AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಠಿಣವಾಗುತ್ತಲೇ ಇದೆ ಸಂಕ್ರಾಂತಿ ಸ್ಪರ್ಧೆ; ಸೇರ್ಪಡೆ ಆಯಿತು ಮತ್ತೊಂದು ಸಿನಿಮಾ

‘ಗುಂಟೂರು ಖಾರಂ’, ‘ನಾ ಸಾಮಿ ರಂಗ’ ಮುಂತಾದ ಸಿನಿಮಾಗಳ ನಡುವೆ ಹಣಾಹಣಿ ನಡೆಯಲಿದೆ. ಸಂಕ್ರಾಂತಿಗೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ರೇಸ್​ಗೆ ಮತ್ತೊಂದಷ್ಟು ಸಿನಿಮಾಗಳು ಸೇರ್ಪಡೆ ಆಗಬಹುದು. ಕೆಲವು ಸಿನಿಮಾಗಳು ಹಿಂದೆ ಸರಿಯಬಹುದು. ಸದ್ಯಕ್ಕಂತೂ ಸ್ಪರ್ಧೆ ಸಖತ್ ಟಫ್ ಆಗಿದೆ.

ಕಠಿಣವಾಗುತ್ತಲೇ ಇದೆ ಸಂಕ್ರಾಂತಿ ಸ್ಪರ್ಧೆ; ಸೇರ್ಪಡೆ ಆಯಿತು ಮತ್ತೊಂದು ಸಿನಿಮಾ
ಸಂಕ್ರಾಂತ್ರಿ 2024 ರಿಲೀಸ್​
 ಶ್ರೀಲಕ್ಷ್ಮೀ ಎಚ್
| Edited By: |

Updated on: Oct 05, 2023 | 5:27 PM

Share

ಸಂಕ್ರಾಂತಿ ಹಬ್ಬ (Sankranti) ಬಂತೆಂದರೆ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗುತ್ತದೆ. ಈ ಸಂದರ್ಭದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತವೆ. ದೊಡ್ಡ ಬಜೆಟ್ ಚಿತ್ರಗಳು, ಸಣ್ಣ ಬಜೆಟ್​ ಚಿತ್ರಗಳು ಈ ಸಂದರ್ಭದಲ್ಲಿ ಬಿಡುಗಡೆ ಕಾಣುತ್ತವೆ. ಅದರಲ್ಲೂ ಟಾಲಿವುಡ್​ನಲ್ಲಿ (Tollywood) ಈ ಸಂದರ್ಭದಲ್ಲಿ ಭರ್ಜರಿ ಸ್ಪರ್ಧೆ ಏರ್ಪಡುತ್ತದೆ. ಸಂಕ್ರಾಂತಿಗೆ (Sankranti 2024) ಇನ್ನು ಮೂರು ತಿಂಗಳು ಬಾಕಿ ಇರುವಾಗಲೇ ಹೊಸ ಹೊಸ ಸಿನಿಮಾಗಳು ಜನವರಿ 12 ಹಾಗೂ 13ನ್ನು ಲಾಕ್ ಮಾಡುತ್ತಿವೆ. ಈ ರೇಸ್​ಗೆ ಇನ್ನೂ ಕೆಲವು ಸಿನಿಮಾಗಳು ಸೇರ್ಪಡೆ ಆಗಿವೆ ಆ ಬಗ್ಗೆ ಇಲ್ಲಿದೆ ವಿವರ.

ಸೈಂಧವ್​: ದಗ್ಗುಬಾಟಿ ವೆಂಕಟೇಶ್ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ನಟನೆಯ ‘ಸೈಂಧವ್​’ ಸಿನಿಮಾ ತಂಡ ರಿಲೀಸ್ ದಿನಾಂಕ ಘೋಷಣೆ ಮಾಡಿದೆ. 2024ರ ಜನವರಿ 13ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಶೈಲೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ನವಾಜುದ್ದೀನ್ ಸಿದ್ಧಿಕಿ, ರೂಹನಿ ಶರ್ಮಾ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಸೋನಂ ಕಪೂರ್ ಬಗ್ಗೆ ರಾಣಾ ದಗ್ಗುಬಾಟಿ ಹೇಳಿಕೆ: ಪ್ರತಿಕ್ರಿಯೆ ನೀಡಿದ ದುಲ್ಕರ್ ಸಲ್ಮಾನ್

