AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada 13: ಈ ಬಾರಿ ಕಿಚ್ಚನ ಚಪ್ಪಾಳೆಗೆ ಇರಲಿದೆ ಭಾರಿ ಮಹತ್ವ

Bigg Boss Kannada season 13: ಬಿಗ್​​ಬಾಸ್ ಕನ್ನಡದ ಸೀಸನ್​​ಗಳಲ್ಲಿ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಳ್ಳಲು ಸಾಕಷ್ಟು ಶ್ರಮ ಪಡುತ್ತಾರೆ. ಕಿಚ್ಚನ ಚಪ್ಪಾಳೆ ಪಡೆಯುವುದು ಒಂದು ರೀತಿ ಕಪ್ ಗೆದ್ದಷ್ಟೇ ಸಂಭ್ರಮಿಸುತ್ತಾರೆ. ಆದರೆ ಈ ಬಾರಿ ಬಿಗ್​​ಬಾಸ್ ಕನ್ನಡದಲ್ಲಿ ಕಿಚ್ಚನ ಚಪ್ಪಾಳೆಗೆ ಇನ್ನೂ ಹೆಚ್ಚಿನ ಮೌಲ್ಯ ದೊರೆತಿದೆ. ಅದು ಹೇಗೆ? ಇಲ್ಲಿದೆ ನೋಡಿ ಮಾಹಿತಿ...

Bigg Boss Kannada 13: ಈ ಬಾರಿ ಕಿಚ್ಚನ ಚಪ್ಪಾಳೆಗೆ ಇರಲಿದೆ ಭಾರಿ ಮಹತ್ವ
Bigg Boss Kannada 13
ಮಂಜುನಾಥ ಸಿ.
|

Updated on:Sep 07, 2026 | 7:56 AM

Share

ಬಿಗ್​​ಬಾಸ್ ಕನ್ನಡ ಸೀಸನ್ 13 ಆರಂಭವಾಗಿದೆ. ವರ್ಣರಂಜಿತವಾಗಿ ನಡೆದ ಇನ್ಯಾಗುರೇಷನ್ ಕಾರ್ಯಕ್ರಮದಲ್ಲಿ ಬರೋಬ್ಬರಿ 16 ಮಂದಿ ಸ್ಪರ್ಧಿಗಳನ್ನು ಸುದೀಪ್ ಅವರು ಬಿಗ್​​ಬಾಸ್ ಮನೆಗೆ ಸ್ವಾಗತ ಮಾಡಿದ್ದಾರೆ. ಈ 16 ಮಂದಿ ಸ್ಪರ್ಧಿಗಳಲ್ಲಿ ನಾಲ್ಕು ಮಂದಿ ಸಾಮಾನ್ಯರಾಗಿದ್ದು, ಇನ್ನುಳಿದ 12 ಮಂದಿ ಮನೊರಂಜನಾ ಕ್ಷೇತ್ರಕ್ಕೆ ಸೇರಿದವರಾಗಿದ್ದಾರೆ. ಈ ಸೀಸನ್​​ನಲ್ಲಿ ಕೆಲ ವಿಶೇಷತೆಗಳು ಇರಲಿವೆ. ವಿಶೇಷವಾಗಿ ಈ ಸೀಸನ್​​ನಲ್ಲಿ ಕಿಚ್ಚನ ಚಪ್ಪಾಳೆಗೆ ಇನ್ನೂ ಹೆಚ್ಚಿನ ಮಹತ್ವ ಇರಲಿದೆ.

ಬಿಗ್​​ಬಾಸ್ ಮನೆಯಲ್ಲಿ ಉತ್ತಮಕ್ಕೆ ಸಾಕಷ್ಟು ಗೌರವ ಮಾನ್ಯತೆ ಇದೆ, ಆದರೆ ಕಿಚ್ಚನ ಚಪ್ಪಾಳೆಗೂ ಅದಕ್ಕಿಂತಲೂ ಹೆಚ್ಚಿನ ಗೌರವ ಇದೆ. ಕಿಚ್ಚನ ಚಪ್ಪಾಳೆಯನ್ನು ಪಡೆಯಲು ಪ್ರತಿ ವಾರವೂ ಸ್ಪರ್​ಧಿಗಳು ವಿಶೇಷ ಶ್ರಮ ಹಾಕುತ್ತಾರೆ. ಕಿಚ್ಚನ ಚಪ್ಪಾಳೆ ಪಡೆದವರ ಚಿತ್ರವನ್ನು ಗೋಡೆಗೆ ನೇತು ಹಾಕಲಾಗುತ್ತದೆ. ಹಾಗಾಗಿಯೇ ಕಿಚ್ಚನ ಚಪ್ಪಾಳೆಗೆ ಸಾಕಷ್ಟು ವಿಶೇಷ. ಆದರೆ ಈ ಬಾರಿ ಕಿಚ್ಚನ ಚಪ್ಪಾಳೆಗೆ ಇನ್ನಷ್ಟು ಮಾನ್ಯತೆ ದೊರೆತಿದೆ.

