AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಹಗಳೆಲ್ಲ ಒಂದು ಸರಳ ರೇಖೆಗೆ ಬಂದ ದಿನ ಬಿಡುಗಡೆ ಆಗುತ್ತೆ ‘ಕಲ್ಕಿ 2’

Kalki 2 release date: ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ವರ್ಷವಾಗುತ್ತಾ ಬಂದರೂ ‘ಕಲ್ಕಿ 2’ ಸಿನಿಮಾದ ಚಿತ್ರೀಕರಣ ಶುರುವಾಗಿಲ್ಲ. ಈ ಬಗ್ಗೆ ನಿರ್ದೇಶಕರನ್ನು ಕೇಳಿದರೆ, ಸೌರಮಂಡಲದ ಎಲ್ಲ ಗ್ರಹಗಳು ಒಂದು ಸರಳ ರೇಖೆಗೆ ಬಂದಾಗ ‘ಕಲ್ಕಿ 2’ ಬಿಡುಗಡೆ ಆಗುತ್ತದೆ ಎಂದಿದ್ದಾರೆ. ಆದರೆ ಆ ವಿದ್ಯಮಾನ ನಡೆಯಲು ನೂರಾರು ವರ್ಷಗಳೇ ಬೇಕು.

ಗ್ರಹಗಳೆಲ್ಲ ಒಂದು ಸರಳ ರೇಖೆಗೆ ಬಂದ ದಿನ ಬಿಡುಗಡೆ ಆಗುತ್ತೆ ‘ಕಲ್ಕಿ 2’
Kalki 2898 Ad
Follow us
ಮಂಜುನಾಥ ಸಿ.
|

Updated on: Apr 24, 2025 | 12:13 PM

ಪ್ರಭಾಸ್ (Prabhas) ನಟನೆಯ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿದೆ. ಸಿನಿಮಾದಲ್ಲಿ ಪ್ರಭಾಸ್ ಜೊತೆಗೆ ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿದ್ದರು. ಸಿನಿಮಾದ ಕತೆ ಮಹಾಭಾರತದಿಂದ ಆರಂಭವಾಗಿ ಭವಿಷ್ಯದ ಪ್ರಪಂಚದ ಘಟನೆಗಳನ್ನು ಒಳಗೊಂಡಿತ್ತು. ಸಿನಿಮಾದ ಎರಡನೇ ಭಾಗ ಬಿಡುಗಡೆ ಆಗಲಿದೆ ಎಂಬ ಸುಳಿವನ್ನು ನಿರ್ದೇಶಕರು ಮೊದಲ ಸಿನಿಮಾದ ಅಂತ್ಯದಲ್ಲಿ ನೀಡಿದ್ದರು. ಆದರೆ ಸಿನಿಮಾ ಬಿಡುಗಡೆ ಆಗಿ ಒಂದು ವರ್ಷವಾಗುತ್ತಾ ಬಂದರೂ ‘ಕಲ್ಕಿ 2’ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿಲ್ಲ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಾಗ್ ಅಶ್ವಿನ್, ಅಭಿಮಾನಿಗಳಿಗೆ ಗಾಬರಿ ಆಗುವ ವಿಷಯ ಹೇಳಿದ್ದಾರೆ.

‘ನಮ್ಮ ಸೌರಮಂಡಲದಲ್ಲಿರುವ ಎಲ್ಲ ಗ್ರಹಗಳು ಒಂದು ಸರಳ ರೇಖೆಗೆ ಬಂದಾಗ ‘ಕಲ್ಕಿ 2’ ಸಿನಿಮಾ ಬಿಡುಗಡೆ ಆಗುತ್ತದೆ’ ಎಂದಿದ್ದಾರೆ ನಾಗ್ ಅಶ್ವಿನ್. ಹೀಗೆ ನಮ್ಮ ಸೌರ ಮಂಡಲದ ಎಂಟು ಗ್ರಹಗಳು ಒಂದೇ ಸರಳ ರೇಖೆಗೆ ಬರಲು ನೂರಾರು ವರ್ಷಗಳೇ ಬೇಕಾಗುತ್ತವೆ. ಕಳೆದ ಬಾರಿ ನಮ್ಮ ಸೌರಮಂಡಲದ ಎಲ್ಲ ಗ್ರಹಗಳು ಒಂದು ಸರಳ ರೇಖೆಗೆ ಬಂದಿದ್ದು 1982, ಮಾರ್ಚ್ 10 ರಂದು. ಮುಂದಿನ ಬಾರಿ ಮತ್ತೆ ಇಂಥಹಾ ವಿದ್ಯಮಾನ ನಡೆಯುವುದು 2492, ಮೇ 6ಕ್ಕೆ. ಈಗ ನಾಗ್ ಅಶ್ವಿನ್ ಹೇಳಿರುವ ಪ್ರಕಾರ ‘ಕಲ್ಕಿ 2’ ಸಿನಿಮಾ 2492 ಕ್ಕೆ ಬಿಡುಗಡೆ ಆಗಲಿದೆ!