ಗುಂಟೂರು ಖಾರಂ: ಮಹೇಶ್ ಬಾಬು ನಟನೆಯ, ತ್ರಿವಿಕ್ರಂ ಶ್ರೀನಿವಾಸ್ ನಿರ್ದೇಶನದ ‘ಗುಂಟೂರು ಖಾರಂ’ ಸಿನಿಮಾ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರ ಜನವರಿ 12ರಂದು ರಿಲೀಸ್ ಆಗಲಿದೆ. ಈ ಚಿತ್ರಕ್ಕೆ ಶ್ರೀಲೀಲಾ ಹಾಗೂ ಮೀನಾಕ್ಷಿ ಚೌಧರಿ ನಾಯಕಿಯರು. ಈ ಸಿನಿಮಾದ ಟೀಸರ್ ಹಾಗೂ ಪೋಸ್ಟರ್ ಗಮನ ಸೆಳೆದಿದೆ. ಈ ಚಿತ್ರವನ್ನು ಕಠಿಣ ಪ್ರತಿಸ್ಪರ್ಧಿ ಎಂದು ಎಲ್ಲರೂ ಪರಿಗಣಿಸಿದ್ದಾರೆ.

ಜನವರಿಯಲ್ಲೂ ‘ಗುಂಟೂರು ಖಾರಂ’ ರಿಲೀಸ್ ಆಗೋದು ಅನುಮಾನ ಎಂದವರಿಗೆ ಮಹೇಶ್ ಬಾಬು ಉತ್ತರ

ನಾ ಸಾಮಿ ರಂಗ: ಇತ್ತೀಚೆಗೆ ಅಕ್ಕಿನೇನಿ ನಾಗಾರ್ಜುನ ಅವರು ಜನ್ಮದಿನ ಆಚರಿಸಿಕೊಂಡರು. ಈ ವೇಳೆ ‘ನಾ ಸಾಮಿ ರಂಗ’ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಯಿತು. ಇದರ ಜೊತೆಗೆ ಸಿನಿಮಾದ ರಿಲೀಸ್ ದಿನಾಂಕ ಕೂಡ ತಿಳಿಸಲಾಯಿತು. ಈ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಲಿದೆ. ಈ ಚಿತ್ರದ ರಿಲೀಸ್ ದಿನಾಂಕ ಘೋಷಣೆ ಆಗಿಲ್ಲ. ಈ ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ಯಶಸ್ವಿನಿ ಮೊದಲಾದವರು ನಟಿಸಿದ್ದಾರೆ. ಸುಬ್ರಹ್ಮಣ್ಯ ಪಚ್ಚ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಅಕ್ಕಿನೇನಿ ನಾಗೇಶ್ವರ ರಾವ್​ ಪ್ರತಿಮೆ ಅನಾವರಣದ ವೇಳೆ ಟಾಲಿವುಡ್​ ಸಂಭ್ರಮ

ಈಗಲ್: ರವಿತೇಜ ಅವರು ಟಾಲಿವುಡ್​ನಲ್ಲಿ ಬೇಡಿಕೆ ಇಟ್ಟುಕೊಂಡಿದ್ದಾರೆ. ಸದಭಿರುಚಿ ಚಿತ್ರಗಳನ್ನು ಅವರು ನೀಡುತ್ತಾರೆ. ಅವರು ‘ಈಗಲ್’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಕೂಡ ಮುಂದಿನ ವರ್ಷ ಜನವರಿ 12ರಂದು ಬಿಡುಗಡೆ ಆಗಲಿದೆ. ಸಂಕ್ರಾಂತಿಗೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಈ ಸಂದರ್ಭದಲ್ಲಿ ರೇಸ್​ಗೆ ಮತ್ತೊಂದಷ್ಟು ಸಿನಿಮಾಗಳು ಸೇರ್ಪಡೆ ಆಗಬಹುದು. ಕೆಲವು ಸಿನಿಮಾಗಳು ಹಿಂದೆ ಸರಿಯಬಹುದು. ಸದ್ಯಕ್ಕಂತೂ ಸ್ಪರ್ಧೆ ಸಖತ್ ಟಫ್ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More