AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಗಿದೆ ‘ಟಾಕ್ಸಿಕ್’ ಹವಾ, ಹಿರಿಯ ವಿತರಕ ಹೇಳಿದರು ನಿಜ ಕತೆ

Toxic movie collection: ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಕೆಲವರು ನೆಗೆಟಿವ್ ವಿಮರ್ಶೆಗಳನ್ನು ಸಹ ಹರಿಯ ಬಿಡುತ್ತಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಬಾಲಿವುಡ್​​ನ ಹಿರಿಯ ವಿತರಕ ಮತ್ತು ಪ್ರದರ್ಶಕ ಮನೊಜ್ ದೇಸಾಯಿ ಮಾತನಾಡಿದ್ದಾರೆ. ಮಾಹಿತಿ ಇಲ್ಲಿದೆ.

ಹೇಗಿದೆ ‘ಟಾಕ್ಸಿಕ್’ ಹವಾ, ಹಿರಿಯ ವಿತರಕ ಹೇಳಿದರು ನಿಜ ಕತೆ
Toxic Manoj Desai
ಮಂಜುನಾಥ ಸಿ.
|

Updated on: Aug 30, 2026 | 8:49 PM

Share

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ.
  • ಟಾಕ್ಸಿಕ್ ಸಿನಿಮಾ ಬಗ್ಗೆ ವಿತರಕ ಮನೋಜ್ ದೇಸಾಯಿ ಮಾತನಾಡಿದ್ದಾರೆ.
  • ಮನೋಜ್ ದೇಸಾಯಿ ಹಿಂದಿಯ ಹಿರಿಯ ವಿತರಕರಾಗಿದ್ದಾರೆ.

ಟಾಕ್ಸಿಕ್’ (Toxic0) ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಹಲವರು ಸಿನಿಮಾ ಮೆಚ್ಚಿಕೊಂಡಿದ್ದಾರೆ. ಆದರೆ ಕೆಲವರು, ವಿಶೇಷವಾಗಿ ತೆಲುಗು ರಾಜ್ಯಗಳಲ್ಲಿ ಸಿನಿಮಾಕ್ಕೆ ನೆಗೆಟಿವ್ ವಿಮರ್ಶೆಗಳು ಹರಿದುಬರುತ್ತಿದೆ. ಸಿನಿಮಾದ ಕಲೆಕ್ಷನ್ ಬಿದ್ದಿದೆ ಎಂದೆಲ್ಲ ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಗಳಿಕೆ ಹೇಗಿದೆ, ಜನ ಹೇಗೆ ‘ಟಾಕ್ಸಿಕ್’ ಸಿನಿಮಾ ಅನ್ನು ಸ್ವೀಕರಿಸುತ್ತಿದ್ದಾರೆ ಎಂದು ಹಿಂದಿ ಚಿತ್ರರಂಗದ ಹಿರಿಯ ಸಿನಿಮಾ ವಿತಕರ ಮತ್ತು ಸಿನಿಮಾ ಮಂದಿರದ ಮಾಲೀಕರೂ ಸಹ ಆಗಿರುವ ಮನೋಜ್ ದೇಸಾಯಿ ವಿವರಿಸಿದ್ದಾರೆ.

ಮನೋಜ್ ದೇಸಾಯಿ ಅವರು ಮುಂಬೈನಲ್ಲಿರುವ ತಮ್ಮ ಎರಡೂ ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಸಿನಿಮಾ ಪ್ರದರ್ಶಿಸುತ್ತಿದ್ದಾರೆ. ಸ್ಥಳೀಯ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಮನೋಜ್ ದೇಸಾಯಿ, ‘ಟಾಕ್ಸಿಕ್’ ಸಿನಿಮಾ ಹಿಂದಿ ಭಾಷಿಕರಿಗೆ ಇಷ್ಟವಾಗಿದೆ. ಜನ ಖುಷಿಯಿಂದ ಬಂದು ಸಿನಿಮಾ ನೋಡುತ್ತಿದ್ದಾರೆ’ ಎಂದಿದ್ದಾರೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಆಗಿ ನಾಲ್ಕನೇ ದಿನಕ್ಕೆ ಮನೋಜ್ ದೇಸಾಯಿ ಅವರು ಸಂದರ್ಶನ ನೀಡಿದ್ದು, ನಾಲ್ಕನೇ ದಿನವೂ ಸಹ ತಮ್ಮ ಎರಡೂ ಚಿತ್ರಮಂದಿರಗಳಲ್ಲಿ ಸಿನಿಮಾ ಹೌಸ್​​ ಫುಲ್ ಆಗಿದೆ ಎಂದಿದ್ದಾರೆ.

