AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆಪಲ್’ ಜನಕ ಸ್ಟೀವ್ ಜಾಬ್ಸ್​ಗೂ, ‘ಹನುಮಾನ್ ಅಂಶ್’ಗೂ ಇದೆ ನಂಟು

‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ. ಕೇವಲ 2 ಕೋಟಿಯಲ್ಲಿ ನಿರ್ಮಾಣ ಮಾಡಿದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 200 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಯಾರೂ ಊಹಿಸದ ರೀತಿಯ ಗಳಿಕೆಯನ್ನು ಸಿನಿಮಾ ಮಾಡುತ್ತಿದೆ. ಅಂದಹಾಗೆ ವಿಶ್ವದ ಜನಪ್ರಿಯ ಆಪಲ್ ಸಂಸ್ಥೆಯ ಜನಕ ಸ್ಟೀವ್ ಜಾಬ್ಸ್​​ಗೂ ‘ಹನುಮಾನ್ ಅಂಶ್’ ಸಿನಿಮಾಕ್ಕೂ ನಂಟಿದೆ. ಏನದು? ಇಲ್ಲಿದೆ ಮಾಹಿತಿ...

‘ಆಪಲ್’ ಜನಕ ಸ್ಟೀವ್ ಜಾಬ್ಸ್​ಗೂ, ‘ಹನುಮಾನ್ ಅಂಶ್’ಗೂ ಇದೆ ನಂಟು
Steve Jobs Hanuman Ansh
ಮಂಜುನಾಥ ಸಿ.
|

Updated on:Sep 13, 2026 | 7:33 PM

Share

‘ಆಪಲ್’ ವಿಶ್ವದ ಬಲು ಜನಪ್ರಿಯ ಸ್ಮಾರ್ಟ್​​ಫೋನ್ ಸಂಸ್ಥೆ. ವರ್ಷಕ್ಕೆ ಕೋಟ್ಯಂತರ ಫೋನುಗಳನ್ನು ಮಾರಾಟ ಮಾಡುವ ಅದರ ಜೊತೆಗೆ ಹಲವು ಟೆಕ್ ಉತ್ಪನ್ನಗಳನ್ನು ಸಹ ಮಾರಾಟ ಮಾಡುವ ಆಪಲ್ ಸಂಸ್ಥೆ ವಿಶ್ವದ ಅತ್ಯಂತ ಲಾಭದಾಯಕ, ಜನಪ್ರಿಯ ಸಂಸ್ಥೆಗಳಲ್ಲಿ ಒಂದಾಗಿದೆ. ಆಪಲ್ ಸಂಸ್ಥೆಯ ಜನಕ ಸ್ಟೀವ್ ಜಾಬ್ಸ್. ಉದ್ಯಮ ಜಗತ್ತಿನಲ್ಲಿ ಸ್ಟೀವ್ ಜಾಬ್ಸ್ ಅತ್ಯಂತ ಪ್ರಭಾವಶಾಲಿ ಮತ್ತು ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದವರು. ಆದರೆ ಈಗ ಭಾರತದ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರ ಎಬ್ಬಸಿರುವ ‘ಹನುಮಾನ್ ಅಂಶ್’ ಸಿನಿಮಾಕ್ಕೂ 2011 ರಲ್ಲಿ ನಿಧನರಾದ ಸ್ಟೀವ್ ಜಾಬ್ಸ್​ಗೂ ನಂಟಿದೆ.

‘ಹನುಮಾನ್ ಅಂಶ್’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರು 21 ವರ್ಷದ ಅನುಪ್ರಿಯಾ ನಾಗರ್. ಇಂಗ್ಲೆಂಡ್​​ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರ ಕಲಿಯುತ್ತಿದ್ದ ಈ ಯುವತಿ ತಮ್ಮ ಅಸೈನ್​​ಮೆಂಟ್​​ಗಾಗಿ ಸ್ಟೀವ್ ಜಾಬ್ಸ್ ಕುರಿತು ಅಧ್ಯಯನ ಆರಂಭಿಸಿದ್ದರು. ಸ್ಟೀವ್ ಜಾಭ್ಸ್ ಕುರಿತು ಅಧ್ಯಯನ ಮಾಡಬೇಕಾದರೆ ಅವರು ನೀಮ್ ಕರೋಲಿ ಬಾಬಾ ಅವರ ಆಶ್ರಮಕ್ಕೆ ಬಂದಿದ್ದ ವಿಷಯ ಅನುಪ್ರಿಯಾ ನಾಗರ್ ಅವರಿಗೆ ತಿಳಿದಿದೆ. ಅದಾದ ಬಳಿಕ ಅವರೂ ಸಹ ನೀಮ್ ಕರೋಲಿ ಬಾಬಾ ಅವರ ಬಗ್ಗೆ ತಿಳಿದಿದ್ದಲ್ಲದೆ, ಅವರ ಕುರಿತ ಸಾಹಿತ್ಯ ಓದಿಕೊಂಡಿದ್ದಾರೆ. ‘ಹನುಮಾನ್ ಅಂಶ್’ ಸಿನಿಮಾ ನಿರ್ಮಿಸುವ ಮನಸ್ಸು ಮಾಡಿದ್ದಾರೆ.

