AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರ್ನಿಂಗ್ ವಾಕ್ ಮಾಡುವಾಗ ‘ಬಾಹುಬಲಿ’ ಕತೆ ಹುಟ್ಟಿತು: ಬಾಹುಬಲಿಯನ್ನು ವಿಜಯೇಂದ್ರಪ್ರಸಾದ್ ವಿವರಿಸಿದ್ದು ಹೀಗೆ

Bahubali: ಬಾಹುಬಲಿ ಸಿನಿಮಾದ ಕತೆಗಾರ ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್, ತಾವು ಬಾಹುಬಲಿ ಕತೆ ಬರೆದಿದ್ದು ಹೇಗೆ? ಮೊದಲು ಕತೆಯ ರೂಪ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ.

ಮಾರ್ನಿಂಗ್ ವಾಕ್ ಮಾಡುವಾಗ 'ಬಾಹುಬಲಿ' ಕತೆ ಹುಟ್ಟಿತು: ಬಾಹುಬಲಿಯನ್ನು ವಿಜಯೇಂದ್ರಪ್ರಸಾದ್ ವಿವರಿಸಿದ್ದು ಹೀಗೆ
ಬಾಹುಬಲಿ
ಮಂಜುನಾಥ ಸಿ.
|

Updated on: Jun 20, 2023 | 5:26 PM

Share

ದಕ್ಷಿಣ ಭಾರತ ಚಿತ್ರರಂಗದ (South Movie Indsutry) ಭವಿಷ್ಯ ಬದಲಿಸಿದ ಸಿನಿಮಾ ಬಾಹುಬಲಿ (Bahubali). ಪ್ರಭಾಸ್ (Prabhas) ಸೇರಿದಂತೆ ಹಲವು ನಟರು, ತಂತ್ರಜ್ಞರನ್ನು ಪ್ಯಾನ್ ಇಂಡಿಯಾ ಸ್ಟಾರ್​ಗಳನ್ನಾಗಿಸಿದ, ಸಾವಿರಾರು ಸಿನಿಮಾ ಕರ್ಮಿಗಳಿಗೆ ಸ್ಪೂರ್ತಿ ತುಂಬಿದ, ದೊಡ್ಡ ಸಿನಿಮಾಗಳನ್ನು ಮಾಡುವಂತೆ ಹಲವು ನಿರ್ಮಾಪಕರನ್ನು ಹುರಿದುಂಬಿಸಿದ. ದಕ್ಷಿಣ ಭಾರತ ಚಿತ್ರರಂಗದ ಶಕ್ತಿಯನ್ನು ಲೋಕಕ್ಕೆ ಸಾರಿದ ಸಿನಿಮಾ ಬಾಹುಬಲಿ. ಈ ಸಿನಿಮಾ ನಿರ್ದೇಶಿಸಿರುವುದು ರಾಜಮೌಳಿಯಾದರೆ ಅದಕ್ಕೆ ಕತೆ ಬರೆದಿರುವುದು ರಾಜಮೌಳಿಯ (SS Rajamouli) ತಂದೆ ವಿಜಯೇಂದ್ರ ಪ್ರಸಾದ್ (Vijayendra Prasad). ಈ ಸಿನಿಮಾದ ಕತೆ ಹುಟ್ಟಿದ್ದು ಹೇಗೆ? ಕತೆ ಹುಟ್ಟಿದಾಗ ಅದು ಹೇಗಿತ್ತು? ಅವರೇ ವಿವರಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ವಿಜಯೇಂದ್ರ ಪ್ರಸಾದ್, ”ನಾನು ಸಹಜವಾಗಿ ಬಹಳ ಬೇಗ ಎದ್ದು ವಾಕಿಂಗ್ ಮಾಡುತ್ತೇನೆ. ಮುಂಜಾವು ಬಹಳ ಒಳ್ಳೆಯ ಸಮಯ, ನನಗೆ ಹಲವು ಯೋಚನೆಗಳು ಆ ಸಮಯದಲ್ಲಿ ಬರುತ್ತವೆ. ಹೀಗೆಯೇ ಒಮ್ಮೆ ವಾಕಿಂಗ್ ಮಾಡಬೇಕಾದರೆ ಮೊದಲ ಬಾರಿಗೆ ನನಗೆ ಬಾಹುಬಲಿ ಸಿನಿಮಾದ ಕತೆ ಹೊಳೆಯಿತು. ಆಗಿನ್ನೂ ಸಿನಿಮಾಕ್ಕಾಗಲಿ, ಅದರ ಪಾತ್ರಗಳಿಗಾಗಿಯೇ ಯಾವುದೇ ನಿರ್ದಿಷ್ಟ ಹೆಸರುಗಳು ಇರಲಿಲ್ಲ” ಎಂದು ವಿವರಿಸಿದ್ದಾರೆ ವಿಜಯೇಂದ್ರ ಪ್ರಸಾದ್.

