AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್ ಅಂಶ್’ ಸಿನಿಮಾದ ಲಾಭ ಬಡಮಕ್ಕಳ ಏಳಿಗೆಗೆ ಬಳಕೆ: ನಿರ್ಮಾಪಕಿ ಘೋಷಣೆ

‘ಹನುಮಾನ್ ಅಂಶ್’ ಸಿನಿಮಾ ಬಿಡುಗಡೆ ಆಗಿ ತಿಂಗಳಾಗುತ್ತಾ ಬಂದಿದ್ದರೂ, ಪ್ರತಿ ದಿನವೂ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಹೆಸರೇ ಕೇಳದ ಹಲವು ಕಲಾವಿದರು ನಟಿಸಿರು, ಇಡೀ ಬಾಲಿವುಡ್ ನಿರ್ಲಕ್ಷ ಮಾಡಿದ್ದ ನಿರ್ದೇಶಕ ವಿಶಾಲ್ ಚತುರ್ವೇದಿ ನಿರ್ದೇಶಿಸಿರುವ ಈ ಸಿನಿಮಾ ಇಂದು ದಾಖಲೆಗಳನ್ನು ಬರೆಯುತ್ತಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಈ ಸಿನಿಮಾದ ನಿರ್ಮಾಪಕಿ ಇನ್ನೂ 21 ವರ್ಷ ವಯಸ್ಸಿನ ಯುವತಿ ಅನುಪ್ರಿಯಾ ನಾಗರ್.

‘ಹನುಮಾನ್ ಅಂಶ್’ ಸಿನಿಮಾದ ಲಾಭ ಬಡಮಕ್ಕಳ ಏಳಿಗೆಗೆ ಬಳಕೆ: ನಿರ್ಮಾಪಕಿ ಘೋಷಣೆ
Hanuman Ansh
ಮಂಜುನಾಥ ಸಿ.
|

Updated on: Sep 13, 2026 | 5:08 PM

Share

ಮುಖ್ಯಾಂಶಗಳು

  • ಹನುಮಾನ್ ಅಂಶ್ ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆದಿದೆ
  • ಹನುಮಾನ್ ಅಂಶ್ ಸಿನಿಮಾದ ನಿರ್ಮಾಪಕಿ ಅನುಪಮಾ ನಾಗರ್
  • ಲಾಭವನ್ನು ದೇಣಿಗೆ ನೀಡುವ ನಿರ್ಧಾರ ಮಾಡಿದ್ದಾರೆ.

ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದೂಳೆಬ್ಬಿಸಿದೆ. ಕೇವಲ 2 ಕೋಟಿ ಬಜೆಟ್​​ನಲ್ಲಿ ನಿರಮಾಣ ಆಗಿರುವ ಈ ಸಿನಿಮಾ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಸಿನಿಮಾ ಬಿಡುಗಡೆ ಆಗಿ ತಿಂಗಳಾಗುತ್ತಾ ಬಂದಿದ್ದರೂ, ಪ್ರತಿ ದಿನವೂ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗುತ್ತಿದೆ. ಹೆಸರೇ ಕೇಳದ ಹಲವು ಕಲಾವಿದರು ನಟಿಸಿರು, ಇಡೀ ಬಾಲಿವುಡ್ ನಿರ್ಲಕ್ಷ ಮಾಡಿದ್ದ ನಿರ್ದೇಶಕ ವಿಶಾಲ್ ಚತುರ್ವೇದಿ ನಿರ್ದೇಶಿಸಿರುವ ಈ ಸಿನಿಮಾ ಇಂದು ದಾಖಲೆಗಳನ್ನು ಬರೆಯುತ್ತಿದೆ. ಮತ್ತೊಂದು ಪ್ರಮುಖ ವಿಷಯವೆಂದರೆ ಈ ಸಿನಿಮಾದ ನಿರ್ಮಾಪಕಿ ಇನ್ನೂ 21 ವರ್ಷ ವಯಸ್ಸಿನ ಯುವತಿ ಅನುಪ್ರಿಯಾ ನಾಗರ್.

