AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರಕ್ಕೆ ಸಾಲು ಸಾಲು ಹಿನ್ನಡೆ; ದೈವದ ಎಚ್ಚರಿಕೆ ನಿಜವಾಯ್ತಾ?

Rishab Shetty: ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರದ ಶೂಟಿಂಗ್ ಸಮಯದಲ್ಲಿ ಹಲವಾರು ಅಪಘಾತಗಳು ಮತ್ತು ಮರಣಗಳು ಸಂಭವಿಸಿವೆ. ಚಿತ್ರೀಕರಣದ ಸಮಯದಲ್ಲಿ ಬಸ್ ಅಪಘಾತ, ಕಲಾವಿದರ ಸಾವು ಮತ್ತು ಇತರ ಅನಾಹುತಗಳು ಸಂಭವಿಸಿವೆ. ಇದರಿಂದಾಗಿ ಚಿತ್ರತಂಡದ ಮೇಲೆ ದೈವದ ಎಚ್ಚರಿಕೆಯ ನಂಬಿಕೆ ಹೆಚ್ಚಾಗಿದೆ.

ರಿಷಬ್ ಶೆಟ್ಟಿ ‘ಕಾಂತಾರ’ ಚಿತ್ರಕ್ಕೆ ಸಾಲು ಸಾಲು ಹಿನ್ನಡೆ; ದೈವದ ಎಚ್ಚರಿಕೆ ನಿಜವಾಯ್ತಾ?
ಕಾಂತಾರ ಕಲಾವಿದರು
ರಾಜೇಶ್ ದುಗ್ಗುಮನೆ
|

Updated on: Jun 12, 2025 | 12:32 PM

Share

ಅಕ್ಟೋಬರ್ 2ರಂದು ರಿಲೀಸ್ ಆಗಲಿರುವ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾಗೆ ಸಾಲು ಸಾಲು ಹಿನ್ನಡೆ ಆಗುತ್ತಿದೆ. ಈ ಮೊದಲು ಕಲಾವಿದರು ತೆರಳುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಯಿತು. ಆ ಬಳಿಕ ತಂಡದ ಇಬ್ಬರು ಆರ್ಟಿಸ್ಟ್​ಗಳು ಸಾವನಪ್ಪಿದರು. ಈಗ ಚಿತ್ರದ ಜೂನಿಯರ್ ಆರ್ಟಿಸ್ಟ್ ವಿಜು ವಿಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ರೀತಿಯ ಕೆಟ್ಟ ಘಟನೆಗಳು ಸಾಲು ಸಾಲಾಗಿ ನಡೆಯುತ್ತಿರುವುದನ್ನು ನೋಡಿದರೆ ದೈವದ ಎಚ್ಚರಿಕೆ ನಿಜವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ದೈವದ ಎಚ್ಚರಿಕೆ

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಗೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿರುವ ಸೂಚನೆ ಸಿಕ್ಕ ಬೆನ್ನಲ್ಲೇ ಅವರು ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ ಮತ್ತು ಜಾರಂದಾಯ ದೈವದ ಉತ್ಸವದಲ್ಲಿ ಭಾಗಿ ಆಗಿದ್ದರು. ಆಗ ರಿಷಬ್​ಗೆ ದೈವ ಎಚ್ಚರಿಕೆಯನ್ನು ನೀಡಿತ್ತು. ‘ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ’ ಎಂದು ಎಚ್ಚರಿಸಿತ್ತು. ಅಲ್ಲದೆ, ಜಾಗೃತವಾಗಿರಲು ದೈವ ಸೂಚನೆ ನೀಡಿತ್ತು. ಈಗ ಎಚ್ಚರಿಕೆ ನಿಜವಾಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

ನಿರಂತರ ಸಾವು..

ಅದು 2024ರ ನವೆಂಬರ್ ತಿಂಗಳು. ಶೂಟಿಂಗ್ ಸಲುವಾಗಿ ಜೂನಿಯರ್​ ಕಲಾವಿದರನ್ನು ಕರೆದುಕೊಂಡು ಹೋಗಿದ್ದ ಮಿನಿ ಬಸ್​ ಪಲ್ಟಿ ಆಗಿತ್ತು. ಕೊಲ್ಲೂರು ಸಮೀಪದ ಜಡ್ಕಳ್ ಬಳಿ ಈ ಘಟನೆ ನಡೆದಿತ್ತು. ಆರು ಮಂದಿ ಈ ಘಟನೆಯಲ್ಲಿ ಗಾಯಗೊಂಡರು.

