ಜ್ಯೂ.ಎನ್ಟಿಆರ್ ( Jr. NTR) ಹಾಗೂ ಕೊರಟಾಲ ಶಿವ (Koratala Siva) ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ನಿರೀಕ್ಷೆ ಮೂಡಿದೆ. ಜ್ಯೂ.ಎನ್ಟಿಆರ್ ‘ಆರ್ಆರ್ಆರ್’ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದರೆ, ಕೊರಟಾಲ ಶಿವ ‘ಆಚಾರ್ಯ’ ಸಿನಿಮಾದ ಸೋಲಿನಿಂದ ಕಂಗೆಟ್ಟಿದ್ದಾರೆ. ಶುಕ್ರವಾರ (ಮೇ 20) ಜ್ಯೂ.ಎನ್ಟಿಆರ್ ಜನ್ಮದಿನ ( Jr. NTR Birthday). ಈ ಸಿನಿಮಾ ಕುರಿತು ಅಪ್ಡೇಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಅಷ್ಟೇ ಅಲ್ಲ, ಈ ಚಿತ್ರದ ನಾಯಕಿ ಯಾರು ಎಂಬ ಬಗ್ಗೆಯೂ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ.
‘ಆರ್ಆರ್ಆರ್’ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಈ ಚಿತ್ರದ ಮೂಲಕ ಅವರು ಟಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ಅವರು ಜ್ಯೂ.ಎನ್ಟಿಆರ್ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅವರು ಚಿತ್ರತಂಡದಿಂದ ಹೊರ ನಡೆದಿದ್ದಾರೆ ಎಂದು ವರದಿ ಆಗಿದೆ. ಇದಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ.
ಇದಾದ ಬಳಿಕ ಶ್ರದ್ಧಾ ಕಪೂರ್ ಅವರು ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿ ಮಾಡಲಾಗಿತ್ತು. ಆದರೆ, ಅದು ಕೂಡ ಸುಳ್ಳಾಗಿದೆ. ಅವರ ಜತೆ ಈ ಬಗ್ಗೆ ಮಾತುಕತೆ ಆಗಿಲ್ಲ ಎನ್ನುತ್ತಿವೆ ಮೂಲಗಳು. ‘ಸಾಹೋ’ ಸಿನಿಮಾ ಮೂಲಕ ಶ್ರದ್ಧಾ ಕಪೂರ್ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು. ಈ ಚಿತ್ರ ಸೋತಿತು. ಆ ಬಳಿಕ ಅವರು ಬಾಲಿವುಡ್ನಲ್ಲೇ ಬ್ಯುಸಿ ಆಗಿದ್ದಾರೆ. ಈಗ ತಂಡ ಸೇರಿಕೊಳ್ಳುತ್ತಿರುವ ನಾಯಕಿ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ: ಜ್ಯೂ. ಎನ್ಟಿಆರ್ ಬರ್ತ್ಡೇ ದಿನವೇ ‘ಆರ್ಆರ್ಆರ್’ ಚಿತ್ರದ ಒಟಿಟಿ ಪ್ರೀಮಿಯರ್; ಇಲ್ಲಿದೆ ಹೊಸ ಟ್ರೇಲರ್
ಜ್ಯೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಹೊಸ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾದ ಟೈಟಲ್ ಮೇ 20ರಂದು ಅನಾವರಣಗೊಳ್ಳುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಜ್ಯೂ.ಎನ್ಟಿಆರ್ ಯಾವ ಅವತಾರ ತಾಳಲಿದ್ದಾರೆ ಎಂಬ ಕುತೂಹಲ ಸೃಷ್ಟಿ ಆಗಿದೆ. ಈ ಚಿತ್ರಕ್ಕೆ ನಾಯಕಿಯನ್ನು ಬಾಲಿವುಡ್ನಿಂದ ಕರೆಸಿಕೊಳ್ಳಲಾಗುತ್ತದೆಯೋ ಅಥವಾ ದಕ್ಷಿಣ ಭಾರತದ ಹೀರೋಯಿನ್ಗೆ ಮಣೆ ಹಾಕಲಾಗುತ್ತದೆಯೇ ಎನ್ನುವ ಪ್ರಶ್ನೆ ಸದ್ಯದ್ದು.
ಇದನ್ನೂ ಓದಿ: ಜ್ಯೂ.ಎನ್ಟಿಆರ್ ಜತೆ ಕಾಣಿಸಿಕೊಂಡ ಪ್ರಶಾಂತ್ ನೀಲ್; ಇದಕ್ಕಿದೆ ಮಹತ್ವದ ಕಾರಣ
ಜ್ಯೂ.ಎನ್ಟಿಆರ್ ಜನ್ಮದಿನ ಆಚರಣೆಗೆ ಫ್ಯಾನ್ಸ್ ದೊಡ್ಡ ಮಟ್ಟದ ಪ್ಲ್ಯಾನ್ ಮಾಡಿದ್ದಾರೆ. ‘ಆರ್ಆರ್ಆರ್’ ಸಿನಿಮಾ ಗೆಲುವಿನಿಂದ ಈ ಬಾರಿಯ ಬರ್ತ್ಡೇ ಅವರಿಗೆ ವಿಶೇಷವಾಗಿದೆ. ಕೊವಿಡ್ ಕಾರಣದಿಂದ ಹಿಂದಿನ ಎರಡು ವರ್ಷ ಜ್ಯೂ.ಎನ್ಟಿಆರ್ಗೆ ಬರ್ತ್ಡೇ ಆಚರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:08 pm, Thu, 19 May 22