ಚೀಸ್ ಅಥವಾ ಸೆಕ್ಸ್ ಯಾವುದನ್ನು ತ್ಯಜಿಸುತ್ತೀರಿ? ಪ್ರಿಯಾಂಕಾ ಕೊಟ್ಟರು ಉತ್ತರ

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್​ನ ಲೇಟ್ ನೈಟ್ ಶೋ ಒಂದರಲ್ಲಿ ಭಾಗವಹಿಸಿ ತೀರ ಖಾಸಗಿ ವಿಷಯಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಚೀಸ್ ಅಥವಾ ಸೆಕ್ಸ್ ಯಾವುದನ್ನು ತ್ಯಜಿಸುತ್ತೀರಿ? ಪ್ರಿಯಾಂಕಾ ಕೊಟ್ಟರು ಉತ್ತರ
ಪ್ರಿಯಾಂಕಾ ಚೋಪ್ರಾ
Follow us
ಮಂಜುನಾಥ ಸಿ.
|

Updated on: May 12, 2023 | 7:31 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಈಗ ಹಾಲಿವುಡ್​ನ (Hollywood) ಖ್ಯಾತ ನಟಿಯರಲ್ಲೊಬ್ಬರು. ಬಹುವರ್ಷಗಳಿಂದ ಹಾಲಿವುಡ್​ನಲ್ಲೇ ನೆಲೆಸಿರುವ ಪ್ರಿಯಾಂಕಾ ಬಹುತೇಕ ಅಲ್ಲಿನವರೇ ಆಗಿಬಿಟ್ಟಿದ್ದಾರೆ. ಪ್ರಿಯಾಂಕಾ ನಟಿಸಿರುವ ವೆಬ್ ಸರಣಿ ಸಿಟಾಡೆಲ್ (Citadel) ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿತ್ತು. ಅದರ ಬೆನ್ನಲ್ಲೆ ಈಗ ಪ್ರಿಯಾಂಕಾ ಮುಖ್ಯ ಪಾತ್ರದಲ್ಲಿ ನಟಿಸಿರುವ ರೊಮ್ಯಾಂಟಿಕ್ ಸಿನಿಮಾ ಲವ್ ಅಗೇನ್ (Love Again) ಇಂದು (ಮೇ 12) ಬಿಡುಗಡೆ ಆಗಿದೆ. ಈ ಸಿನಿಮಾದ ಪ್ರಚಾರಾರ್ಥ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಪ್ರಿಯಾಂಕಾಗೆ ತೀರಾ ಖಾಸಗಿ ಎನಿಸುವ ಕೆಲವು ಪ್ರಶ್ನೆಗಳನ್ನು ಕೇಳಲಾಗಿದ್ದು, ಪ್ರಿಯಾಂಕಾ ಅವಕ್ಕೆಲ್ಲ ಉತ್ತರಿಸಿದ್ದಾರೆ.

ವಾಚ್ ವಾಟ್ ಹ್ಯಾಪೆನ್ಸ್ ಲೈವ್ ವಿತ್ ಆಂಡಿ ಕೊವೆನ್ ಹೆಸರಿನ ಲೇಟ್ ನೈಟ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಲವ್ ಅಗೇನ್ ಸಿನಿಮಾದ ಸಹನಟ ಸ್ಯಾಮ್ ಹ್ಯೂಗನ್ ಜೊತೆಗೆ ಭಾಗವಹಿಸಿದ್ದರು. ಶೋನಲ್ಲಿ ತೀರಾ ಖಾಸಗಿಯಾದ ಪ್ರಶ್ನೆಗಳನ್ನು ಇಬ್ಬರಿಗೂ ಕೇಳಲಾಯ್ತು. ಪರಸ್ಪರರ ಉತ್ತರಗಳು ಎಷ್ಟು ಸರಿಹೊಂದುತ್ತವೆ ಎಂದು ಪರೀಕ್ಷಿಸುವ ಗೇಮ್ ಒಂದನ್ನು ಆಡಲಾಯ್ತು. ಶೋನ ನಿರೂಪಕ ಆಂಡಿ ಕೊವೆನ್, ಯಾವುದಾದರೂ ಒಂದನ್ನು ಜೀವನ ಪರ್ಯಂತ ತೊರೆಯಬೇಕು ಎಂದರೆ ಯಾವುದನ್ನು ತೊರೆಯುತ್ತೀರಿ? ಎಂದು ಆಯ್ಕೆಗಳಾಗಿ ಚೀಸ್ ಮತ್ತು ಓರಲ್ ಸೆಕ್ಸ್ (ಮುಖ ಮೈಥುನ) ಅನ್ನು ನೀಡಿದರು.

