AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Asia firdose profile: ‘ಬೆಂಕಿಯಲ್ಲಿ ಅರಳಿದ ಗುಲಾಬಿ’ ಆಸಿಯಾ ಫಿರ್ದೋಸ್ ಈಗ ಬಿಗ್​​ಬಾಸ್​​ಗೆ

Bigg Boss Kannada Season 13: ಬಿಗ್​​ಬಾಸ್ ಕನ್ನಡ ಸೀಸನ್ 13ಕ್ಕೆ ಸ್ಪರ್ಧಿಯಾಗಿ ‘ಶ್ರಾವಣಿ-ಸುಬ್ರಹ್ಮಣ್ಯ’ ಧಾರಾವಾಹಿ ನಾಯಕಿ ಆಸಿಯಾ ಫಿರ್ದೋಸ್ ಆಗಮಿಸಿದ್ದಾರೆ. ಶ್ರಾವಣಿಯಾಗಿ ಮನೆ ಮಾತಾಗಿರುವ ಆಸಿಯಾ, ಬಿಗ್​​ಬಾಸ್​​ ಮೂಲಕ ಮತ್ತೊಮ್ಮೆ ರಾಜ್ಯದ ಜನರ ಮನ ಗೆಲ್ಲುತ್ತಾರೆಯೇ ಕಾದು ನೋಡಬೇಕಿದೆ. ಜೀವನದಲ್ಲಿ ನಾನಾ ಕಷ್ಟಗಳನ್ನು ಎದುರಿಸಿರುವ ಆಸಿಯಾ, ಬಿಗ್​​ಬಾಸ್ ಮನೆಯ ಸವಾಲುಗಳನ್ನು ಹೇಗೆ ಎದುರಿಸುತ್ತಾರೆ?

Asia firdose profile: ‘ಬೆಂಕಿಯಲ್ಲಿ ಅರಳಿದ ಗುಲಾಬಿ’ ಆಸಿಯಾ ಫಿರ್ದೋಸ್ ಈಗ ಬಿಗ್​​ಬಾಸ್​​ಗೆ
Asia
ಮಂಜುನಾಥ ಸಿ.
|

Updated on: Sep 06, 2026 | 10:08 PM

Share

ಆಸಿಯಾ ಫಿರ್ದೋಸ್ ಎಂದರೆ ಹೆಚ್ಚಿನ ಜನರಿಗೆ ಗೊತ್ತಾಗುವುದಿಲ್ಲ ಅದೇ ‘ಶ್ರಾವಣಿ’ ಎಂದರೆ ಓಹ್ ನಮ್ಮನೆ ಹುಡುಗಿ ಎನ್ನುತ್ತಾರೆ. ‘ಶ್ರವಣಿ ಸುಬ್ರಹ್ಮಣ್ಯ’ ಧಾರಾವಾಹಿಯ ನಾಯಕಿ ಶ್ರಾವಣಿ ಪಾತ್ರದಲ್ಲಿ ನಟಿಸುವ ಮೂಲಕ ಮನೆ ಮಾತಾಗಿರುವ ಆಸಿಯಾ ಫಿರ್ದೋಸ್ ಇದೀಗ ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆಸಿಯಾ ಫಿರ್ದೋಸ್ ಅವರು ‘ಶ್ರಾವಣಿ-ಸುಬ್ರಹ್ಮಣ್ಯ’ ಧಾರಾವಾಹಿಯಲ್ಲಿ ಶ್ರೀಮಂತ ಮನೆಯ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಬದುಕು ಅದಕ್ಕೆ ವಿರುದ್ಧವಾದುದ್ದು. ಒಂದು ರೀತಿ ‘ಬೆಂಕಿಯಲ್ಲಿ ಅರಳಿದ ಗುಲಾಬಿ’ ಈ ಆಸಿಯಾ ಫಿರ್ದೋಸ್.

ಆಸಿಯಾ ಫಿರ್ದೋಸ್, ಕೆಲ ವರ್ಷಗಳ ಹಿಂದಿನ ವರೆಗೂ ಸಹ ತೀವ್ರ ಬಡತನ, ಸಾಕಷ್ಟು ಕಷ್ಟಗಳನ್ನು ಕಂಡವರು. ಪದವಿ ಅಂತಿಮ ವರ್ಷ ಇರುವಾಗಲೇ ನಟನೆಗೆ ಇಳಿದ ಆಸಿಯಾ ಫಿರ್ದೋಸ್​​ಗೆ ಪಾತ್ರವೇನೋ ಒಲಿಯಿತು ಆದರೆ ಅದೃಷ್ಟ ಕೈಕೊಟ್ಟಿತು. ಆಸಿಯಾ ಮೊದಲು ನಟಿಸಿದ ಧಾರಾವಾಹಿ ‘ನಾನು ನನ್ನ ಕನಸು’ ಆ ಧಾರಾವಾಹಿ ಶುರುವಾಗುತ್ತಲೇ ಕೋವಿಡ್ ಬಂತು, ಧಾರಾವಾಹಿ ನಿಂತೇ ಹೋಯ್ತು.