ಹಣಕಾಸು ವಿಷಯದಲ್ಲಿ ಪದವಿ ಮಾಡಿರುವ ಅನುಪ್ರಿಯಾ ನಾಗರ್ ಅವರಿಗೆ ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ ನೀಮ್ ಕರೋಲಿ ಬಾಬಾ ಕುರಿತು ತಿಳಿದು ಅವರ ವಿಚಾರಗಳೆಡೆಗೆ ಸೆಳೆಯಲ್ಪಟ್ಟು ‘ಹನುಮಾನ್ ಅಂಶ್’ ಸಿನಿಮಾ ನಿರ್ಮಿಸಿದರು. ಸಿನಿಮಾ ನಿರ್ಮಾಣ ಮಾಡಬೇಕಾದರೆ ಲಾಭದ ಆಸೆಯಿಲ್ಲದೆ ದೊಡ್ಡ ರಿಸ್ಕ್ ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡಿದರು ಅನುಪ್ರಿಯಾ ಆದರೆ ಇಂದು ಸಿನಿಮಾ ಕೋಟಿಗಳನ್ನು ಬಾಚುತ್ತಿದೆ. ಆದರೆ ಅನುಪ್ರಿಯ ಅವರು ತಮ್ಮ ವಯಸ್ಸಿಗೆ ಮೀರಿದ ನಿರ್ಣಯವೊಂದನ್ನು ಈ ಹಂತದಲ್ಲಿ ತೆಗೆದುಕೊಂಡಿದ್ದಾರೆ. ಸಿನಿಮಾದ ಲಾಭದ ಒಂದಿಷ್ಟು ಭಾಗವನ್ನು ಬಡಮಕ್ಕಳ ಸಹಾಯಕ್ಕಾಗಿ ಮೀಸಲಿಡುವುದಾಗಿ ಹೇಳಿದ್ದಾರೆ. ‘ಮಹಾರಾಜ್ ಜಿ ಅವರ ಆಶೀರ್ವಾದದಿಂದ ಬಂದ ಈ ಹಣವನ್ನು ಬಡ ಮಕ್ಕಳ ಸಹಾಯಕ್ಕಾಗಿ ಮತ್ತು ದಾನಧರ್ಮಕ್ಕಾಗಿ ಬಳಸಲು ಯೋಜಿಸಿದ್ದಾರೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಇದನ್ನೂ ಓದಿ:ತೆಲುಗಿನಲ್ಲಿ ಬರಲಿದೆ ‘ಹನುಮಾನ್ ಅಂಶ್’ ಸಿನಿಮಾ, ರಿಲೀಸ್ ಯಾವಾಗ?

ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅನುಪ್ರಿಯಾ ನಾಗರ್, ‘ಮಹಾರಾಜ್ ಜಿ ಕುರಿತು ಸಿನಿಮಾ ಮಾಡುವುದು ಒಂದು ದೊಡ್ಡ ರಿಸ್ಕ್ ಆಗಿತ್ತು, ಆದರೆ ಬಾಕ್ಸ್ ಆಫೀಸ್ ಗಳಿಕೆಯನ್ನು ತಮ್ಮ ಮುಖ್ಯ ಗುರಿಯಾಗಿಟ್ಟುಕೊಂಡು ಅವರು ಈ ಪ್ರಾಜೆಕ್ಟ್‌ಗೆ ಕೈಹಾಕಿರಲಿಲ್ಲ ಎಂದಿರುವ ಅವರು ಪ್ರೇಕ್ಷಕರು ಸಿನಿಮಾವನ್ನು ನೋಡಿ ಮೆಚ್ಚಿಕೊಳ್ಳುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಕೇವಲ 21ನೇ ವಯಸ್ಸಿನಲ್ಲಿ ಇಷ್ಟು ದೊಡ್ಡ ಮೊತ್ತದ ಹಣದೊಂದಿಗೆ ಏನು ಮಾಡಬೇಕೆಂದು ತಮಗೆ ಸ್ಪಷ್ಟತೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಆದಾಗ್ಯೂ, ಬಂದಿರುವ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ತಮಗೆ ಈಗ ಒಂದು ಯೋಜನೆ ಇದೆ ಎಂದು ಅವರು ತಿಳಿಸಿದ್ದಾರೆ.

ಅಂದಹಾಗೆ ಹನುಮಾನ್ ಅಂಶ್ ಸಿನಿಮಾಕ್ಕೆ ಅನುಪ್ರಿಯಾ ನಾಗರ್ ಮಾತ್ರವೇ ನಿರ್ಮಾಪಕಿ ಅಲ್ಲ. ಅವರೊಟ್ಟಿಗೆ ರಾಗಿಣಿ ಎಸ್, ನಮ್ರತಾ ಜಿ ಸಿಂಗ್ ಮತ್ತು ಸಿನಿಮಾದ ನಿರ್ದೇಶಕ ವಿಶಾಲ್ ಚತುರ್ವೇಧಿ ಸಹ ಬಂಡವಾಳ ಹೂಡಿದ್ದಾರೆ. ನಾಲ್ಕು ಮಂದಿ ಸೇರಿ ಸಿನಿಮಾಕ್ಕೆ 2 ಕೋಟಿ ಬಂಡವಾಳ ಹೂಡಿದ್ದು, ಸಿನಿಮಾ ಇದೀಗ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ನಿರ್ಮಾಪಕರ ಜೇಬಿಗೆ ಕನಿಷ್ಟ 100 ಕೋಟಿ ಆದರೂ ಸೇರಿದೆ. ಸಿನಿಮಾದ ಒಟಿಟಿ ಹಕ್ಕು ಹಾಗೂ ಸ್ಯಾಟಲೈಟ್ ಹಕ್ಕು ಮಾರಾಟ ಬಾಕಿ ಇದೆ. ಇತ್ತೀಚೆಗಷ್ಟೆ ವಿದೇಶದಲ್ಲಿ ಬಿಡುಗಡೆ ಆಗಿರುವ ಈ ಸಿನಿಮಾ ವಿದೇಶಗಳಲ್ಲಿಯೂ ಸಹ ಭರ್ಜರಿ ಗಳಿಕೆ ಮಾಡುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us