ನಿರೂಪಕನ ಪ್ರಶ್ನೆಗೆ ಪ್ರಿಯಾಂಕಾ ಚೋಪ್ರಾ ಮೊದಲು ಉತ್ತರಿಸಲಿಲ್ಲ ನಗಲು ಪ್ರಾರಂಭಿಸಿದರು, ಆದರೆ ಸ್ಯಾಮ್ ಹ್ಯೂಗನ್, ”ನನಗೆ ಚೀಸ್ ಎಂದರೆ ಬಹಳ ಇಷ್ಟ ಆದರೂ ಚೀಸ್ ಅನ್ನೇ ತ್ಯಜಿಸುತ್ತೇನೆ” ಎಂದರು. ಕೊನೆಗೆ ಪ್ರಿಯಾಂಕಾ ಸಹ ನಾನು ನನ್ನ ಸಹನಟನ ಅಭಿಪ್ರಾಯವನ್ನು ಒಪ್ಪುತ್ತೇನೆ ಎಂದರು. ಆ ಮೂಲಕ ತಾವೂ ಸಹ ಚೀಸ್ ಅನ್ನು ತ್ಯಜಿಸುತ್ತೇನೆ ಎಂದರು ಪ್ರಿಯಾಂಕಾ.

ಸೆಲೆಬ್ರಿಟಿ ಆದ ಬಳಿಕ ಬಾಯ್​ಫ್ರೆಂಡ್​ ಅಥವಾ ಗರ್ಲ್​ಫ್ರೆಂಡ್​ಗೆ ಬೆತ್ತಲೆ ಚಿತ್ರಗಳನ್ನು ಕಳಿಸುವುದು ನಿಮಗೆ ಓಕೆನಾ? ಎಂಬ ಪ್ರಶ್ನೆಗೆ ಪ್ರಿಯಾಂಕಾ ಹಾಗೂ ಸ್ಯಾಮ್ ಇಬ್ಬರೂ ಓಕೆ ಎಂದೇ ಹೇಳಿದರು. ಮೊದಲ ಡೇಟ್​ನಲ್ಲಿಯೇ ಸೆಕ್ಸ್​ ಮಾಡುವುದು ಸಾಮಾನ್ಯವೇ ಅಥವಾ ಮಾಡಬಾರದೆ? ಎಂಬ ಪ್ರಶ್ನೆಗೆ ಸಾಮಾನ್ಯ ಎಂದು ಇಬ್ಬರೂ ಉತ್ತರಿಸಿದರು. ಇಂಥಹಾ ಇನ್ನೂ ಕೆಲವು ಪ್ರಶ್ನೆಗಳನ್ನು ನಿರೂಪಕ ಕೇಳಿದರು. ಇಬ್ಬರೂ ನಟರು ಯಾವುದೇ ಮುಜುಗರವಿಲ್ಲದೆ ಉತ್ತರಿಸಿದರು. ಅವರು ಹಾಜರಾಗಿದ್ದ ಶೋನ ಥೀಮ್ ಅದೇ ರೀತಿಯದ್ದಾಗಿತ್ತು.

ಪ್ರಿಯಾಂಕಾ ಚೋಪ್ರಾ ಬಿಂದಾಸ್ ನಟಿ. ತೆರೆಯ ಮೇಲೆ ಹಾಗೂ ತೆರೆಯಾಚೆಯೂ ತಮ್ಮ ಬಿಂದಾಸ್ ತನವನ್ನು ಪ್ರಿಯಾಂಕಾ ಬಿಡುವುದಿಲ್ಲ. ಈ ಮೊದಲೂ ಸಹ ಹಲವು ಬಾರಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಫಿಲ್ಟರ್ ರಹಿತವಾಗಿ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪ್ರಸ್ತುತ ಲವ್ ಅಗೇನ್ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಇಂದಷ್ಟೆ (ಮೇ 12)ರಂದು ಬಿಡುಗಡೆ ಆಗಿದೆ. ಸಿನಿಮಾ ಚೆನ್ನಾಗಿದೆ ಎಂಬ ವಿಮರ್ಶೆಗಳು ಕೇಳಿ ಬಂದಿವೆ. ಪ್ರಿಯಾಂಕಾ ಎರಡು ವರ್ಷಗಳ ಬಳಿಕ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಝೋಯಾ ಅಖ್ತರ್ ನಿರ್ದೇಶನದ ಸಿನಿಮಾದಲ್ಲಿ ಆಲಿಯಾ ಭಟ್, ಕರೀನಾ ಜೊತೆಗೆ ಪ್ರಿಯಾಂಕಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್