AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ

ಹಾಲಿವುಡ್​ನ ಲೆಜೆಂಡರಿ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರಿಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಅವರ ಹೊಸ ಸಿನಿಮಾ ‘ದಿ ಆಡೆಸ್ಸಿ’ ಬಿಡುಗಡೆಗೆ ಇನ್ನೂ ಒಂದು ತಿಂಗಳು ಬಾಕಿ ಇರುವಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದೆ. ಟಿಕೆಟ್ ಬೆಲೆ ಮುಗಿಲುಮುಟ್ಟಿದೆ. ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.

ಭಾರತದಲ್ಲಿ ಕ್ರಿಸ್ಟೋಫರ್ ನೋಲನ್ ಹೊಸ ಸಿನಿಮಾದ ಟಿಕೆಟ್ ಬೆಲೆ 3 ಸಾವಿರ ರೂಪಾಯಿಗೂ ಅಧಿಕ
The Odyssey PosterImage Credit source: Universal Pictures
ಮದನ್​ ಕುಮಾರ್​
|

Updated on: Jun 08, 2026 | 6:02 PM

Share

ಜಗತ್ತಿನಾದ್ಯಂತ ಭಾರಿ ನಿರೀಕ್ಷೆ ಮೂಡಿಸಿರುವ ಖ್ಯಾತ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ‘ದಿ ಆಡೆಸ್ಸಿ’ ಚಿತ್ರದ ಮುಂಗಡ ಬುಕಿಂಗ್ (The Odyssey Advance Booking) ಭಾರತದಲ್ಲಿ ಆರಂಭವಾಗಿದೆ. ಜೂನ್ 8ರಂದು ಬೆಳಗ್ಗೆ 10 ಗಂಟೆಗೆ ಬುಕಿಂಗ್ ಶುರು ಆಗುತ್ತಿದ್ದಂತೆಯೇ ಟಿಕೆಟ್‌ಗಳಿಗಾಗಿ ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ‘ದಿ ಆಡೆಸ್ಸಿ’ (The Odyssey) ಸಿನಿಮಾ ಮುಂದಿನ ತಿಂಗಳು (ಜುಲೈ 17) ಬಿಡುಗಡೆಯಾಗಲಿದ್ದರೂ, ಈಗಲೇ ಟಿಕೆಟ್‌ಗೆ ಈ ಮಟ್ಟದ ಬೇಡಿಕೆ ಸೃಷ್ಟಿಯಾಗಿರುವುದು ಚಿತ್ರರಂಗವನ್ನೇ ಬೆರಗುಗೊಳಿಸಿದೆ. ಇದರ ನಡುವೆ, ಉತ್ತರ ಭಾರತದಲ್ಲಿ ಟಿಕೆಟ್ ದರ ಬರೋಬ್ಬರಿ 3000 ರೂಪಾಯಿ ತಲುಪಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಸಂಪೂರ್ಣವಾಗಿ ಚಿತ್ರೀಕರಿಸಲಾಗಿರುವ ‘ದಿ ಆಡೆಸ್ಸಿ’ ಚಿತ್ರದ ಪ್ರದರ್ಶನಕ್ಕಾಗಿ ನಿರ್ಮಾಣ ಸಂಸ್ಥೆ ಯೂನಿವರ್ಸಲ್ ಪಿಕ್ಚರ್ಸ್ ಸದ್ಯಕ್ಕೆ ಕೇವಲ ಎರಡು ಶೋಗಳನ್ನು ಮಾತ್ರ ಘೋಷಿಸಿದೆ. ಅದೂ ಕೇವಲ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ಮಾತ್ರ! ಒಂದು ಮುಂಜಾನೆಯ ಶೋ ಹಾಗೂ ಮತ್ತೊಂದು ಸಂಜೆ ಅಥವಾ ರಾತ್ರಿಯ ಶೋ ಆಗಿರಲಿದೆ.

ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಹಿಂದಿನ ಚಿತ್ರ ‘ಆಪನ್‌ಹೈಮರ್’ ಬಿಡುಗಡೆಯಾದಾಗಲೂ ಭಾರತದಲ್ಲಿ ದೊಡ್ಡ ಮಟ್ಟದ ಕ್ರೇಜ್ ಇತ್ತು. ಆದರೆ ಆಗ ಟಿಕೆಟ್ ದರಗಳು ಈ ಪ್ರಮಾಣದಲ್ಲಿ ದುಬಾರಿಯಾಗಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕೇವಲ ‘ಧುರಂಧರ್: ದಿ ರಿವೆಂಜ್’ ಚಿತ್ರಕ್ಕೆ ಮಾತ್ರ ಇಂತಹ ಕ್ರೇಜಿ ಡಿಮ್ಯಾಂಡ್ ಕಂಡುಬಂದಿತ್ತು.

ಮಹಾರಾಷ್ಟ್ರದ ಪುಣೆ ನಗರವು ‘ದಿ ಆಡೆಸ್ಸಿ’ ಸಿನಿಮಾದ ಅತ್ಯಂತ ದುಬಾರಿ ಸ್ಕ್ರೀನಿಂಗ್‌ಗೆ ಸಾಕ್ಷಿಯಾಗುತ್ತಿದೆ. ಇಲ್ಲಿ ಆರಂಭಿಕ ಟಿಕೆಟ್ ದರವೇ 1400 ರೂಪಾಯಿಗಳಾಗಿದ್ದು, ಗರಿಷ್ಠ ಬೆಲೆ 3000 ರೂಪಾಯಿಗಳನ್ನು ಮುಟ್ಟಿರುವುದು ಸಿನಿಪ್ರೇಕ್ಷಕರಿಗೆ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಕೂಡ ಈ ಸಿನಿಮಾದ ಟಿಕೆಟ್ ಬೆಲೆ 800 ರೂಪಾಯಿಗಳಿಂದ ಆರಂಭವಾಗಿ 2 ಸಾವಿರ ರೂಪಾಯಿಗಳ ತನಕ ಇದೆ.

ಮುಂಬೈನಲ್ಲಿ ಟಿಕೆಟ್ ದರಗಳು ಸ್ವಲ್ಪ ಮಟ್ಟಿಗೆ ಕೈಗೆಟುಕುವಂತಿದ್ದು, ಬಹುತೇಕ ಕಡೆ 1000 ರೂಪಾಯಿಗಿಂತ ಕಡಿಮೆ ಇವೆ. ಮುಂಬೈನ ‘ಪಿವಿಆರ್ ಲೋವರ್ ಪರೇಲ್’ನಲ್ಲಿ ಮಾತ್ರ ದರಗಳು ಸ್ವಲ್ಪ ಹೆಚ್ಚಾಗಿದ್ದು, ಅಲ್ಲಿ ಆರಂಭಿಕ ಬೆಲೆ 700 ರೂ. ಇದ್ದು, ಗರಿಷ್ಠ 1400 ರೂ.ವರೆಗಿದೆ. ಒಟ್ಟಾರೆಯಾಗಿ ಮುಂಬೈ ನಗರದಲ್ಲಿ ಗರಿಷ್ಠ ಟಿಕೆಟ್ ದರ 2000 ರೂಪಾಯಿಗಳ ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಭಾರತೀಯ ಪ್ರೇಕ್ಷಕರು ಯಾವಾಗಲೂ ಹಾಲಿವುಡ್ ಸಿನಿಮಾಗಳನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುತ್ತಾರೆ. ಆದರೆ, ನಮ್ಮದೇ ದೇಶದ ಸಿನಿಮಾಗಳಿಗೆ ಹೋಲಿಸಿದರೆ ವಿದೇಶಿ ಚಿತ್ರಗಳಿಗೆ ಈ ಮಟ್ಟದ ದರ ನಿಗದಿಪಡಿಸುತ್ತಿರುವುದು ಈಗ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ದುಬಾರಿ ಬೆಲೆಯಿಂದಾಗಿ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು ಅಂದುಕೊಳ್ಳುವ ಅದೆಷ್ಟೋ ಪ್ರೇಕ್ಷಕರಿಗೆ ಟಿಕೆಟ್ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More