AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಕ್ತದ ಸಮುದ್ರದ ನಡುವೆ ಜೂ ಎನ್​ಟಿಆರ್: ಹೊಸ ಸಿನಿಮಾ ಟೈಟಲ್, ಪೋಸ್ಟರ್ ಬಿಡುಗಡೆ

Jr NTR 30: ಜೂ ಎನ್​ಟಿಆರ್ ನಟಿಸುತ್ತಿರುವ 30ನೇ ಸಿನಿಮಾಕ್ಕೆ ಹೆಸರು ದೊರಕಿದೆ. ಸಿನಿಮಾದ ಟೈಟಲ್, ಪೋಸ್ಟರ್ ಹಾಗೂ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ.

ರಕ್ತದ ಸಮುದ್ರದ ನಡುವೆ ಜೂ ಎನ್​ಟಿಆರ್: ಹೊಸ ಸಿನಿಮಾ ಟೈಟಲ್, ಪೋಸ್ಟರ್ ಬಿಡುಗಡೆ
ಜೂ ಎನ್​ಟಿಆರ್
ಮಂಜುನಾಥ ಸಿ.
|

Updated on: May 19, 2023 | 8:51 PM

Share

ಆರ್​ಆರ್​ಆರ್ (RRR) ಸಿನಿಮಾದ ಬಳಿಕ ಜೂ ಎನ್​ಟಿಆರ್ (Jr NTR) ಅಂತರಾಷ್ಟ್ರೀಯ ಸ್ಟಾರ್ ಆಗಿ ಬದಲಾಗಿದ್ದು ಅವರ ಸಿನಿಮಾಗಳ ಬಗ್ಗೆ ನಿರೀಕ್ಷೆಗಳು ಸಹ ನೂರುಪಟ್ಟಾಗಿವೆ. ಆರ್​ಆರ್​ಆರ್ ಬಳಿಕ ಜೂ ಎನ್​ಟಿಆರ್ ಅದ್ಯಾವ ಸಿನಿಮಾ ಒಪ್ಪಿಕೊಳ್ಳಲಿದ್ದಾರೆ? ಆ ಸಿನಿಮಾ ಯಾವ ಮಟ್ಟಿಗೆ ಪ್ರೇಕ್ಷಕರನ್ನು ಸೆಳೆಯಲಿದೆ ಎಂಬ ಕುತೂಹಲ ಇದ್ದೇ ಇತ್ತು. ಅಸಲಿಗೆ ಆರ್​ಆರ್​ಆರ್ ಸಿನಿಮಾದ ಬಿಡುಗಡೆ ಸಮಯದಲ್ಲಿಯೇ ಜೂ ಎನ್​ಟಿಆರ್ ತಮ್ಮ ಮುಂದಿನ ಸಿನಿಮಾವನ್ನು ಕೊರಟಾಲ ಶಿವ ಜೊತೆ ಮಾಡುವುದಾಗಿ ಘೋಷಿಸಿದ್ದರು. ಆದರೆ ಆರ್​ಆರ್​ಆರ್ ಸಿನಿಮಾದ ಭಾರಿ ಯಶಸ್ಸಿನ ಬಳಿಕ ಸಿನಿಮಾದ ಕತೆ, ಮೇಕಿಂಗ್ ಎಲ್ಲದರಲ್ಲೂ ಬದಲಾವಣೆ ಮಾಡಲಾಗಿತ್ತು. ನಾಳೆ (ಮೇ 20) ಜೂ ಎನ್​ಟಿಆರ್ ಹುಟ್ಟುಹಬ್ಬ ಇರುವ ಕಾರಣ ಅವರ 30ನೇ ಸಿನಿಮಾದ ಟೈಟಲ್ ಹಾಗೂ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ.

ಜೂ ಎನ್​ಟಿಆರ್ ಮುಂದಿನ ಸಿನಿಮಾ ದೇವರಾ ಎಂದು ಹೆಸರಿಡಲಾಗಿದೆ. ರಕ್ತ ಮೆತ್ತಿನ ಭಯ ಹುಟ್ಟಿಸುವ ಕತ್ತಿ ಹಿಡಿದು ಹೆಣಗಳ ರಾಶಿಯ ಬದಿಯಲ್ಲಿ ಕೊರಕಲು ಬಂಡೆಯೊಂದರ ಮೇಲೆ ಜೂ ಎನ್​ಟಿಆರ್ ನಿಂತಿದ್ದಾರೆ ಆ ಬಂಡೆಗೆ ಸಮುದ್ರದ ಅಲೆಗಳು ಧೋ ಎಂದು ಅಪ್ಪಳಿಸುತ್ತಿವೆ. ಹೀಗೊಂದು ಪೋಸ್ಟರ್ ಅನ್ನು ಇದೀಗ ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ಪೋಸ್ಟರ್ ಟೀಸರ್​ ಹಾಗೂ ಹೆಸರಿನ ಡಿಸೈನ್ ಗಮನಿಸಿದರೆ ಇದೊಂದು ಪೀರಿಯಡ್ ಡ್ರಾಮಾ ಸಿನಿಮಾ ಎಂಬುದು ಸ್ಪಷ್ಟವಾಗುತ್ತಿದೆ. ಸಿನಿಮಾದಲ್ಲಿ ದೈವ-ರಾಕ್ಷಸ ಅಂಶಗಳು ಸಹ ಇರುವ ಸಾಧ್ಯತೆಯೂ ಇದೆ.