ಕೋವಿಡ್ ಸಮಯದಲ್ಲಿ ತೀವ್ರ ಸಂಕಷ್ಟವನ್ನು ಆಸಿಯಾ ಫಿರ್ದೋಸ್ ಎದುರಿಸಿದ್ದರಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆಸಿಯಾ, ಕೋವಿಡ್ ಸಮಯದಲ್ಲಿ ಬಾಡಿಗೆ ಕಟ್ಟಲು ಹಣವೇ ಇರಲಿಲ್ಲವಂತೆ, ಮಾತ್ರವಲ್ಲ ಒಂದು ಹೊತ್ತು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣ ಆಗಿತ್ತಂತೆ. ಅಣ್ಣ-ಅಪ್ಪ ದೂರಾಗಿ, ಅವರಿಂದ ಯಾವ ಸಹಾಯವೂ ಸಿಗದೆ, ಸಾಕಷ್ಟು ಸಮಸ್ಯೆಗಳನ್ನು ಕೋವಿಡ್ ಸಮಯದಲ್ಲಿ ಎದುರಿಸಿದ್ದಾಗಿ ಅವರು ಹೇಳಿದ್ದಾರೆ. ‘ನನ್ನ ಕೆಲವು ಗೆಳೆಯರು, ಮನೆ-ಮನೆಗೆ ಹೋಗಿ ರೇಷನ್ ಕೊಡುತ್ತಿದ್ದರು, ಆದರೆ ನನಗೆ ಕೇಳಲು ಮುಜುಗರ ಆಗುತ್ತಿತ್ತು’ ಎಂದಿದ್ದಾರೆ ಆಸಿಯಾ.

ಇದನ್ನೂ ಓದಿ:Bigg Boss Kannada: ಸಂಗೀತಾ ಭಟ್ ಎಂಟ್ರಿ, ಬಿಗ್​​ಬಾಸ್​​ಗೆ ಆಲ್​ ದಿ ಬೆಸ್ಟ್ ಹೇಳಿದ ಸುದೀಪ್

ಕೋವಿಡ್ ಸಮಯದಲ್ಲಿಯೇ ಕಂಪೆನಿ ಒಂದಕ್ಕೆ ಕೆಲಸಕ್ಕೆ ಸೇರಿಕೊಂಡರಂತೆ ಆಸಿಯಾ, ಆದರೆ ನಟಿಸುವ ಆಸೆ ಕಡಿಮ ಆಗಿರಲಿಲ್ಲ. ಅಲ್ಲಿದ್ದುಕೊಂಡೆ ಆಡಿಷನ್​​ಗಳನ್ನು ನೀಡುತ್ತಿದ್ದರಂತೆ. ಮೊದಲಿಗೆ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ‘ಶ್ರಾವಣಿ-ಸುಬ್ರಹ್ಮಣ್ಯ’ ಸಿಕ್ಕ ಮೇಲೆ ಅವರ ಜೀವನವೇ ಬದಲಾಯ್ತು. ಮುಸ್ಲಿಂ ಹೆಣ್ಣುಮಗಳಾಗಿದ್ದು, ಮನೆ ಭಾಷೆ ಉರ್ದು ಆಗಿದ್ದು, ಕನ್ನಡ ಸುಲಲಿತವಾಗಿರಲಿಲ್ಲವಂತೆ. ಚೆನ್ನಾಗಿ ಕನ್ನಡ ಕಲಿಯಬೇಕೆಂಬ ಹಠದಲ್ಲಿ ಸತತವಾಗಿ ಅಭ್ಯಾಸ ಮಾಡಿದರಂತೆ. ಯಾವ ಮಟ್ಟಿಗೆಂದರೆ ನಿದ್ದೆಯಲ್ಲೂ ಡೈಲಾಗ್​​ಗಳನ್ನು ಹೇಳುತ್ತಿದ್ದರಂತೆ ಆಸಿಯಾ.

ಆಸಿಯಾ, ‘ಶ್ರಾವಣಿ ಸುಬ್ರಹ್ಮಣ್ಯ’ ಬಳಿಕ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ‘ದ್ವಂದ್ವ’ ಸಿನಿಮಾನಲ್ಲಿ ನಟಿಸಿರುವ ಆಸಿಯಾ, ‘ಕಾಲಾಯ ನಮಃ’ ಸಿನಿಮಾನಲ್ಲಿ ಕೋಮಲ್ ಅವರಿಗೆ ನಾಯಕಿ. ಜೊತೆಗೆ ‘ಮಿಲನ’ ಹೆಸರಿನ ವೆಬ್ ಸರಣಿಯಲ್ಲೂ ಆಸಿಯಾ ನಟಿಸಿದ್ದಾರೆ.

ಜೀವನದ ಬಹುತೇಕ ಎಲ್ಲ ಹಂತದಲ್ಲೂ ಕಷ್ಟಗಳನ್ನು, ಸವಾಲುಗಳನ್ನು ಎದುರಿಸಿದ ಆಸಿಯಾ ಈಗ ಬಿಗ್​​ಬಾಸ್​​ ಮನೆಗೆ ಬರುತ್ತಿದ್ದಾರೆ. ಹೊರಗೆ ಹಲವು ಜೀವನ ಪಾಠಗಳನ್ನು, ಸಂಬಂಧಗಳ ಸಂಕೀರ್ಣತೆಗಳನ್ನು ಅರಿತಿರುವ ಆಸಿಯಾ, ಬಿಗ್​​ಬಾಸ್ ಒಳಗೆ ಹೇಗೆ ಇರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us