ಇದನ್ನೂ ಓದಿ
Image
ನಿಶಾ ರವಿಕೃಷ್ಣನ್​ಗೆ ತೆಲುಗು ಕಿರುತೆರೆಯಲ್ಲಿ ಎದುರಾದ ಕಷ್ಟಗಳು ಒಂದೆರಡಲ್ಲ
Image
ಕೆಲಸದವರನ್ನು ಗೌರಿ ಖಾನ್ ಎಷ್ಟು ಉತ್ತಮವಾಗಿ ನೋಡಿಕೊಳ್ತಾರೆ ನೋಡಿ..
Image
ನನಗೆ ಮಾರ್ಗದರ್ಶನ ನೀಡಿದ್ದರೆ; ಡ್ರಗ್ಸ್ ಪಾರ್ಟಿ ಬಗ್ಗೆ ಮೌನ ಮುರಿದ ಮಂಗ್ಲಿ
Image
‘ಸಿತಾರೆ ಜಮೀನ್ ​ಪರ್’ ನೋಡಿ ವಿಮರ್ಶೆ ತಿಳಿಸಿದ ಸುಧಾ ಮೂರ್ತಿ

ಮೇ ತಿಂಗಳಿಂದ ಈಚೆಗೆ ‘ಕಾಂತಾರ: ಚಾಪ್ಟರ್ 1’ ತಂಡದಲ್ಲಿ ಸೂತಕದ ಛಾಯೆ ಮನೆ ಮಾಡಿದೆ. ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಎಂಎಫ್ ಕಪಿಲ್ ಅವರು ಕೊಲ್ಲೂರಿನ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿ ನಿಧನ (ಮೇ) ಹೊಂದಿದ್ದರು. ‘ಆ ದಿನ ಯಾವುದೇ ಶೂಟಿಂಗ್ ಇರಲಿಲ್ಲ. ಹೀಗಾಗಿ, ಇದಕ್ಕೂ ಕಾಂತಾರ ಚಿತ್ರಕ್ಕೂ ಯಾವುದೇ ಲಿಂಕ್ ಮಾಡಬೇಡಿ’ ಎಂದು ತಂಡ ಕೇಳಿಕೊಂಡಿತ್ತು.

ಇದಾದ ಕೆಲವೇ ದಿನ ಅಂದರೆ ಮೇ 12ರಂದು ‘ಕಾಂತಾರ’ ಚಿತ್ರದ ಕಲಾವಿದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಮೃತಪಟ್ಟರು. ಇವರು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಇವರು ಮೃತಪಟ್ಟಿದ್ದು ಅನೇಕರಿಗೆ ಅರಗಿಸಿಕೊಳ್ಳಲೂ ಸಾಧ್ಯವಾಗಿಲ್ಲ. ರಾಕೇಶ್ ಅಂತ್ಯಕ್ರಿಯೆಗೆ ರಿಷಬ್ ಶೆಟ್ಟಿ ಅವರು ತೆರಳಿಲ್ಲ ಎಂಬ ಬಗ್ಗೆ ಕೆಲವರು ತಕರಾರು ತೆಗೆದರು. ಆ ಬಳಿಕ ರಿಷಬ್ ಕುಟುಂಬವನ್ನು ಭೇಟಿ ಮಾಡಿದರು.