ಟೈಟಲ್, ಟೈಟಲ್ ಟೀಸರ್ ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಚಿತ್ರತಂಡ ಘೋಷಿಸಿದೆ. ಜೂ ಎನ್​ಟಿಆರ್​ರ ಹೊಸ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಇನ್ನೂ ಒಂದು ವರ್ಷ ಕಾಯಲೇ ಬೇಕು. ದೇವರಾ ಸಿನಿಮಾವು ಮುಂದಿನ ವರ್ಷ ಏಪ್ರಿಲ್ 5ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾದ ಟೈಟಲ್ ಟೀಸರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜೂ ಎನ್​ಟಿಆರ್​ ಅವರ ಬ್ಲಾಕ್ ಆಂಡ್ ಬ್ಲಾಕ್ ಲುಕ್ ಅನ್ನು ಅಭಿಮಾನಿಗಳು ಬಹುವಾಗಿ ಇಷ್ಟಪಟ್ಟಿದ್ದಾರೆ.

ಇದನ್ನೂ ಓದಿ:ಎನ್​ಟಿಆರ್ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ? ಜೂ ಎನ್​ಟಿಆರ್ ಏರಿಗೆ, ಬಾಲಕೃಷ್ಣ-ಚಂದ್ರಬಾಬು ನೀರಿಗೆ

ದೇವರಾ ಸಿನಿಮಾದ ಶೂಟಿಂಗ್ ಈಗಾಗಲೇ ಪ್ರಾರಂಭವಾಗಿದೆ. ಸಿನಿಮಾದಲ್ಲಿ ಜೂ ಎನ್​ಟಿಆರ್ ಎದುರು ನಾಯಕಿಯಾಗಿ ಬಾಲಿವುಡ್​ನ ಯುವನಟಿ ಜಾನ್ಹವಿ ಕಪೂರ್ ನಟಿಸುತ್ತಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ಸಿನಿಮಾದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟ ಶ್ರೀಕಾಂತ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್​ಆರ್​ಆರ್ ಸಿನಿಮಾ ದೊಡ್ಡ ಯಶಸ್ಸಾದ ಬಳಿಕ ಈ ಸಿನಿಮಾದ ಬಜೆಟ್ ಹಾಗೂ ಮೇಕಿಂಗ್ ಸ್ಕೇಲ್ ಅನ್ನು ಹೆಚ್ಚಿಸಲಾಗಿದ್ದು, ಸಿನಿಮಾದಲ್ಲಿನ ಸಾಹಸ ದೃಶ್ಯಗಳಿಗಾಗಿ ಹಾಲಿವುಡ್​ನ ಜನಪ್ರಿಯ ಸಾಹಸ ನಿರ್ದೇಶಕ ಕೆನ್ನಿ ಬೇಟ್ಸ್ ಅನ್ನು ಕೆರತರಲಾಗಿದೆ. ಬಾಹುಬಲಿ, ಆರ್​ಆರ್​ಆರ್ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರೊಡಕ್ಷನ್ ಡಿಸೈನರ್ ಸಾಬು ಸಿರೀಲ್ ಸಹ ಈ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಸಿನಿಮಾವನ್ನು ಭಾರಿ ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗುತ್ತಿದೆ. ದೇವರಾ ಸಿನಿಮಾವನ್ನು ಜೂ ಎನ್​ಟಿಆರ್ ಸಹೋದರ ನಂದಮೂರಿ ಕಲ್ಯಾಣ್ ರಾಮ್ ನಿರ್ಮಿಸುತ್ತಿದ್ದಾರೆ. ಯುವಸುಧಾ ಆರ್ಟ್ಸ್ ಸಹ ನಿರ್ಮಾಣ ಸಂಸ್ಥೆಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