AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಗೆ 80 ಕೋಟಿ ಮನೆ ಕೊಟ್ಟು ನಿಧನ ಹೊಂದಿದ ‘ಕಿರಾತಕ’ ನಟ; ಬೇಸರದಲ್ಲಿ ಗುಡಿಸಲು ಸೇರಿದ ಅಮ್ಮ

ಖ್ಯಾತ ನಟ ಡೇನಿಯಲ್ ಬಾಲಾಜಿ ಅವರ ಅಕಾಲಿಕ ನಿಧನದ ನಂತರ ಅವರ ತಾಯಿ ರಾಜಲಕ್ಷ್ಮಿ ತೀವ್ರ ದುಃಖದಲ್ಲಿದ್ದಾರೆ. ಮಗ ಕಟ್ಟಿಸಿದ್ದ 80 ಕೋಟಿ ಬೆಲೆಯ ಅದ್ದೂರಿ ಬಂಗಲೆಯನ್ನು ತೊರೆದು, ಆವಡಿಯಲ್ಲಿರುವ ದೇವಸ್ಥಾನದ ಬಳಿಯ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಮಗನ ಅಗಲಿಕೆಯ ನೋವು ತಾಳಲಾರದೆ ಈ ನಿರ್ಧಾರ ತೆಗೆದುಕೊಂಡಿದ್ದು, ಇದು ಅಭಿಮಾನಿಗಳನ್ನು ಕಣ್ಣೀರಾಗಿಸಿದೆ.

ತಾಯಿಗೆ 80 ಕೋಟಿ ಮನೆ ಕೊಟ್ಟು ನಿಧನ ಹೊಂದಿದ ‘ಕಿರಾತಕ’ ನಟ; ಬೇಸರದಲ್ಲಿ ಗುಡಿಸಲು ಸೇರಿದ ಅಮ್ಮ
ಡೇನಿಯಲ್
 ಶ್ರೀಲಕ್ಷ್ಮೀ ಎಚ್
| Edited By: |

Updated on:May 01, 2026 | 11:59 AM

Share

ಪೋಷಕರು ಬದುಕಿರುವಾಗಲೇ ಮಕ್ಕಳ ಸಾವು ಸಂಭವಿಸುವುದು ಬದುಕಿನ ಅತಿದೊಡ್ಡ ಆಘಾತ. ಇಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ತಮಿಳು ಚಿತ್ರರಂಗದ ಹೀರೋ ಮನೆಯಲ್ಲಿ ನಡೆದಿತ್ತು. ಖ್ಯಾತ ನಟ ಡೇನಿಯಲ್ ಬಾಲಾಜಿ ಅವರ ನಿಧನದ ನಂತರ ಅವರ ತಾಯಿ ರಾಜಲಕ್ಷ್ಮಿ ಅವರ ಪರಿಸ್ಥಿತಿ ಕಂಡು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ಅವರು ಬಂಗಲೆ ತೊರೆದು ಸಣ್ಣ ಮನೆಯಲ್ಲಿ ವಾಸವಾಗುತ್ತಿದ್ದಾರೆ.

ಕೇವಲ ತಮಿಳು ಮಾತ್ರವಲ್ಲದೆ ಕನ್ನಡ ಚಿತ್ರರಂಗದಲ್ಲೂ ಡೇನಿಯಲ್ ಬಾಲಾಜಿ ತಮ್ಮ ಛಾಪು ಮೂಡಿಸಿದ್ದರು. ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಕಿರಾತಕ’ ಮೂಲಕ ಇವರು ಚಂದನವನಕ್ಕೆ ಪದಾರ್ಪಣೆ ಮಾಡಿದ್ದರು. ಇದಾದ ಬಳಿಕ ‘ಶಿವಾಜಿನಗರ’ದಂತಹ ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಅವರ ಕಂಚಿನ ಕಂಠ ಹಾಗೂ ನೈಜ ನಟನೆಯನ್ನು ಕನ್ನಡಿಗರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

2024ರಲ್ಲಿ ಡೇನಿಯಲ್ ಬಾಲಾಜಿ ಕೇವಲ 48ನೇ ವಯಸ್ಸಿಗೆ ಹೃದಯಾಘಾತದಿಂದ ನಿಧನರಾದರು. ಅವರ ಅಕಾಲಿಕ ಮರಣ ಇಡೀ ಚಿತ್ರರಂಗ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟ ತಂದಿತು. ವೇಟ್ಟೈಯಾಡು ವಿಲೈಯಾಡು, ಪೋಲ್ಲಾಧವನ್ ಮತ್ತು ವಾಡಾ ಚೆನ್ನೈನಂತಹ ಸಿನಿಮಾಗಳಲ್ಲಿ ಅವರ ನೆಗೆಟಿವ್ ಶೇಡ್ ಪಾತ್ರಗಳು ಜನಪ್ರಿಯವಾಗಿದ್ದವು.

