕ್ಷಿಣದ ಸಿನಿಮಾಗಳ ರೀಮೇಕ್​​ನಲ್ಲಿ ಶಾಹಿದ್ ಕಪೂರ್ ನಟನೆ ಮಾಡಿದ್ದಾರೆ. ಶಾಹಿದ್ ಕಪೂರ್ ನಟನೆಯ ‘ಕಾಕ್​​ಟೇಲ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಆ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ಇದೀಗ ಅವರು ತೆಲುಗು ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

‘ಡ್ರ್ಯಾಗನ್’ ಸಿನಿಮಾನಲ್ಲಿ ಹಲವು ದೊಡ್ಡ ಕಲಾವಿದರು ನಟನೆ ಮಾಡುತ್ತಿದ್ದಾರೆ. ಜೂ ಎನ್​​ಟಿಆರ್ ನಾಯಕನಾಗಿರುವ ಈ ಸಿನಿಮಾನಲ್ಲಿ ಕನ್ನಡತಿ ರುಕ್ಮಿಣಿ ವಸಂತ್ ನಾಯಕಿ. ಸಿನಿಮಾನಲ್ಲಿ ಬಾಲಿವುಡ್​​ ಸ್ಟಾರ್ ನಟ ಅನಿಲ್ ಕಪೂರ್ ಇದ್ದಾರೆ. ಮಲಯಾಳಂನ ಬಿಜು ಮೆನನ್, ಗುರು ಸೋಮಸುಂದರಂ, ಆಶುತೋಶ್ ರಾಣಾ ಇನ್ನೂ ಕೆಲವು ದೊಡ್ಡ ಕಲಾವಿದರು ಈ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಚಿತ್ರದುರ್ಗ ಎಸ್ಪಿ ವಿರುದ್ಧ ಶಾಸಕ ವೀರೇಂದ್ರ ಪಪ್ಪಿ ಕೆಂಡಾಮಂಡಲ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