ತಾವು ‘ಕೆಜಿಎಫ್’ ಸಿನಿಮಾವನ್ನೂ ಸಹ ತಮ್ಮ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಿದ್ದು, ಆ ಸಿನಿಮಾಗಳು ಸಹ ದೊಡ್ಡ ಹಿಟ್ ಆಗಿದ್ದವು. ಹಾಗೆಯೇ ಈ ಸಿನಿಮಾ ಸಹ ಚೆನ್ನಾಗಿ ಓಡುತ್ತಿವೆ. ತಾವು ಮುಂಬೈನ ಮಲ್ಟಿಪ್ಲೆಕ್ಸ್​​ಗಳಿಗೆ ಹೋಲಿಸಿದರೆ ಕಡಿಮೆ ದರಕ್ಕೆ ಟಿಕೆಟ್ ಮಾರಾಟ ಮಾಡುತ್ತಿದ್ದೇವೆ ಹಾಗಾಗಿ ಹೆಚ್ಚು ಜನ ಸಿನಿಮಾ ನೋಡಲು ಬರುತ್ತಿದ್ದಾರೆ. ಯಶ್ ಅವರ ಅಭಿಮಾನಿಗಳು ಸಹ ಹೆಚ್ಚಾಗಿದ್ದಾರೆ ಎಂದು ಮನೋಜ್ ಅವರು ಹೇಳಿದ್ದಾರೆ.

ಇದನ್ನೂ ಓದಿ:‘ಟಾಕ್ಸಿಕ್’ ಕಥೆ ಹೇಳಿ ಅಂತ ಸವಾಲು ಹಾಕಿದವರಿಗೆ ಮಾಸ್ಟರ್ ಆನಂದ್ ಖಡಕ್ ಪ್ರತಿಕ್ರಿಯೆ

ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಮನೋಜ್ ದೇಸಾಯಿ, ‘ಸಿನಿಮಾ ಸಾಮಾನ್ಯ ಜನರಿಗೆ ಅರ್ಥ ಆಗುವುದು ತುಸು ಕಷ್ಟವಾಗಿದೆ. ಏಕೆಂದರೆ ಸಿನಿಮಾನಲ್ಲಿ ಸಾಕಷ್ಟು ಸೈಕಾಲಜಿಕಲ್ ಅಂಶಗಳು ಸಹ ಇವೆ. ಹಾಗಾಗಿ ಎಲ್ಲರಿಗೂ ಸುಲಭಕ್ಕೆ ಅರ್ಥ ಆಗುವ ಸಿನಿಮಾ ಇದಲ್ಲ. ಆದರೂ ಜನ ಆಕ್ಷನ್ ಇನ್ನಿತರೆ ಕಾರಣಗಳಿಗಾಗಿ ಸಿನಿಮಾ ನೋಡುತ್ತಿದ್ದಾರೆ. ಜನರು ತೀರ್ಪು ಕೊಟ್ಟಾಗಿದೆ. ‘ಟಾಕ್ಸಿಕ್’ ಸಿನಿಮಾ ಅನ್ನು ಗೆಲ್ಲಿಸಲಾಗಿದೆ’ ಎಂದಿದ್ದಾರೆ ಮನೋಜ್.

ಮನೋಜ್ ದೇಸಾಯಿ ಅವರು ಹಿಂದಿ ಚಿತ್ರರಂಗದ ಹಿರಿಯ ಸಿನಿಮಾ ವಿತರಕ ಮತ್ತು ಪ್ರದರ್ಶಕ. ಸಿನಿಮಾ ನಿರ್ಮಾಣವನ್ನೂ ಹಿಂದೆ ಮಾಡಿದ್ದರಂತೆ. ಬಾಲಿವುಡ್​​ನ ಹಲವು ದೊಡ್ಡ ನಿರ್ಮಾಪಕರೊಟ್ಟಿಗೆ ಆಪ್ತ ಬಂಧವನ್ನು ಹೊಂದಿದ್ದಾರೆ. ಕೋವಿಡ್ ಬಳಿಕ ಸಿನಿಮಾಗಳ ಕಲೆಕ್ಷನ್ ಲೆಕ್ಕಾಚಾರ, ಸಿನಿಮಾಗಳ ವಿಮರ್ಶೆಗಳನ್ನು ಸಹ ಅವರು ನೀಡುತ್ತಿದ್ದಾರೆ. ವಿಶೇಷವಾಗಿ ದಕ್ಷಿಣದಿಂದ ಬಂದ ಸಿನಿಮಾಗಳು ಹಿಂದಿ ಪ್ರದೇಶದಲ್ಲಿ ಹೇಗೆ ಗಳಿಕೆ ಮಾಡುತ್ತಿವೆ ಎಂದು ತಿಳಿಸುತ್ತಿರುತ್ತಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ಬದರಿನಾಥದ ಮಹಿಳೆಯರ ಜೊತೆ ಜಾನಪದ ನೃತ್ಯ ಮಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ!
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ವೇದಿಕೆ ಮೇಲೆಯೇ ಶಿಡ್ಲಘಟ್ಟ ತಹಶೀಲ್ದಾರ್​​ಗೆ ಡಿಸಿ ಕ್ಲಾಸ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