ಡೇನಿಯಲ್ ಬಾಲಾಜಿ ತಮ್ಮ ತಾಯಿ ರಾಜಲಕ್ಷ್ಮಿ ಅವರಿಗಾಗಿ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ಅದ್ದೂರಿ ಬಂಗಲೆಯನ್ನು ನಿರ್ಮಿಸಿದ್ದರು. ಮಗನ ಪ್ರೀತಿಯ ಅರಮನೆಯಲ್ಲಿ ತಾಯಿ ವಾಸವಿದ್ದರು. ಆದರೆ ಮಗನ ಸಾವಿನ ನಂತರ ಆ ಮನೆಯ ಪ್ರತಿಯೊಂದು ಮೂಲೆ ಕೂಡ ಮಗನ ನೆನಪನ್ನು ಕಾಡತೊಡಗಿತು.

ಇದನ್ನೂ ಓದಿ: ಪತ್ನಿಯ ಅಕ್ರಮ ಸಂಬಂಧ: ಪವಿತ್ರಾ ನನಗೇ ಬೇಕು; ಎಂಬ ಹಠಕ್ಕೆ ಕಿರಾತಕ ಪ್ರಿಯತಮ ಮಾಡಿದ್ದೇನು ನೋಡಿ?

ಮಗನ ಅಗಲಿಕೆಯ ದುಃಖ ತಾಳಲಾರದೆ ಆ ತಾಯಿ ಈಗ ಆ ಕೋಟ್ಯಂತರ ರೂಪಾಯಿ ಬೆಲೆಯ ಬಂಗಲೆಯನ್ನು ತೊರೆದಿದ್ದಾರೆ. ಮಗ ತನ್ನ ಜೀವಿತಾವಧಿಯಲ್ಲಿ ಚೆನ್ನೈನ ಆವಡಿಯಲ್ಲಿ ಕಟ್ಟಿಸಿದ್ದ ದೇವಸ್ಥಾನದ ಬಳಿಯಿರುವ ಒಂದು ಪುಟ್ಟ ಗುಡಿಸಲಿನಲ್ಲಿ ಇಂದು ಆ ತಾಯಿ ವಾಸಿಸುತ್ತಿದ್ದಾರೆ. ಒಬ್ಬ ಯಶಸ್ವಿ ನಟ ತನ್ನ ತಾಯಿಗಾಗಿ ಕಟ್ಟಿಸಿದ ಬಂಗಲೆ, ಮಗನ ನೆನಪಿಗಾಗಿ ತಾಯಿ ಅದನ್ನು ಬಿಟ್ಟು ಸಾಮಾನ್ಯ ಬದುಕು ನಡೆಸುತ್ತಿರುವುದು ಪ್ರತಿಯೊಬ್ಬರ ಮನ ಕಲಕುವಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:21 am, Fri, 1 May 26

Follow Us
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಜ್ಯುವೆಲರಿಗೆ ಕನ್ನ: ಗೋಡೆ ಕೊರೆದು 70 ಕೆಜಿ ಬೆಳ್ಳಿ ಕಳ್ಳತನ
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಕುಡಿದ ನಶೆಯಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು
ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದವನಿಗೆ ಗುಂಡೇಟು
ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದವನಿಗೆ ಗುಂಡೇಟು
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ?
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಬೆಂಗಳೂರಿನಲ್ಲಿ ಆಟೋ ಚಾಲಕನಿಗೆ ಥಳಿಸಿದ ಪೊಲೀಸರು
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ಚರಂಡಿ ನೀರಲ್ಲಿ ಸ್ನಾನ ಮಾಡಿ, ಅದೇ ನೀರಿನಲ್ಲಿ ಆಹಾರ ಅದ್ದಿ ತಿಂದ ಪುನೀತ್
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ನಿಮಗೆ ಲವ್ ಮ್ಯಾರೇಜ್ ಆಗುತ್ತೋ, ಅರೆಂಜ್ ಮ್ಯಾರೇಜ್ ಆಗುತ್ತೋ?
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇಂದು ಈ ರಾಶಿಯವರ ವ್ಯಾಪಾರ, ವ್ಯವಹಾರಗಳು ಚೆನ್ನಾಗಿರುತ್ತೆ!
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ
ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