ಮೊದಲು ಹೊಳೆದಾಗ ಕತೆ ಹೀಗಿತ್ತು; ಒಮ್ಮೆ ವಿದೇಶದಿಂದ ಶಸ್ತ್ರಾಸ್ತ್ರಗಳ ವ್ಯಾಪಾರಿಯೊಬ್ಬ ಭಾರತಕ್ಕೆ ಬರುತ್ತಾನೆ. ಒಬ್ಬ ವಯಸ್ಸಾದ ವ್ಯಕ್ತಿ, 18-20 ವರ್ಷದ ಕೆಲವು ಗಟ್ಟಿ ಮುಟ್ಟಾದ ಯುವಕರಿಗೆ ಕತ್ತಿವರಸೆ ಹೇಳಿಕೊಡುತ್ತಿರುತ್ತಾನೆ. ಅವನ ಕತ್ತಿವರೆಸೆ ಕಂಡು ಬೆರಗಾದ ಆ ವಿದೇಶಿ ವ್ಯಾಪಾರಿ, ಈ ದೇಶದ ಅತ್ಯುತ್ತಮ ಶಸ್ತ್ರಾಸ್ತ್ರ ಪ್ರವೀಣ ನೀವೇ ಇರಬೇಕಲ್ಲವೆ ಎನ್ನುತ್ತಾನೆ. ಆಗ ಆ ವಯಸ್ಸಾದ ವ್ಯಕ್ತಿ (ಸಿನಿಮಾದಲ್ಲಿ ಕಟ್ಟಪ್ಪ) ಅಲ್ಲ, ನೀವು ನಮ್ಮ ಪ್ರಭುಗಳ ಹೆಸರು ಕೇಳಿಲ್ಲವೇ? ಎನ್ನುತ್ತಾನೆ” ಹೀಗೆ ಕತೆ ಮುಂದುವರೆಯುತ್ತದೆ.

”ನಮ್ಮ ಪ್ರಭುಗಳು ಅದ್ಭುತವಾದ ವೀರ, ಕತ್ತಿವರಸೆಯಲ್ಲಿ ಆತನನ್ನು ಮೀರಿಸುವವರೇ ಇಲ್ಲ. ನಮ್ಮ ಪ್ರಭುಗಳು ನನಗೆ ಆತ್ಮೀಯರು, ಅವರೊಟ್ಟಿಗೆ ಬಹಳ ಕಾಲ ನಾನು ಜೊತೆಯಾಗಿದ್ದೆ. ಒಮ್ಮೆ ನಾವು ಕಾಡಿಗೆ ಹೋಗಿದ್ದಾಗ ಶತ್ರು ದೇಶದವರು ಎದುರಾದರು. ನಾವಿಬ್ಬರೇ ಅವರ ವಿರುದ್ಧ ಹೋರಾಡಿದೆವು. ನಮ್ಮ ಪ್ರಭುಗಳು ಅದು ಹೇಗೆ ಫೈಟ್ ಮಾಡುತ್ತಿದ್ದರೆಂದರೆ, ತನ್ನ ಜನಗಳನ್ನು ರಕ್ಷಿಸಿಕೊಳ್ಳಲು ಅರ್ಜುನನೂ ಹೀಗೆಯೇ ಯುದ್ಧ ಮಾಡುತ್ತಿದ್ದನೇನೋ ಎನ್ನಿಸಿ ಅವರ ಹೋರಾಟವನ್ನೇ ನೋಡುತ್ತಾ ನಿಂತುಬಿಟ್ಟೆ. ಆಗ ನನಗೆ ಬಾಣವೊಂದು ಬಂದು ತಗುಲಿತು ನೋಡು ಇದು ಅದರದ್ದೇ ಗುರುತು ಎಂದು ಭುಜದ ಮೇಲಾದ ಗಾಯವನ್ನು ತೋರಿಸುತ್ತಾರೆ ಆ ವಯಸ್ಸಾದ ವ್ಯಕ್ತಿ.

ಇದನ್ನೂ ಓದಿ:ಕೆಲಸಕ್ಕೆ ಬಾರದವನಾಗಿದ್ದ ರಾಜಮೌಳಿಯನ್ನು ಬದಲಾಯಿಸಿದ್ದು ಅತ್ತಿಗೆಯ ಆ ಒಂದು ಮಾತು

ಫೈಟ್ ಮುಂದುವರೆತು ಸಂಜೆಯಾಯಿತು, ಸಂಜೆಯ ಕೆಂಬಣ್ಣದಲ್ಲಿ ರಕ್ತದಿಂದ ನನ್ನ ಪ್ರಭುಗಳು ರುದ್ರನಂತೆ ನನಗೆ ಕಾಣಿಸಿದರು. ಆದರೆ ಆ ರಕ್ತದ ಒಂದು ಹನಿ ಸಹ ಅವರದ್ದಲ್ಲ. ಎಲ್ಲವೂ ಶತ್ರುಗಳದ್ದೆ. ಕತ್ತಿ ಹಿಡಿದು ಅವರಿಗೆ ಗಾಯ ಮಾಡಬಲ್ಲ ಯೋಧ ಭಾರತ ದೇಶದಲ್ಲಿಯೇ ಇಲ್ಲ” ಎನ್ನುತ್ತಾನೆ ಆ ವಯಸ್ಸಾದ ಯೋಧ.

