AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೈಲೆಂಟ್​ ಆಗಿ 100 ಕೋಟಿ ಕ್ಲಬ್ ಸೇರಿದ ಹೊಂಬಾಳೆ ಪ್ರೆಸೆಂಟ್ ಮಾಡಿದ ‘ಮಹಾವತಾರ ನರಸಿಂಹ’

ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕೇವಲ 10 ದಿನಗಳಲ್ಲಿ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.ಕಡಿಮೆ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರದ ಯಶಸ್ಸು ಅದ್ಭುತ. ಪೌರಾಣಿಕ ಕಥೆ ಮತ್ತು ಅತ್ಯುತ್ತಮ ಅನಿಮೇಷನ್ ಪ್ರೇಕ್ಷಕರನ್ನು ಆಕರ್ಷಿಸಿದೆ.

ಸೈಲೆಂಟ್​ ಆಗಿ 100 ಕೋಟಿ ಕ್ಲಬ್ ಸೇರಿದ ಹೊಂಬಾಳೆ ಪ್ರೆಸೆಂಟ್ ಮಾಡಿದ ‘ಮಹಾವತಾರ ನರಸಿಂಹ’
ಮಹಾವತಾರ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 04, 2025 | 8:04 AM

Share

ಬಾಲಿವುಡ್‌ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಸಿನಿಮಾಗಳ ಬಗ್ಗೆ ಮಾತನಾಡಿದರೆ, ಪಟ್ಟಿ ತುಂಬಾ ಉದ್ದವಾಗಿದೆ. ಆದರೆ, ಹೊಂಬಾಳೆ ಫಿಲ್ಮ್ಸ್ ಪ್ರೆಸೆಂಟ್ ಮಾಡಿದ ‘ಮಹಾವತಾರ ನರಸಿಂಹ’ (Mahavatar Narasimha) ಈ ಎಲ್ಲಾ ದಾಖಲೆಗಳನ್ನು ಮುರಿದಿದೆ. ಹಲವು ವರ್ಷಗಳ ನಂತರ ಈ ರೀತಿಯ ಸಿನಿಮಾ ಬಂದಿದ್ದು, ಬಹುತೇಕ ಎಲ್ಲಾ ಶೋಗಳು ಹೌಸ್‌ಫುಲ್ ಆಗಿವೆ. ಚಿತ್ರ ಬಿಡುಗಡೆಯಾಗಿ ಕೇವಲ ಎಂಟು ದಿನಗಳು ಕಳೆದಿದ್ದರೂ, ಅದರ ಬಜೆಟ್‌ಗಿಂತ ಹಲವು ಪಟ್ಟು ಹೆಚ್ಚು ಗಳಿಸಿದೆ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಈ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ.

‘ಮಹಾವತಾರ ನರಸಿಂಹ’ ಇದು ಅನಿಮೇಟೆಡ್ ಚಿತ್ರವಾಗಿದ್ದು, ಇದರ ಕಥೆ ಪೌರಾಣಿಕವಾಗಿದೆ. 2 ಗಂಟೆ 10 ನಿಮಿಷಗಳ ಈ ಚಿತ್ರದ ಕಥೆ ತುಂಬಾ ಹಳೆಯದು. ಅನೇಕರಿಗೆ ಈಗಾಗಲೇ ಈ ಕಥೆ ತಿಳಿದಿದೆ. ಆದರೆ, ನಿರ್ದೇಶಕ ಅಶ್ವಿನ್ ಕುಮಾರ್ ಈ ಚಿತ್ರವನ್ನು ಪ್ರೇಕ್ಷಕರಿಗೆ ತಂದ ರೀತಿಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಚಿತ್ರ ಜುಲೈ 25 ರಂದು ಬಿಡುಗಡೆಯಾಯಿತು. ಕೇವಲ 10 ದಿನಗಳಲ್ಲಿ ಈ ಚಿತ್ರ 91 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂಪಾಯಿ ಗಡಿ ದಾಟಿದೆ.  ಈ ಚಿತ್ರದ ಬಜೆಟ್ ಕೇವಲ 5 ಕೋಟಿ ರೂ. ಎಂದು ಹೇಳಲಾಗಿದೆ. ಈ ಚಿತ್ರವು IMDb ನಲ್ಲಿ 9.6 ರೇಟಿಂಗ್ ಪಡೆದಿದೆ. ಈ ರೇಟಿಂಗ್ ಭಾರತದಲ್ಲಿ ತಯಾರಾದ ಚಿತ್ರಕ್ಕೆ ಸಿಕ್ಕ ಅತ್ಯಧಿಕ ರೇಟಿಂಗ್ ಆಗಿದೆ.

