Janhvi Kapoor: ಇಎಂಐ ಕಟ್ಟಲು ಈ ದಾರಿ ಕಂಡುಕೊಂಡ ಜಾನ್ವಿ ಕಪೂರ್; ಬಯಲಾಯ್ತು ಫೋಟೋಶೂಟ್ ಗುಟ್ಟು
Janhvi Kapoor Photoshoot: ಜಾನ್ವಿ ಕಪೂರ್ ಅವರು ಪದೇಪದೇ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಅವರ ಗ್ಲಾಮರಸ್ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
ನಟಿ ಜಾನ್ವಿ ಕಪೂರ್ (Janhvi Kapoor) ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿರುತ್ತಾರೆ. ಅವರ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ಶ್ರೀದೇವಿ (Sridevi) ಪುತ್ರಿ ಎಂಬ ಕಾರಣಕ್ಕೆ ಅವರಿಗೆ ಅವಕಾಶ ಸುಲಭವಾಗಿ ಸಿಗುತ್ತಿವೆ. ಆದರೆ ಯಶಸ್ಸು ಮರೀಚಿಕೆ ಆಗಿದೆ. ಜಾನ್ವಿ ಕಪೂರ್ ನಟನೆಯ ‘ಮಿಲಿ’ (Mili) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಅವರ ಅಭಿನಯಕ್ಕೆ ವಿಮರ್ಶಕರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಈ ಚಿತ್ರದ ಕಲೆಕ್ಷನ್ ಮಾತ್ರ ನಿರಾಸೆ ಮೂಡಿಸಿದೆ. ಇಷ್ಟಾದರೂ ಕೂಡ ಜಾನ್ವಿ ಕಪೂರ್ ಅವರ ವೈಯಕ್ತಿಯ ಆದಾಯಕ್ಕೆ ತೊಂದರೆ ಆಗಿಲ್ಲ. ಅವರು ಇಎಂಐ ಕಟ್ಟಲು ಬೇರೊಂದು ದಾರಿ ಕಂಡುಕೊಂಡಿದ್ದಾರೆ. ಅದೇನು ಎಂಬ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಜಾನ್ವಿ ಕಪೂರ್ ಅವರು ಪದೇಪದೇ ಫೋಟೋಶೂಟ್ ಮಾಡಿಸುತ್ತಲೇ ಇರುತ್ತಾರೆ. ಅವರ ಗ್ಲಾಮರಸ್ ಫೋಟೋಗಳು ಆಗಾಗ ವೈರಲ್ ಆಗುತ್ತವೆ. ಅವರಿಗೆ ಫೋಟೋಗಳ ಬಗ್ಗೆ ಇಷ್ಟೊಂದು ಕ್ರೇಜ್ ಯಾಕೆ ಎಂಬ ಪ್ರಶ್ನೆ ಎಲ್ಲರಿಗೂ ಮೂಡಿದೆ. ಅದಕ್ಕೆ ಉತ್ತರ ಸಿಕ್ಕಿದೆ. ಹಣ ಗಳಿಸುವ ಉದ್ದೇಶದಿಂದಲೇ ಜಾನ್ವಿ ಕಪೂರ್ ಅವರು ಈ ಪರಿ ಪೋಟೋಶೂಟ್ ಮಾಡಿಸುತ್ತಾರೆ.
ಆಗಾಗ ಫೋಟೋ ಹಂಚಿಕೊಳ್ಳುವುದರಿಂದ ಹೆಚ್ಚಿನ ಜನರನ್ನು ಸೆಳೆಯಬಹುದು. ಒಂದಷ್ಟು ಲೈಕ್ಸ್ ಜಾಸ್ತಿ ಆಗುತ್ತದೆ. ಇದರಿಂದ ಜನಪ್ರಿಯತೆ ಹೆಚ್ಚುತ್ತದೆ. ಆ ಜನಪ್ರಿಯತೆ ಮತ್ತು ಲೈಕ್ಸ್ ಆಧಾರದಲ್ಲಿಯೇ ಕೆಲವು ಬ್ರ್ಯಾಂಡ್ಗಳಿಂದ ಜಾಹೀರಾತಿಗೆ ಆಫರ್ ಬರುತ್ತದೆ. ಬ್ರ್ಯಾಂಡ್ಗಳ ಜೊತೆ ಕೈ ಜೋಡಿಸಿದ್ದಕ್ಕಾಗಿ ಜಾನ್ವಿ ಕಪೂರ್ ಅವರಿಗೆ ಸಂಭಾವನೆ ಸಿಗುತ್ತದೆ. ಇದರಿಂದ ಬಂದ ಹಣದಿಂದಲೇ ತಾವು ಇಎಂಐ ಕಟ್ಟುವುದು ಎಂದು ಜಾನ್ವಿ ಕಪೂರ್ ಹೇಳಿದ್ದಾರೆ.
‘ಮಿಲಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 10 ಕೋಟಿ ರೂಪಾಯಿ ಗಳಿಸಲೂ ಸಾಧ್ಯವಾಗದೇ ಒದ್ದಾಡುತ್ತಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ಜಾನ್ವಿ ಕಪೂರ್ ತಂದೆ ಬೋನಿ ಕಪೂರ್. ಅವರಿಗೆ ಈ ಸಿನಿಮಾದಿಂದ ನಷ್ಟ ಆಗುವ ಸಾಧ್ಯತೆಯೇ ಹೆಚ್ಚಿದೆ. ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ‘ಗುಡ್ ಲಕ್ ಜೆರಿ’ ಸಿನಿಮಾ ಕೂಡ ಜಾನ್ವಿ ಕಪೂರ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದುಕೊಡಲಿಲ್ಲ.
Helloo ?? pic.twitter.com/WsL351yb5A
— Janhvi Kapoor (@janhvikapoorr) November 5, 2022
ಈಗ ಜಾನ್ವಿ ಕಪೂರ್ ಕೈಯಲ್ಲಿ ಕೆಲವು ಸಿನಿಮಾಗಳಿವೆ. ‘ಬವಾಲ್’, ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಮುಂತಾದ ಚಿತ್ರದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಪ್ರಸ್ತುತ ಇನ್ಸ್ಟಾಗ್ರಾಮ್ನಲ್ಲಿ ಅವರನ್ನು 2 ಕೋಟಿಗೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಫಾಲೋವರ್ಸ್ ಸಂಖ್ಯೆ ಹೆಚ್ಚುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:43 am, Wed, 9 November 22