ಫಿಟ್ ಅಂಡ್ ಫೈನ್ ಆಗಿರಲು ಹೀಗೆಲ್ಲಾ ಮಾಡ್ತಾರಂತೆ ಈ ಪಂಜಾಬಿ ಬ್ಯೂಟಿ

ಈಕೆ ಮೆಹ್ರೆನ್ ಕೌರ್ ಫಿರ್ಝಾದ. ಬಾಲಿವುಡ್ ಫಿಲ್ಲೌರಿ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಎಂಟ್ರಿ ಕೊಟ್ಟ ತಾರೆ. ಮುಗ್ಧ ನಟನೆಯ ಮೂಲಕ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಪಂಜಾಬಿ ಬ್ಯೂಟಿ. ಇವರ ನಟನೆಗೆ ಮಾತ್ರವಲ್ಲ ಇವರ ಸೌಂದರ್ಯ ಮತ್ತು ಲೀನ್ ಫಿಗರ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಮೆಹ್ರೆನ್ ಫಿಟ್ ಆ್ಯಂಡ್ ಫೈನ್ ಬಾಡಿಯ ಗುಟ್ಟು ನಿತ್ಯ ವರ್ಕೌಟ್ ಅಂತೆ. ಫಿಟ್ನೆಸ್ ಬಗ್ಗೆ ಮೆಹ್ರೆನ್ ಸಖತ್ ಸೀರಿಯಸ್ […]

ಫಿಟ್ ಅಂಡ್ ಫೈನ್ ಆಗಿರಲು ಹೀಗೆಲ್ಲಾ ಮಾಡ್ತಾರಂತೆ ಈ ಪಂಜಾಬಿ ಬ್ಯೂಟಿ
Follow us
ಸಾಧು ಶ್ರೀನಾಥ್​
| Updated By: Skanda

Updated on:Nov 24, 2020 | 7:44 AM

ಈಕೆ ಮೆಹ್ರೆನ್ ಕೌರ್ ಫಿರ್ಝಾದ. ಬಾಲಿವುಡ್ ಫಿಲ್ಲೌರಿ ಸಿನಿಮಾದ ಮೂಲಕ ಸಿನಿ ಅಂಗಳಕ್ಕೆ ಎಂಟ್ರಿ ಕೊಟ್ಟ ತಾರೆ. ಮುಗ್ಧ ನಟನೆಯ ಮೂಲಕ ಸಿನಿರಸಿಕರ ಗಮನವನ್ನು ತನ್ನತ್ತ ಸೆಳೆದ ಚೆಲುವೆ. ತಮಿಳು ಮತ್ತು ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ಈ ಪಂಜಾಬಿ ಬ್ಯೂಟಿ.

ಇವರ ನಟನೆಗೆ ಮಾತ್ರವಲ್ಲ ಇವರ ಸೌಂದರ್ಯ ಮತ್ತು ಲೀನ್ ಫಿಗರ್​ಗೆ ಎಲ್ಲರೂ ಫಿದಾ ಆಗಿದ್ದಾರೆ. ಮೆಹ್ರೆನ್ ಫಿಟ್ ಆ್ಯಂಡ್ ಫೈನ್ ಬಾಡಿಯ ಗುಟ್ಟು ನಿತ್ಯ ವರ್ಕೌಟ್ ಅಂತೆ. ಫಿಟ್ನೆಸ್ ಬಗ್ಗೆ ಮೆಹ್ರೆನ್ ಸಖತ್ ಸೀರಿಯಸ್ ಅಂತೆ. ಸೋ ತಪ್ಪದೇ ಜಿಮ್​ ವರ್ಕೌಟ್ ಮಾಡ್ತಾರೆ. ಇನ್ನು ಇವರ ವರ್ಕೌಟ್​ನಲ್ಲಿ ಕಾರ್ಡಿಯೋ, ಲೆಗ್ ವರ್ಕೌಟ್​, ಲೈಟ್​ ವೇಟ್​ ಟ್ರೇನಿಂಗ್ ಇರುತ್ತಂತೆ. ಹಾಗೆಯೇ ಪ್ರತಿದಿನ ಯೋಗ ಕೂಡಾ ಮಾಡ್ತಾರಂತೆ ಇವರು.

ಟೋನ್ಡ್​ ಬಾಡಿ ಮೇಂಟೇನ್ ಮಾಡಲು ಸ್ಟ್ರಿಟ್​ ವರ್ಕೌಟ್​ ಫಾಲೋ ಮಾಡ್ತಾರಂತೆ. ತನ್ನ ಸ್ಟ್ರೆಂಥ್ ಹಾಗೂ ಫ್ಲೆಕ್ಸಿಬಲಿಟಿ ಹೆಚ್ಚಿಸಲು ಕಿಕ್​ ಬಾಕ್ಸಿಂಗ್​ ಮತ್ತು ಜಿಮ್ ತುಂಬಾನೇ ಸಹಕಾರಿಯಾಗಿದೆ ಅಂತಾರೆ ಫಿಟ್ನೆಸ್ ಫ್ರೀಕ್ ಮೆಹ್ರೆನ್. ಹಾಗೆಯೇ ಇವರ ಜಿಮ್ ವರ್ಕೌಟ್​ನಲ್ಲಿ ಪುಲ್ ಅಪ್ಸ್​, ಪುಶ್​ ಅಪ್ಸ್​, ಆಬ್ಸ್​ ವರ್ಕೌಟ್ ಕೂಡಾ ಒಳಗೊಂಡಿರುತ್ತಂತೆ.

https://www.instagram.com/p/BZKfSZ_HMD7/?utm_source=ig_web_copy_link

ಪ್ರತಿ ದಿನ ತಪ್ಪದೇ ವರ್ಕೌಟ್ ಮಾಡೋದ್ರಿಂದ ಇಷ್ಟು ಫಿಟ್​ ಆಗಿರಲು ಸಾಧ್ಯ ಅನ್ನೋದು ಮೆಹ್ರೆನ್ ಅವರ ಮಾತು. ಫಂಕ್ಷನಲ್​ ಟ್ರೇನಿಂಗ್​ ಮತ್ತು ವೇಟ್​ ಟ್ರೇನಿಂಗ್ ಮಾಡೋದು ಅಂದ್ರೆ ತುಂಬ ಇಷ್ಟವಂತೆ. ಈ ಎಲ್ಲಾ ಎಕ್ಸ್​ಸೈಜ್​ಗಳು ಇವರನ್ನು ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಮಾಡಿದೆ.

Published On - 9:19 pm, Thu, 24 October 19