AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೈಲರ್ 2’ ಆಡಿಯೋ ಲಾಂಚ್ ಕ್ಯಾನ್ಸಲ್ ಆಗಲು ವಿಜಯ್ ಕಾರಣ? ಹುಟ್ಟಿದೆ ಚರ್ಚೆ

ರಜನಿಕಾಂತ್ ಅವರ 'ಜೈಲರ್ 2' ಚಿತ್ರದ ಅದ್ಧೂರಿ ಆಡಿಯೋ ಲಾಂಚ್ ರದ್ದಾಗಿದೆ. ತಮಿಳುನಾಡು ರಾಜಕೀಯ ಹಾಗೂ ವಿಜಯ್ ಜೊತೆಗಿನ ಪೈಪೋಟಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಸದ್ಯ ಟಿವಿ ಸಂದರ್ಶನ ಮೂಲಕವೇ ಚಿತ್ರತಂಡ ಪ್ರಚಾರಕ್ಕೆ ಇಳಿದಿದ್ದು, ರಜನಿ ಮತ್ತು ವಿಜಯ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ಜೋರಾಗಿದೆ.

‘ಜೈಲರ್ 2’ ಆಡಿಯೋ ಲಾಂಚ್ ಕ್ಯಾನ್ಸಲ್ ಆಗಲು ವಿಜಯ್ ಕಾರಣ? ಹುಟ್ಟಿದೆ ಚರ್ಚೆ
ರಜಿನಿ ಹಾಗೂ ವಿಜಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 07, 2026 | 8:05 AM

Share

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ತೆರೆಗೆ ಬರಲಿದೆ. ಚಿತ್ರತಂಡವು ಎಂದಿನಂತೆ ಅದ್ಧೂರಿ ಆಡಿಯೋ ಲಾಂಚ್ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಆ ಆಲೋಚನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ. ಅದಕ್ಕೆ ಬದಲಾಗಿ ಚಿತ್ರತಂಡವೇ ನಿರ್ಮಿಸಿರುವ ವಿಶೇಷ ಸಂದರ್ಶನವನ್ನು ಪ್ರಸಾರ ಮಾಡಲು ನಿರ್ಧರಿಸಿದೆ. ಈ ಹೊಸ ತಂತ್ರವು ತಮಿಳುನಾಡು ರಾಜಕೀಯದಲ್ಲಿ ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಚಿತ್ರತಂಡದ ಈ ನಿರ್ಧಾರದ ಹಿಂದೆ ತಮಿಳುನಾಡು ರಾಜಕೀಯದ ತೀವ್ರ ಪ್ರಭಾವವಿದೆ ಎಂದು ಜಾಲತಾಣಗಳಲ್ಲಿ ಹೇಳಲಾಗುತ್ತಿದೆ. ರಜನಿಕಾಂತ್, ಸನ್ ಪಿಕ್ಚರ್ಸ್ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ನಡುವಿನ ರಾಜಕೀಯ ಸಮೀಕರಣವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ವಿಜಯ್ ಅವರ ರಾಜಕೀಯ ನಡೆಗಳಿಂದಾಗಿ ಈ ಬೃಹತ್ ಕಾರ್ಯಕ್ರಮಕ್ಕೆ ಅನುಮತಿ ಸಿಗಲಿಲ್ಲ ಎಂಬ ವದಂತಿಗಳು ಹರಿಡುತ್ತಿವೆ. ರಾಜಕೀಯ ವೈಷಮ್ಯಗಳ ಹಿನ್ನೆಲೆಯಲ್ಲಿ ಈ ಹೈ-ಡ್ರಾಮಾ ಸೃಷ್ಟಿಯಾಗಿದೆ.

ಆದರೆ ವಿಜಯ್ ಅವರು ಸಾರ್ವಜನಿಕರಲ್ಲಿ ನಕಾರಾತ್ಮಕ ಭಾವನೆ ಮೂಡಿಸುವ ಇಂತಹ ನಿರ್ಧಾರ ತಳೆಯುವುದಿಲ್ಲ ಎಂದೂ ಹೇಳಲಾಗುತ್ತಿದೆ. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರು ವಿಜಯ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಮ್ಮ ವೃತ್ತಿಜೀವನ ಮತ್ತು ‘ಜೈಲರ್’ ಹಂತದ ಬೆಳವಣಿಗೆಗೆ ವಿಜಯ್ ಅವರ ಬೆಂಬಲವೇ ಮುಖ್ಯ ಎಂದು ನೆಲ್ಸನ್ ಹಿಂದೆ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಜೈಲರ್ 2 ತಂಡವು ಅತ್ಯಂತ ಜಾಣತನದ ಹೆಜ್ಜೆ ಇಟ್ಟಿದೆ.

ಸಾರ್ವಜನಿಕವಾಗಿ ದೊಡ್ಡ ಕಾರ್ಯಕ್ರಮ ನಡೆಸಿ ಅನಗತ್ಯ ಅಪಾಯ ತಂದುಕೊಳ್ಳಲು ಚಿತ್ರತಂಡಕ್ಕೆ ಇಷ್ಟವಿಲ್ಲ. ಹಾಗಾಗಿ ‘ಜೈಲರ್ 2 ವಿಶೇಷ ಸಂದರ್ಶನ’ ಹೆಸರಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ. ಇದರಲ್ಲಿ ಚಿತ್ರದ ನಟ-ನಟಿಯರು ಹಾಗೂ ತಾಂತ್ರಿಕ ವರ್ಗದವರ ಭಾಷಣಗಳು ಇರಲಿವೆ. ಯಾವುದೇ ವಿವಾದಕ್ಕೆ ಆಸ್ಪದ ನೀಡದೆ ಸಿನಿಮಾ ಪ್ರಚಾರವನ್ನು ಯಶಸ್ವಿಯಾಗಿ ಮುಗಿಸಲು ಈ ಪ್ಲಾನ್ ಮಾಡಲಾಗಿದೆ.

ಇದನ್ನೂ ಓದಿ: ‘ಶ್ರೀರಾಮನನ್ನು ಸಲ್ಮಾನ್, ರಜನಿಕಾಂತ್ ತರ ತೋರಿಸಿದ್ದಾರೆ’:ರಾಮಾಯಣ ಸಿನಿಮಾ ವಿರುದ್ಧ ಮುಕೇಶ್ ಖನ್ನಾ ಕಿಡಿ

ಈ ವಿಶೇಷ ಸಂದರ್ಶನವು ಅಕ್ಟೋಬರ್ 11ರಂದು ಸನ್ ಟಿವಿಯಲ್ಲಿ ಸಂಜೆ 6:30 ರಿಂದ 9:30 ರವರೆಗೆ ಪ್ರಸಾರವಾಗಲಿದೆ. ಮೂರು ಗಂಟೆಗಳ ಕಾಲ ಸನ್ ಟಿವಿಯ ಪ್ರೈಮ್ ಟೈಮ್ ಅನ್ನು ಈ ಪ್ರಸಾರ ಆಕ್ರಮಿಸಿಕೊಳ್ಳಲಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ರಜನಿ ಹಾಗೂ ವಿಜಯ್ ಅಭಿಮಾನಿಗಳ ನಡುವೆ ವಾಕ್ಸಮರ ಮುಂದುವರಿದಿದೆ. ಇದು ಕೇವಲ ಚಿತ್ರತಂಡದ ಪ್ರಚಾರದ ತಂತ್ರವೋ ಅಥವಾ ರಾಜಕೀಯದ ಆಟವೋ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More