ಇದನ್ನೂ ಓದಿ
Image
ಸಿನಿಮಾ ಗೆಲ್ಲದಿದ್ದರೂ 500 ಕೋಟಿ ರೂ. ಒಡೆಯ ಅರ್ಬಾಜ್ ಖಾನ್
Image
ಲಾಭದಲ್ಲೇ ಇದೆ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ?
Image
ಭಾನುವಾರ ಒಂದೇ ದಿನ ಬಜೆಟ್​ಗೂ ಡಬಲ್ ಕಲೆಕ್ಷನ್ ಮಾಡಿದ ‘ಸು ಫ್ರಮ್ ಸೋ’
Image
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಈ ಚಿತ್ರವು ಅನೇಕ ದೊಡ್ಡ ಚಿತ್ರಗಳನ್ನು ಮೀರಿಸಿದೆ. ಐಡಿಬಿ ರೇಟಿಂಗ್‌ನಲ್ಲಿ ನಟ ವಿಕ್ರಾಂತ್ ಮಾಸ್ಸೆ ಅವರ ‘12th ಫೇಲ್’, ‘ಅಂಬೆ ಶಿವಂ’, ‘ತ್ರೀ ಈಡಿಯಟ್ಸ್’ ಮತ್ತು ‘ಅಪುರ್ ಸಂಸಾರ್’ ಚಿತ್ರಗಳನ್ನು ‘ಮಹಾವತಾ ನರಸಿಂಹ’ ಹಿಂದಿಕ್ಕಿದೆ.

ಇದನ್ನೂ ಓದಿ: ಹೊಂಬಾಳೆಗೆ ಮತ್ತೊಂದು ಯಶಸ್ಸು, ‘ಮಹಾವತಾರ್’ ಗಳಿಸಿದ್ದೆಷ್ಟು?

‘ಮಹಾವತಾರ ನರಸಿಂಹ’ ಚಿತ್ರವು ವಿಷ್ಣುವಿನ ನಾಲ್ಕನೇ ಅವತಾರದ ಕಥೆಯನ್ನು ಚಿತ್ರಿಸುತ್ತದೆ. ವಿಷ್ಣು ತನ್ನ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ನರಸಿಂಹನ ಅವತಾರವನ್ನು ತೆಗೆದುಕೊಳ್ಳುತ್ತಾನೆ. ಈ ಚಿತ್ರದಲ್ಲಿ ನಾಯಕ ಅಥವಾ ನಾಯಕಿ ಇಲ್ಲ. ಈ ಚಿತ್ರದಲ್ಲಿನ ಅನಿಮೇಷನ್ ಅನ್ನು ಸಹ ಪ್ರಶಂಸಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಬಸ್​​ನೊಳಗಿಂದ ತಿಂಡಿಗಾಗಿ ದುಡ್ಡು ಕೊಟ್ಟ ಯುವಕನಿಗೆ ವ್ಯಾಪಾರಿ ಮಾಡಿದ್ದೇನು?
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಹಂಸಲೇಖ, ರವಿಚಂದ್ರನ್ ನಡುವೆ ಆ ಒಂದು ಹಾಡಿಗಾಗಿ ಮೂಡಿತ್ತು ಭಿನ್ನಾಭಿಪ್ರಾಯ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಬೈಎಲೆಕ್ಷನ್: 2 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸುತ್ತೆ ಎಂದ ಸುರ್ಜೇವಾ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ಸ್ಯಾಂಕಿ ಕೆರೆ ಮುಂದೆ 800 ಕೆಜಿ ತೂಕದ ಪುನೀತ್ ಕಂಚಿನ ಪ್ರತಿಮೆ ಲೋಕಾರ್ಪಣೆ
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು
ತಂದೆಯಿಂದಲೇ ಹಸುಗೂಸಿನ ಕೊಲೆ: ಭೀಮರಾಯನ ಕ್ರೂರತೆ ಬಿಚ್ಚಿಟ್ಟ ಸಂಬಂಧಿಕರು