AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shreyas Talpade: ಚಪ್ಪಲಿ ಹಾಕಿಕೊಂಡು ಓಂ ಚಿಹ್ನೆಯ ಮೇಲೆ ಕಾಲಿಟ್ಟ ಆರೋಪ; 11 ವರ್ಷದ ಬಳಿಕ ಕ್ಷಮೆ ಕೇಳಿದ ನಟ

Shreyas Talpade Viral Video: ಶ್ರೇಯಸ್​ ತಲ್ಪಡೆ ಅವರು ಕ್ಷಮೆ ಕೇಳಿದ್ದಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಎಂದೋ ನಡೆದ ಘಟನೆಗೆ ಈಗ ಕ್ಷಮೆ ಕೇಳಿರುವುದು ಅವರ ವಿನಯತೆಗೆ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

Shreyas Talpade: ಚಪ್ಪಲಿ ಹಾಕಿಕೊಂಡು ಓಂ ಚಿಹ್ನೆಯ ಮೇಲೆ ಕಾಲಿಟ್ಟ ಆರೋಪ; 11 ವರ್ಷದ ಬಳಿಕ ಕ್ಷಮೆ ಕೇಳಿದ ನಟ
ಶ್ರೇಯಸ್ ತಲ್ಪಡೆ
ಮದನ್​ ಕುಮಾರ್​
|

Updated on:Feb 17, 2023 | 8:11 PM

Share

ಬಾಲಿವುಡ್​ ನಟ ಶ್ರೇಯಸ್​ ತಲ್ಪಡೆ (Shreyas Talpade) ಅವರು ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಸಾಧ್ಯವಾದಷ್ಟು ಅವರು ವಿವಾದಗಳಿಂದ ದೂರ ಉಳಿದುಕೊಳ್ಳಲು ಬಯಸುತ್ತಾರೆ. ಆದರೆ ಈಗ ಅವರು ಹಿಂದೂಗಳ ಕ್ಷಮೆ ಕೇಳುವಂತಾಗಿದೆ. ಹಾಗಂತ ಅವರು ನಿನ್ನೆ ಮೊನ್ನೆ ಏನೋ ತಪ್ಪು ಮಾಡಿರಬಹುದು ಎಂದುಕೊಳ್ಳಬೇಡಿ. ಅವರಿಂದ ಅಚಾತುರ್ಯ ಆಗಿದ್ದು ಬರೋಬ್ಬರಿ 11 ವರ್ಷಗಳ ಹಿಂದೆ. ಹೌದು, 2012ರಲ್ಲಿ ತೆರೆಕಂಡ ‘ಕಮಾಲ್​ ಧಮಾಲ್​ ಮಾಲಾಮಾಲ್​’ (Kamaal Dhamaal Malamaal) ಚಿತ್ರದಲ್ಲಿನ ಒಂದು ದೃಶ್ಯವನ್ನು ಇಟ್ಟುಕೊಂಡು ಈಗ ವಿವಾದ ಎಬ್ಬಿಸಲಾಗಿದೆ. ಆ ಚಿತ್ರದಲ್ಲಿನ ದೃಶ್ಯವೊಂದರಲ್ಲಿ ಓಂ ಚಿಹ್ನೆಯ (OM symbol) ಮೇಲೆ ಶ್ರೇಯಸ್​ ತಲ್ಪಡೆ ಅವರು ಕಾಲಿಟ್ಟಿದ್ದರು ಎಂದು ಟ್ವಿಟರ್​ನಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕಾಗಿ ಶ್ರೇಯಸ್​ ತಲ್ಪಡೆ ಕ್ಷಮೆ ಕೇಳಿದ್ದಾರೆ.

‘ಕಮಾಲ್​ ಧಮಾಲ್​ ಮಾಲಾಮಾಲ್​’ ಚಿತ್ರದಲ್ಲಿ ಶ್ರೇಯಸ್​ ತಲ್ಪಡೆ ಅವರು ಕ್ರಿಸ್ಚಿಯನ್​ ವ್ಯಕ್ತಿಯ ಪಾತ್ರ ಮಾಡಿದ್ದರು. ದೃಶ್ಯವೊಂದರಲ್ಲಿ ಎದುರಿನಿಂದ ಬರುತ್ತಿದ್ದ ವಾಹನವನ್ನು ಅವರು ತಡೆದು ನಿಲ್ಲಿಸಬೇಕಾಗುತ್ತದೆ. ಆಗ ಅವರು ಆ ವಾಹನದ ಮುಂಭಾಗಕ್ಕೆ ತುಳಿಯುತ್ತಾರೆ. ಆ ಜಾಗದಲ್ಲಿ ಹಿಂದೂಗಳ ಪವಿತ್ರ ಚಿಹ್ನೆಯಾದ ‘ಓಂ’ ಸ್ಟಿಕ್ಕರ್​ ಇರುತ್ತದೆ. ಆ ವಿಡಿಯೋವನ್ನು ಈಗ ವೈರಲ್​ ಮಾಡಲಾಗಿದೆ.

