ದೀಪಾವಳಿಗೆ ಬಿಡುಗಡೆ ಆಗಲಿದೆ ದುನಿಯಾ ವಿಜಯ್ ತಮಿಳು ಸಿನಿಮಾ
ದುನಿಯಾ ವಿಜಯ್ ಅವರು ಪ್ರಸ್ತುತ ‘ಸಿಟಿ ಲೈಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ವಿನಯ್ ರಾಜ್ಕುಮಾರ್ ನಾಯಕ ಹಾಗೂ ದುನಿಯಾ ವಿಜಯ್ ಪುತ್ರಿ ನಾಯಕಿಯಾಗಿ ನಟಿಸಿದ್ದಾರೆ. ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ದುನಿಯಾ ವಿಜಯ್ ಅವರು ತೆಲುಗಿನ ‘ಸ್ಲಂ ಡಾಗ್’ ಸಿನಿಮಾನಲ್ಲಿ ಸಹ ನಟಿಸಿದ್ದಾರೆ. ಆ ಸಿನಿಮಾ ಅನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ವಿಜಯ್ ಸೇತುಪತಿ ಮತ್ತು ಟಬು ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.

ಮುಖ್ಯಾಂಶಗಳು
- ದುನಿಯಾ ವಿಜಯ್ ತಮಿಳು ಸಿನಿಮಾ
- ಮೂಕುತ್ತಿ ಅಮ್ಮನ್ 2 ಸಿನಿಮಾನಲ್ಲಿ ವಿಜಿ ನಟಿಸಿದ್ದಾರೆ.
- ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ.
ದುನಿಯಾ ವಿಜಯ್ ಕನ್ನಡದ ಜನಪ್ರಿಯ ನಟ ಮತ್ತು ನಿರ್ದೇಶಕ. ಕನ್ನಡದ ಜೊತೆಗೆ ಪರ ಭಾಷೆ ಸಿನಿಮಾಗಳಲ್ಲಿಯೂ ದುನಿಯಾ ವಿಜಯ್ ನಟಿಸುತ್ತಾ ಬಂದಿದ್ದಾರೆ. ಈಗಾಗಲೇ ಕೆಲ ತೆಲುಗು ಸಿನಿಮಾಗಳಲ್ಲಿ ದುನಿಯಾ ವಿಜಯ್ ನಟಿಸಿದ್ದು, ಇದೇ ಮೊದಲ ಬಾರಿಗೆ ತಮಿಳು ಸಿನಿಮಾ ಒಂದರಲ್ಲಿ ನಟನೆ ಮಾಡಿದ್ದಾರೆ. ಬಹು ತಾರಾಗಣದ ಆ ಸಿನಿಮಾನಲ್ಲಿ ನಯನತಾರಾ ಪ್ರಮುಖ ನಾಯಕಿ. ಸಿನಿಮಾ ಚಿತ್ರೀಕರಣವನ್ನು ದುನಿಯಾ ವಿಜಯ್ ಮುಗಿಸಿ ತಿಂಗಳುಗಳೇ ಆಗಿವೆ. ಇದೀಗ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಪ್ರಕಟಣೆ ಹೊರಬಿದ್ದಿದ್ದು, ಕನ್ನಡದ ಯಶ್ ನಟನೆಯ ಹೊಸ ಸಿನಿಮಾ ಬಿಡುಗಡೆ ಆಗುವ ದಿನವೇ ದುನಿಯಾ ವಿಜಯ್ ಅವರ ಸಿನಿಮಾ ಸಹ ರಿಲೀಸ್ ಆಗಲಿದೆ.
ದುನಿಯಾ ವಿಜಯ್ ಅವರು ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ನಟನೆ ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಸುಂದರ್ ನಿರ್ದೇಶನ ಮಾಡಿರುವ ಈ ಸಿನಿಮಾನಲ್ಲಿ ನಯನತಾರಾ, ಖುಷ್ಬು, ಮೀನಾ ಸೇರಿದಂತೆ ಹಲವು ಖ್ಯಾತನಾಮ ನಟಿಯರಿದ್ದಾರೆ. ಸಿನಿಮಾನಲ್ಲಿ ದುನಿಯಾ ವಿಜಯ್ ಪ್ರಮುಖವಾದ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ದುನಿಯಾ ವಿಜಯ್ ನಟನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
‘ಮೂಕುತ್ತಿ ಅಮ್ಮನ್ 2’ ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಅಸಲಿಗೆ ದುನಿಯಾ ವಿಜಯ್ ಅವರು ಕೆಲ ತಿಂಗಳ ಹಿಂದೆಯೇ ಸಿನಿಮಾದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಆದರೆ ಸಿನಿಮಾ ಇನ್ನೂ ಬಿಡುಗಡೆ ಆಗಿಲ್ಲ. ಇದೀಗ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ‘ಮೂಕುತ್ತಿ ಅಮ್ಮನ್ 2’ ಸಿನಿಮಾವು ಇದೇ ದೀಪಾವಳಿಗೆ ಬಿಡುಗಡೆ ಆಗಲಿದೆಯಂತೆ. ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲವಾದರೂ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗಲಿವೆ. ಅದೇ ಸಮಯದಲ್ಲಿ ಯಶ್ ನಟನೆಯ ‘ರಾಮಾಯಣ’ ಸಿನಿಮಾ ರಿಲೀಸ್ ಆಗಲಿದೆ. ಅದೇ ಸಮಯದಲ್ಲಿ ರಜನೀಕಾಂತ್ ನಟನೆಯ ‘ಜೈಲರ್ 2’ ಸಿನಿಮಾ ಸಹ ಬಿಡುಗಡೆ ಆಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇವುಗಳ ಜೊತೆಗೆ ದುನಿಯಾ ವಿಜಯ್ ಅವರ ಮೊದಲ ತಮಿಳು ಸಿನಿಮಾ ಸಹ ಬಿಡುಗಡೆ ಆಗಲಿದೆ.
ಇದನ್ನೂ ಓದಿ:ದುನಿಯಾ ವಿಜಯ್ ಜೊತೆ ವಿಚ್ಛೇದನ ಪಡೆದ ಬಳಿಕ ನಾಗರತ್ನ ಅಚ್ಚರಿಯ ಬರಹ
ದುನಿಯಾ ವಿಜಯ್ ಅವರು ಪ್ರಸ್ತುತ ‘ಸಿಟಿ ಲೈಟ್ಸ್’ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾನಲ್ಲಿ ವಿನಯ್ ರಾಜ್ಕುಮಾರ್ ನಾಯಕ ಹಾಗೂ ದುನಿಯಾ ವಿಜಯ್ ಪುತ್ರಿ ನಾಯಕಿಯಾಗಿ ನಟಿಸಿದ್ದಾರೆ. ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ದುನಿಯಾ ವಿಜಯ್ ಅವರು ತೆಲುಗಿನ ‘ಸ್ಲಂ ಡಾಗ್’ ಸಿನಿಮಾನಲ್ಲಿ ಸಹ ನಟಿಸಿದ್ದಾರೆ. ಆ ಸಿನಿಮಾ ಅನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದು, ವಿಜಯ್ ಸೇತುಪತಿ ಮತ್ತು ಟಬು ಮುಖ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