ಇದನ್ನೂ ಓದಿ:‘ಇನ್ಸೆಪ್ಷನ್ ರೀತಿ ಐಡಿಯಾ ನನಗೂ ಇತ್ತು’: ಟ್ರೋಲ್ ಆದ ‘ಕಲ್ಕಿ 2898 ಎಡಿ’ ನಿರ್ದೇಶಕ

‘ಕಲ್ಕಿ 2’ ಸಿನಿಮಾ ಯಾವಾಗ ಶುರು ಎಂಬ ಪ್ರಶ್ನೆಗೆ, ‘ನನಗೆ ಆ ವಿಷಯ ಗೊತ್ತಿಲ್ಲ. ಕಳೆದ ಬಾರಿ ಮೂರು ಗ್ರಹಗಳು ಕೂಡಿದ್ದಾಗ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿತ್ತು. ಬಹುಷಃ ಏಳು ಅಥವಾ ಎಂಟು ಗ್ರಹಗಳು ಕೂಡಿದಾಗ ‘ಕಲ್ಕಿ 2’ ಸಿನಿಮಾ ಬಿಡುಗಡೆ ಆಗಬಹುದೇನೋ’ ಎಂದಿದ್ದಾರೆ. ಆ ಮೂಲಕ ‘ಕಲ್ಕಿ 2’ ಸಿನಿಮಾ ಬಿಡುಗಡೆ ಆಗುವುದೇ ಅನುಮಾನ ಎಂಬ ಮಾತುಗಳನ್ನಾಡಿದ್ದಾರೆ. ಸಿನಿಮಾ ಪ್ರಾರಂಭದ ಬಗ್ಗೆ ಅನುಮಾನಗಳಿರುವ ಕಾರಣಕ್ಕೆ ನಾಗ್ ಅಶ್ವಿನ್ ಈ ಮಾತು ಹೇಳಿದ್ದಾರೆ ಎನ್ನಲಾಗುತ್ತಿದ್ದು, ನಾಗ್ ಅಶ್ವಿನ್ ಅವರ ಮಾತುಗಳು ಪ್ರಭಾಸ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.

ಪ್ರಭಾಸ್ ಪ್ರಸ್ತುತ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದಿ ರಾಜಾ ಸಾಬ್’ ಹಾರರ್ ಕಾಮಿಡಿ ಸಿನಿಮಾದ ಚಿತ್ರೀಕರಣವನ್ನು ಪ್ರಭಾಸ್ ಈಗಾಗಲೇ ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಸಿನಿಮಾದ ಜೊತೆಗೆ ರಘು ಹನುಪುಡಿ ನಿರ್ದೇಶನದ ‘ಫೌಜಿ’ ಸಿನಿಮಾದ ಚಿತ್ರೀಕರಣದಲ್ಲಿಯೂ ತೊಡಗಿಕೊಂಡಿದ್ದಾರೆ. ಮೊದಲಿಗೆ ‘ದಿ ರಾಜಾ ಸಾಬ್’ ಆ ನಂತರ ‘ಫೌಜಿ’ ಬಿಡುಗಡೆ ಆಗಲಿದೆ. ‘ಫೌಜಿ’ ಬಳಿಕ ಪ್ರಭಾಸ್ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ ಪ್ರಶಾಂತ್ ನೀಲ್ ಅವರ ‘ಸಲಾರ್ 2’ ಪ್ರಾರಂಭಿಸುವ ನಿರೀಕ್ಷೆ ಇದೆ. ಪ್ರಭಾಸ್ ‘ಸಲಾರ್ 2’ ಪ್ರಾರಂಭಿಸುತ್ತಾರೋ ಅಥವಾ ‘ಕಲ್ಕಿ 2’ ಸಿನಿಮಾ ಪ್ರಾರಂಭಿಸುತ್ತಾರೋ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಆತ್ಮರಕ್ಷಣೆಗಾಗಿ ಗನ್ ಲೈಸೆನ್ಸ್ ಪೊಲೀಸರು ಕೊಡುತ್ತಿಲ್ಲ: ಶರಣ್ ಪಂಪ್ವೆಲ್
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಪಾಕಿಸ್ತಾನಕ್ಕೆ ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಅಣೆಕಟ್ಟಿನ ನೀರು ಸ್ಥಗಿತ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ
ಆನೇಕಲ್​ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