ಅಂದಹಾಗೆ ಸ್ಟೀವ್ ಜಾಬ್ಸ್ ಅವರು 17 ವರ್ಷದವರಾಗಿದ್ದಾಗ ನೀಮ್ ಕರೋಲಿ ಬಾಬಾ ಅವರನ್ನು ಅರಸಿ ಭಾರತಕ್ಕೆ ಬಂದಿದ್ದರು. ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಸ್ಟೀವ್ ಜಾಬ್ಸ್ ಅವರು ನೀಮ್ ಕರೋಲಿ ಬಾಬಾ ಅವರ ಕುರಿತಾಗಿ ಅಮೆರಿಕದ ಲೇಖಕ ರಿಚರ್ಡ್ ಆಲ್​​ಪ್ರೆಟ್ (ರಾಮ್ ದಾಸ್) ಬರೆದ ‘ಬಿ ಹಿಯರ್ ನೌ’ ಪುಸ್ತಕ ಓದಿ ಅದರಿಂದ ಪ್ರೇರಿತರಾಗಿ ನೀಮ್ ಕರೋಲಿ ಬಾಬಾ ಅವರನ್ನು ಅರಸಿ ಬಂದಿದ್ದರು. 1974 ರಲ್ಲಿ ಸ್ಟೀವ್ ಜಾಬ್ಸ್ ಭಾರತಕ್ಕೆ ಬಂದಿದ್ದರು. ಆಗಿನ್ನೂ ಅವರು 19 ವರ್ಷದ ಯುವಕ. ನೀಮ್ ಕರೋಲಿ ಬಾಬಾ ಅವರು 1973ರಲ್ಲಿ ನಿಧನ ಹೊಂದಿದ್ದರು. ಭಾರತಕ್ಕೆ ಬಂದು ಹೋದ ಬಳಿಕ ಸ್ಟೀವ್ ಜಾಬ್ಸ್ ಆಪಲ್ ಸಂಸ್ಥೆ ಪ್ರಾರಂಭ ಮಾಡಿದರು. ಆ ನಂತರದ್ದು ಇತಿಹಾಸ.

ಇದನ್ನೂ ಓದಿ;ತೆಲುಗಿನಲ್ಲಿ ಬರಲಿದೆ ‘ಹನುಮಾನ್ ಅಂಶ್’ ಸಿನಿಮಾ, ರಿಲೀಸ್ ಯಾವಾಗ?

ಅನುಪ್ರಿಯಾ ನಾಗರ್ ಅವರು ಇಂಗ್ಲೆಂಡಿನಲ್ಲಿ ಅಸೈನ್​​ಮೆಂಟ್​​ಗೆ ಆಯ್ದುಕೊಂಡ ವಿಷಯ, ‘ಹನುಮಾನ್ ಅಂಶ್’ ಸಿನಿಮಾ ನಿರ್ಮಾಣಕ್ಕೆ ಪರೋಕ್ಷ ಕಾರಣವಾಗಿದ್ದು ಕಾಕತಾಳೀಯ. ನೀಮ್ ಕರೋಲಿ ಬಾಬಾ ಅವರ ಜೀವನ, ಬೋಧನೆ ಆಧರಿತ ಸಿನಿಮಾ ‘ಹನುಮಾನ್ ಅಂಶ್’ ಬಿಡುಗಡೆ ಆಗಿದೆ. ಆಗಸ್ಟ್ 6ರಂದು ಬಿಡುಗಡೆ ಆದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. 2 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆದ ಈ ಸಿನಿಮಾ ಈಗಾಗಲೇ 200 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ವಿದೇಶಗಳಲ್ಲೂ ಸಹ ಸಿನಿಮಾ ರಿಲೀಸ್ ಆಗಿದ್ದು, ವಿದೇಶಗಳಲ್ಲಿಯೂ ಸಹ ಸಿನಿಮಾ ಅಬ್ಬರಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Sun, 13 September 26

Follow Us