ಕಿಚ್ಚನ ಚಪ್ಪಾಳೆ ಪಡೆದವರ ಚಿತ್ರವನ್ನು ಗೋಡೆಯ ಮೇಲೆ ಹಾಕುವ ಜೊತೆಗೆ ಈ ಬಾರಿ ಚಪ್ಪಾಳೆ ಪಡೆದ ವ್ಯಕ್ತಿಗೆ ಸುದೀಪ್ ಅವರಿಂದ ವಿಶೇಷ ಉಡುಗೊರೆಯೂ ಸಹ ದೊರಕಲಿದೆ. ಅದು ಸಾಮಾನ್ಯ ಉಡುಗೊರೆಗಳಲ್ಲ, ಬದಲಿಗೆ ಸುದೀಪ್ ಅವರ ಇಷ್ಟದ ವಸ್ತುಗಳನ್ನೇ ಉಡುಗೊರೆಗಳಾಗಿ ಸ್ಪರ್ಧಿಗಳಿಗೆ ನೀಡಲಾಗುತ್ತದೆ. ಉಡುಗೊರೆಗಳಾಗಿ ನೀಡಲಾಗುವ ವಸ್ತುಗಳನ್ನು ಇನ್ಯಾಗುರೇಷನ್ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಸಹ ಇಡಲಾಗಿತ್ತು.

ಸುದೀಪ್ ಅವರ ವಿಶೇಷ ಜಾಕೆಟ್, ಅವರ ಶೂಗಳು, ಕ್ರಿಕೆಟ್ ಕಿಟ್, ಬ್ಯಾಟು, ಅವರ ಇಷ್ಟದ ಇನ್ನೂ ಕೆಲವು ವಸ್ತುಗಳನ್ನು ಬಿಗ್​​ಬಾಸ್​​ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಆ ವಸ್ತುಗಳನ್ನು ಕಿಚ್ಚನ ಚಪ್ಪಾಳೆ ಪಡೆದ ಸ್ಪರ್ಧಿಗಳಿಗೆ ಉಡುಗೊರೆಯಾಗಿ ನೀಡಲಾಗುತ್ತದೆ. ಹಾಗಾಗಿ ಹಿಂದೆಂದಿಗಿಂತಲೂ ಈ ಬಾರಿ ಕಿಚ್ಚನ ಚಪ್ಪಾಳೆಗೆ ಭಾರಿ ಮಾನ್ಯತೆ, ಗೌರವ ಇರಲಿದೆ.

ಇದನ್ನೂ ಓದಿ:ಬಿಗ್​​ಬಾಸ್ ಕನ್ನಡ ಸೀಸನ್ 13: ಸುದೀಪ್ ಎಂಟ್ರಿ ಹೇಗಿತ್ತು ನೋಡಿ

ಅಂದಹಾಗೆ ಬಿಗ್​​ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಬಿಗ್​​ಬಾಸ್ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದ ಸುದೀಪ್ ಅವರು, ಈ ಬಾರಿ ಬಿಗ್​​ಬಾಸ್ ಮನೆಯನ್ನು ವಿನ್ಯಾಸ ಮಾಡಿರುವ ರೀತಿಯಿಂದ ಬಹಳ ಇಂಪ್ರೆಸ್ ಆದರು. ಮನೆಯಲ್ಲಿ ಐಫಿಲ್ ಟವರ್ ಸೇರಿದಂತೆ ವಿಶ್ವದ ಹಲವು ಜನಪ್ರಿಯ ಮಾನ್ಯುಮೆಂಟ್​​ಗಳನ್ನು ಮರು ಸೃಷ್ಟಿಸಲಾಗಿತ್ತು. ಮನೆಯ ವಿನ್ಯಾಸದಿಂದ ಖುಷಿಯಾದ ಸುದೀಪ್ ಅವರು, ಮನೆಯ ವಿನ್ಯಾಸಕಾರರಿಗೆ ತಮ್ಮ ಮೊದಲ ಕಿಚ್ಚನ ಚಪ್ಪಾಳೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:55 am, Mon, 7 September 26

Follow Us