ಅಮೆರಿದಲ್ಲಿ ದೂಳೆಬ್ಬಿಸುತ್ತಿದೆ ಜೂ ಎನ್​ಟಿಆರ್ ‘ದೇವರ’

Jr NTR: ‘ಆರ್​ಆರ್​ಆರ್’ ಮೂಲಕ ಗ್ಲೋಬಲ್ ಸ್ಟಾರ್ ಆಗಿರುವ ಜೂ ಎನ್​ಟಿಆರ್ ಅವರ ಹೊಸ ಸಿನಿಮಾ ‘ದೇವರ’ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಸಿನಿಮಾ ಬಿಡುಗಡೆಗೆ ಇನ್ನೂ 20 ದಿನಗಳಿದ್ದಂತೆ ಅಮೆರಿಕದಲ್ಲಿ ದಾಖಲೆಗಳನ್ನು ಬರೆಯುತ್ತಿದೆ.

ಅಮೆರಿದಲ್ಲಿ ದೂಳೆಬ್ಬಿಸುತ್ತಿದೆ ಜೂ ಎನ್​ಟಿಆರ್ ‘ದೇವರ’
Follow us
|

Updated on: Sep 07, 2024 | 5:35 PM

ಜೂ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಪ್ರಸ್ತುತ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ. ‘ಆರ್​ಆರ್​ಆರ್’ ಸಿನಿಮಾದ ಬಳಿಕ ಗ್ಲೋಬಲ್ ಸ್ಟಾರ್ ಆಗಿಬಿಟ್ಟಿರುವ ಜೂ ಎನ್​ಟಿಆರ್, ‘ಆರ್​ಆರ್​ಆರ್’ ಬಳಿಕ ಎಂಥಹಾ ಸಿನಿಮಾ ಮಾಡಿದ್ದಾರೆಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಸಹಜವಾಗಿಯೇ ಇದೆ. ಸಿನಿಮಾ ಬಿಡುಗಡೆಗೆ ಇನ್ನೂ 20 ದಿನಗಳಿರುವಾಗಲೇ ವಿದೇಶಗಳಲ್ಲಿ ಸಿನಿಮಾ ದಾಖಲೆಗಳನ್ನು ಬರೆಯಲು ಪ್ರಾರಂಭಿಸಿದೆ.

ಅಮೆರಿಕದ ಕೆಲವು ಭಾಗಗಳಲ್ಲಿ ಸಿನಿಮಾದ ಪ್ರೀ ಬುಕಿಂಗ್ ಆರಂಭವಾಗಿದ್ದು, ಅತ್ಯಂತ ವೇಗವಾಗಿ ಸಿನಿಮಾದ 15 ಸಾವಿರ ಟಿಕೆಟ್​ಗಳು ಕೆಲವೇ ಗಂಟೆಗಳಲ್ಲಿ ಮಾರಾಟವಾಗಿದೆ. ಭಾರತದ ಇನ್ಯಾವುದೇ ಸಿನಿಮಾದ ಪ್ರೀ ಬುಕಿಂಗ್ ಟಿಕೆಟ್​ಗಳು ಇಷ್ಟು ವೇಗವಾಗಿ ಬುಕಿಂಗ್ ಆಗಿರಲಿಲ್ಲವಂತೆ. ಅಮೆರಿಕದ ಕೆಲವು ನಗರಗಳಲ್ಲಿ ಮಾತ್ರವೇ ಪ್ರೀ ಬುಕಿಂಗ್ ಓಪನ್ ಆಗಿದ್ದು, ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಲಿದ್ದು ಆಗ ಟಿಕೆಟ್​ ಮಾರಾಟ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ.

ಇದನ್ನೂ ಓದಿ:ಮುನಿಸು ಮರೆತು ಚಿಕ್ಕಪ್ಪನ ಮಗನಿಗೆ ಶುಭ ಹಾರೈಸಿದ ಜೂ ಎನ್​ಟಿಆರ್

‘ಆರ್​ಆರ್​ಆರ್’, ‘ಕಲ್ಕಿ 2898ಎಡಿ’ ಸಿನಿಮಾಕ್ಕೂ ಸಹ ಇಷ್ಟು ವೇಗವಾಗಿ ಅಡ್ವಾನ್ಸ್ ಟಿಕೆಟ್​ಗಳು ಬುಕ್ ಆಗಿರಲಿಲ್ಲವಂತೆ. ‘ದೇವರ’ ಸಿನಿಮಾದ ಕ್ರೇಜ್ ದೊಡ್ಡ ಮಟ್ಟದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಟಿಕೆಟ್​ಗಳು ಬುಕ್ ಆಗಲಿದೆ. ಇನ್ನು ಭಾರತದಲ್ಲಿಯೂ ಸಹ ಕೆಲವೇ ದಿನಗಳಲ್ಲಿ ಪ್ರೀ ಬುಕಿಂಗ್ ಓಪನ್ ಆಗಲಿದ್ದು, ಇಲ್ಲಿಯೂ ಸಹ ದೊಡ್ಡ ಮಟ್ಟದಲ್ಲಿ ಟಿಕೆಟ್ ಬುಕ್ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನು ‘ದೇವರ’ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಇಂದು (ಸೆಪ್ಟೆಂಬರ್ 07) ಘೋಷಣೆ ಮಾಡಲಾಗಿದೆ. ‘ದೇವರ’ ಸಿನಿಮಾದ ಟ್ರೈಲರ್ ಇನ್ನು ಮೂರು ದಿನದಲ್ಲಿ ಅಂದರೆ ಸೆಪ್ಟೆಂಬರ್ 10 ರಂದು ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಎನ್​ಟಿಆರ್ ಸಹೋದರ ಕಲ್ಯಾಣ್​ರಾಮ್. ಇನ್ನು ಸಿನಿಮಾದಲ್ಲಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಕೆಲ ಹಾಲಿವುಡ್​ ತಂತ್ರಜ್ಞರು ಸಹ ಕೆಲಸ ಮಾಡಿದ್ದಾರೆ. ಸಿನಿಮಾ ಎರಡು ಪಾರ್ಟ್​ಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಮೊದಲ ಭಾಗ ಸೆಪ್ಟೆಂಬರ್ 27 ಕ್ಕೆ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