ಇದನ್ನೂ ಓದಿ
Image
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​
Image
Pranitha Subhash: ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿದ ಪ್ರಣಿತಾ; ‘ಹಿಂದೂಗಳ ಜೀವ ಮುಖ್ಯ’ ಎಂದು ಫಲಕ ಹಿಡಿದ ನಟಿ
Image
ಯೋಗ ಎಂದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಲ್ಲ, ಅದು ದೇಹಕ್ಕೆ ಸಂಬಂಧಿಸಿದ್ದು ಎಂದ ಜಗ್ಗೇಶ್​
Image
ಮುಸ್ಲಿಮರು ಮಾತ್ರವಲ್ಲ ಹಿಂದೂಗಳು ಕೂಡ ಗೋಮಾಂಸ ತಿನ್ನುತ್ತಾರೆ: ಸಿದ್ದರಾಮಯ್ಯ

ಇದನ್ನೂ ಓದಿ: Urfi Javed: ‘ಇಂಥ ಬಟ್ಟೆ ಹಾಕಿದ್ದಕ್ಕೆ ಮುಸ್ಲಿಮರು ಮನೆ ಕೊಡ್ತಿಲ್ಲ, ನಾನು ಮುಸ್ಲಿಂ ಅಂತ ಹಿಂದೂಗಳು ಮನೆ ಕೊಡಲ್ಲ’: ಉರ್ಫಿ

ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೇಯಸ್​ ತಲ್ಪಡೆ ಅವರು ಟ್ವಿಟರ್​ನಲ್ಲಿ ಕ್ಷಮೆ ಕೋರಿದ್ದಾರೆ. ‘ಶೂಟಿಂಗ್​ ನಡೆಯುವಾಗ ಸಾಕಷ್ಟು ಅಂಶಗಳು ಇರುತ್ತವೆ. ಸಾಹಸ ದೃಶ್ಯಗಳ ಸಂದರ್ಭದಲ್ಲಿನ ಮನಸ್ಥಿತಿ, ನಿರ್ದೇಶಕರ ಬೇಡಿಕೆ, ಸಮಯದ ಒತ್ತಡ ಮತ್ತು ಇನ್ನೂ ಹಲವು ವಿಷಯಗಳು ಇರುತ್ತವೆ. ನೀವು ವಿಡಿಯೋದಲ್ಲಿ ನೋಡಿದ್ದನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಅದು ಉದ್ದೇಶಪೂರ್ವವಲ್ಲದೇ ಆಗಿದ್ದು. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದು ಶ್ರೇಯಸ್​ ತಲ್ಪಡೆ ಹೇಳಿದ್ದಾರೆ.

ಇದನ್ನೂ ಓದಿ: ಹಿಂದೂ ಕಾರ್ಯಕರ್ತರನ್ನ ಅಣಬೆಗೆ ಹೋಲಿಸಿದ ಪುತ್ತೂರು ಬಿಜೆಪಿ ಶಾಸಕರ ವಿರುದ್ಧ ಭುಗಿಲೆದ್ದ ಆಕ್ರೋಶ, ಮುತ್ತಿಗೆ

‘ಅದನ್ನು ನಾನು ಗಮನಿಸಿ, ನಿರ್ದೇಶಕರಿಗೆ ತಿಳಿಸಬೇಕಿತ್ತು. ಅದರ ಹೊರತಾಗಿ ನಾನು ಉದ್ದೇಶಪೂರ್ವಕವಾಗಿ ಯಾರ ಭಾವನೆಗೂ ನೋವುಂಟು ಮಾಡಿಲ್ಲ. ಹೀಗೆ ಮತ್ತೆಂದೂ ಮಾಡುವುದಿಲ್ಲ’ ಎಂದು ಶ್ರೇಯಸ್​ ತಲ್ಪಡೆ ಅವರು ಟ್ವಿಟ್​ ಮಾಡಿದ್ದಾರೆ. ಅವರ ಈ ಪ್ರತಿಕ್ರಿಯೆಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಎಂದೋ ನಡೆದ ಘಟನೆಗೆ ಈಗ ಕ್ಷಮೆ ಕೇಳಿರುವುದು ಅವರ ದೊಡ್ಡಗುಣ ಮತ್ತು ವಿನಯತೆಗೆ ಸಾಕ್ಷಿ ಎಂದು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

2002ರಿಂದಲೂ ಶ್ರೇಯಸ್​ ತಲ್ಪಡೆ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ. ಈಗ ಕಂಗನಾ ರಣಾವತ್​ ನಿರ್ದೇಶನದ ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಶ್ರೇಯಸ್​ ಅವರು ಅಟಲ್​ ಬಿಹಾರಿ ವಾಜಪೇಯಿ ಪಾತ್ರ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:11 pm, Fri, 17 February 23

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