ಹಾರ್ಮೋನ್ ಬೆಳವಣಿಗೆಗೆ 15ನೇ ವಯಸ್ಸಿನಲ್ಲಿ ಇಂಜೆಕ್ಷನ್ ತೆಗೆದುಕೊಂಡಿದ್ದ ನಟಿ?
ಹನ್ಸಿಕಾ ಮೋಟ್ವಾನಿ, ಒಮ್ಮೆ ಟಾಪ್ ಹೀರೋಯಿನ್ ಆಗಿದ್ದ ನಟಿ, ಅವರು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದು ಎಂಬ ವದಂತಿಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಯಶಸ್ವಿ ವೃತ್ತಿಜೀವನದ ಮಧ್ಯೆ ಮದುವೆಯಾದ ಅವರು, ತೆಲುಗು ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. 'ಬಿಂದಾಸ್' ಅವರು ನಟಿಸಿದ ಕನ್ನಡದ ಏಕೈಕ ಸಿನಿಮಾ ಅನ್ನೋದು ವಿಶೇಷ.
ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿ ಮಿಂಚಿದ್ದ ಈ ನಟಿ ಇತ್ತೀಚೆಗಷ್ಟೇ ಅನೇಕ ಹುಡುಗರ ಹೃದಯವನ್ನು ಮುರಿದಿದ್ದಾರೆ. ತಮ್ಮ ವೃತ್ತಿಜೀವನವು ಉತ್ತಮ ಸ್ಥಿತಿಯಲ್ಲಿದ್ದಾಗ ಅವರು ಮದುವೆಯಾದರು. ತೆಲುಗಿನಲ್ಲಿ ಮೊದಲ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಯಿತು. ಇದಾದ ನಂತರ ಸಾಲು ಸಾಲು ಆಫರ್‌ಗಳನ್ನು ಪಡೆಯುತ್ತಾ ಬ್ಯುಸಿಯಾದರು. ಅವರು 15ನೇ ವಯಸ್ಸಿಗೆ ಬೇಗ ದೊಡ್ಡವರಾಗಲಿ ಎಂದು ಅವರು ಹಾರ್ಮೋನ್ ಇಂಜೆಕ್ಷನ್ ಪಡೆದಿದ್ದರು ಎನ್ನುವ ಆರೋಪ ಇದೆ.
ಮೊದಲು ಬಾಲ ಕಲಾವಿದೆಯಾಗಿ ನಟಿಸಿದ ಹನ್ಸಿಕಾ, 15ನೇ ವಯಸ್ಸಿಗೆ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಈ ನಟಿ ತೆಲುಗು, ಹಿಂದಿ ಭಾಷೆಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕನ್ನಡದಲ್ಲಿ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದರು. ಆದರೆ ಬೇಗ ಎತ್ತರ ಹೆಚ್ಚಿಸಿಕೊಳ್ಳಲು ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಅವರು ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಹನ್ಸಿಕಾ ಮೋಟ್ವಾನಿ ಟಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಸ್ಟಾರ್ ನಟ ಅಲ್ಲು ಅರ್ಜುನ್ ಅಭಿನಯದ ‘ದೇಶಮುದುರು’ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯವಾದರು. ಆ ನಂತರ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸರಣಿ ಚಿತ್ರಗಳನ್ನು ಮಾಡಿದರು. ಕನ್ನಡದಲ್ಲಿ ಅವರು ನಟಿಸಿದ ಏಕೈಕ ಸಿನಿಮಾ ‘ಬಿಂದಾಸ್’. ಪುನೀತ್ ರಾಜ್ಕುಮಾರ್ ಜೊತೆ ಅವರು ತೆರೆಹಂಚಿಕೊಂಡಿದ್ದರು.
ಸಿನಿಮಾ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವಾಗಲೇ ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಅವರನ್ನು ವಿವಾಹವಾದರು. ಹನ್ಸಿಕಾ ಬೇಗ ಬೆಳೆಯಲು ಚುಚ್ಚುಮದ್ದು ಬಳಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.ಇವುಗಳ ಬಗ್ಗೆ ಮೊನ್ನೆಯಷ್ಟೇ ಪ್ರತಿಕ್ರಿಯಿಸಿದ್ದ ಹನ್ಸಿಕಾ, ಆ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದಿದ್ದಾರೆ. ತನಗೆ ಕೇವಲ 21 ವರ್ಷದವಳಿದ್ದಾಗ ಇಂತಹ ನಿಷ್ಪ್ರಯೋಜಕ ಸುದ್ದಿಗಳನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ತೆಲುಗಿನ ಇಬ್ಬರು ನಟರ ಕೊಂಡಾಡಿದ ಹನ್ಸಿಕಾ ಮೊಟ್ವಾನಿ: ಯಾರವರು?
ಹನ್ಸಿಕಾ ಅವರು ಹಲವು ಚಿತ್ರಗಳಲ್ಲಿ ಈಗಲೂ ನಟಿಸುತ್ತಿದ್ದಾರೆ. ‘ರೌಡಿ ಬೇಬಿ’, ‘ಮ್ಯಾನ್’ ‘ಗಾಂಧಿ’ ಹೆಸರಿನ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಹನ್ಸಿಕಾ ಮದುವೆ ಆಗಿ ಮೂರು ವರ್ಷಗಳು ಕಳೆದಿವೆ. ಅವರ ಕಡೆಯಿಂದ ಹೊಸ ಸುದ್ದಿ ಸಿಗಲಿದೆಯೇ ಎನ್ನುವ ಪ್ತಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.