ಇದನ್ನೂ ಓದಿ: ‘ಕಾಂತಾರ’ ಚಿತ್ರದ ಮತ್ತೋರ್ವ ಕಲಾವಿದ ನಿಧನ; ಹೃದಯಘಾತದಿಂದ ಕೊನೆಯುಸಿರು

ಈಗ ಮತ್ತೊಂದು ಅವಘಡ ಸಂಭವಿಸಿದೆ. ಕೇರಳದ ತ್ರಿಶೂರ್​ನ ವಿಜು ವಿಕೆ ಎಂಬುವವರು ‘ಕಾಂತಾರ’ ಸಿನಿಮಾ ಶೂಟ್​ಗಾಗಿ ಕರ್ನಾಟಕಕ್ಕೆ ಬಂದಿದ್ದರು. ಆಗುಂಬೆಯ ಸಮೀಪದ ಹೋಂ ಸ್ಟೇನಲ್ಲಿ ಉಳಿದುಕೊಂಡಿದ್ದರು. ಜೂನ್ 11ರಂದು ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು ಹೃದಯಾಘಾತ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಗುಜರಾತ್ ಮಹಿಳೆ
ದುಪಟ್ಟಾವನ್ನೇ ಹರಿದು ಉತ್ತರಾಖಂಡದ ಸಿಎಂಗೆ ರಾಖಿ ಕಟ್ಟಿದ ಗುಜರಾತ್ ಮಹಿಳೆ
ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ
ವರಮಹಾಲಕ್ಷ್ಮಿ ಹಬ್ಬ: ಚಾಮುಂಡೇಶ್ವರಿ ದೇವಿಗೆ ನೋಟುಗಳಿಂದ ಅಲಂಕಾರ
ಕಳೆದ 40-ವರ್ಷದಿಂದ ಬಿಜ್ಜನಗೆರಾದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ರಂಗಮ್ಮ
ಕಳೆದ 40-ವರ್ಷದಿಂದ ಬಿಜ್ಜನಗೆರಾದಲ್ಲಿ ಭಿಕ್ಷಾಟನೆ ನಡೆಸುತ್ತಿರುವ ರಂಗಮ್ಮ
ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್​
ರಭಸವಾಗಿ ಹರಿಯುತ್ತಿರುವ ಹಳ್ಳ: ಯಲ್ಲಮ್ಮನ ಗುಡ್ಡಕ್ಕೆ ಹೋಗುವ ರಸ್ತೆ ಬಂದ್​
ಮುಖ್ಯ ಚುನಾವಣಾಧಿಕಾರಿ ಮನವಿಗಳಿಗೆ ಸ್ಪಂದಿಸಿದ್ದಾರೆ: ಶಿವಕುಮಾರ್
ಮುಖ್ಯ ಚುನಾವಣಾಧಿಕಾರಿ ಮನವಿಗಳಿಗೆ ಸ್ಪಂದಿಸಿದ್ದಾರೆ: ಶಿವಕುಮಾರ್
ಪ್ರಜ್ವಲ್ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಕುಟುಂಬದ ನಿರ್ಣಯ: ಶಾಸಕ
ಪ್ರಜ್ವಲ್ ಪ್ರಕರಣ; ಕಾನೂನು ಹೋರಾಟ ಮುಂದುವರಿಸಲು ಕುಟುಂಬದ ನಿರ್ಣಯ: ಶಾಸಕ
ವಿಷ್ಣುವರ್ಧನ್ ಸಮಾಧಿ ನೆಲಸಮ; ಅಭಿಮಾನ್ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ
ವಿಷ್ಣುವರ್ಧನ್ ಸಮಾಧಿ ನೆಲಸಮ; ಅಭಿಮಾನ್ ಸ್ಟುಡಿಯೋದಲ್ಲಿ ಪೊಲೀಸ್ ಭದ್ರತೆ
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
ಮತಗಳ್ಳತನ ಆರೋಪ: ಟಿವಿ9 ರಿಯಾಲಿಟಿ ಚೆಕ್​ ನಲ್ಲಿ ಸತ್ಯ ಬಯಲು
ಠುಸ್ ಪಟಾಕಿ ಅನ್ನುವವರು ಅದನ್ನು ಕೈಯಲ್ಲಿ ಹಿಡಿದು ತೋರಿಸಲಿ: ಪ್ರಿಯಾಂಕ್
ಠುಸ್ ಪಟಾಕಿ ಅನ್ನುವವರು ಅದನ್ನು ಕೈಯಲ್ಲಿ ಹಿಡಿದು ತೋರಿಸಲಿ: ಪ್ರಿಯಾಂಕ್
ವಿಷ್ಣುವರ್ಧನ್ ಸಮಾಧಿ ನೆಲಸಮ, ಅಭಿಮಾನಿಗಳ ಆಕ್ರೋಶ: ವಿಡಿಯೋ
ವಿಷ್ಣುವರ್ಧನ್ ಸಮಾಧಿ ನೆಲಸಮ, ಅಭಿಮಾನಿಗಳ ಆಕ್ರೋಶ: ವಿಡಿಯೋ