ಆಗ ಆ ವಿದೇಶಿ ವ್ಯಾಪಾರಿ, ಹಾಗಾದರೆ ನಿಮ್ಮ ಪ್ರಭುಗಳು ಎಲ್ಲಿದ್ದಾರೆ ನಾನವರನ್ನು ನೋಡಬೇಕಲ್ಲ ಎಂದು ಬಯಕೆ ವ್ಯಕ್ತಪಡಿಸುತ್ತಾನೆ, ಆಗ ಬೇಸರದ ಮುಖ ಮಾಡಿಕೊಂಡ ಆ ಮುದಿ ಯೋಧ, ಅವರೀಗ ಇಲ್ಲ. ತೀರಿಕೊಂಡರು ಎನ್ನುತ್ತಾನೆ. ಹೇಗೆ ಎಂದು ವಿದೇಶಿ ವ್ಯಾಪಾರಿ ಕೇಳಲು. ಕತ್ತಿಯಿಂದ ಇರಿದು ಅವರನ್ನು ಕೊಲ್ಲಲಾಯಿತು ಎನ್ನುತ್ತಾನೆ ಮುದಿ ಯೋಧ. ಅದು ಹೇಗೆ ಸಾಧ್ಯ? ಕತ್ತಿಯಿಂದ ಯುದ್ಧಮಾಡಿ ಆತನನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ನೀವೇ ಹೇಳಿದರಲ್ಲ ಎಂದಾಗ ”ಕತ್ತಿ ಹಿಡಿದು ಯುದ್ಧ ಮಾಡಿದರೆ ಸೋಲಿಸಲು ಆಗುತ್ತಿರಲಿಲ್ಲ ಆದರೆ ಮೋಸ ಮಾಡಿ ಅವರ ಬೆನ್ನಿಗೆ ಕತ್ತಿ ಚುಚ್ಚಲಾಯ್ತು. ಹಾಗೆ ಅವರ ಬೆನ್ನಿಗೆ ಕತ್ತಿ ಚುಚ್ಚಿದ್ದು ನಾನೇ” ಎನ್ನುತ್ತಾನೆ.

ಬಾಹುಬಲಿ ಕತೆ ಮೊದಲು ಹುಟ್ಟಿಕೊಂಡಿದ್ದು ಹೀಗೆ ಎಂದು ವಿಜಯೇಂದ್ರ ಪ್ರಸಾದ್ ವಿವರಿಸಿದ್ದಾರೆ. ಇದು ಮಾತ್ರವೇ ಅಲ್ಲದೆ ರಮ್ಯಾಕೃಷ್ಣ ಮಗುವನ್ನು ನದಿಯಲ್ಲಿ ಎತ್ತಿ ಹಿಡಿಯುವ ದೃಶ್ಯ ಹಾಗೂ ಕಟ್ಟಪ್ಪ, ಬಾಹುಬಲಿಯನ್ನು ಕೊಲ್ಲುವ ದೃಶ್ಯಗಳು ಬಿಡಿಬಿಡಿಯಾಗಿ ವಿಜಯೇಂದ್ರ ಪ್ರಸಾದ್​ಗೆ ಹೊಳೆದಿದ್ದವಂತೆ. ಅದನ್ನು ರಾಜಮೌಳಿಗೆ ಹೇಳಿದಾಗ ಒಪ್ಪಿ ಇಷ್ಟಪಟ್ಟು ಕತೆಯನ್ನು ಮುಂದುವರೆಸಿದ್ದಾರೆ. ಕತೆ ದೊಡ್ಡದಾದಾಗ ಅದನ್ನು ಎರಡು ಭಾಗಗಳಲ್ಲಿ ಮಾಡಲು ಮೊದಲೇ ನಿಶ್ಚಯಿಸಿ, ಕತೆ ಹೇಳುವ ಭಾಗವನ್ನು ಮೊದಲೆಂದು, ಕತೆ ಹೇಳಿದ ಬಳಿಕ ನಡೆವ ಭಾಗವನ್ನು ಎರಡನೇ ಭಾಗವೆಂದು ನಿಶ್ಚಯಿಸಿ ಆ ನಂತರ ಮತ್ತೆ ಕೆಲವು ಮಾರ್ಪಾಟುಗಳನ್ನು ಮಾಡಿ ಸಿನಿಮಾ ಮಾಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?