ಬಾಲಿಯಲ್ಲಿ ನಟಿ ನುಸ್ರತ್ ಭರೂಚಾಗೆ ಅಪಘಾತ: ಬೆನ್ನುಮೂಳೆಗೆ ತೀವ್ರ ಪೆಟ್ಟು
ನಟಿ ನುಸ್ರತ್ ಭರೂಚಾ ಚಿತ್ರೀಕರಣದಲ್ಲಿ ತೊಡಗಿರುವಾಗ ಸಂಭವಿಸಿದ ಅಪಘಾತದಲ್ಲಿಯೇ ಅವರ ಬೆನ್ನಿಗೆ ದೊಡ್ಡ ಸ್ವರೂಪದ ಏಟಾಗಿದೆ ಎನ್ನಲಾಗುತ್ತಿದೆ. ಸದ್ಯ ಬಾಲಿಯ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿರುವ ಅವರನ್ನು, ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಕರೆತರಲು ಸಿದ್ಧತೆ ನಡೆಸಲಾಗಿದೆ.

ಮುಖ್ಯಾಂಶಗಳು
- ಬಾಲಿವುಡ್ ನಟಿ ನುಸ್ರತ್ ಭರೂಚಾಗೆ ಅಪಘಾತ
- ಬಾಲಿಯಲ್ಲಿ ಅಪಘಾತಕ್ಕೆ ಈಡಾದ ನಟಿ ನುಸ್ರತ್ ಭರೂಚಾ
- ಬಾಲಿಯಲ್ಲಿ ನುಸ್ರತ್ ಭರೂಚಾಗೆ ಚಿಕಿತ್ಸೆ ನೀಡಲಾಗುತ್ತಿದೆ
ಬಾಲಿವುಡ್ ನಟಿ ನುಸ್ರತ್ ಭರುಚಾ ಅವರು ಇತ್ತೀಚೆಗೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಶೂಟಿಂಗ್ಗಾಗಿ ತೆರಳಿದ್ದಾಗ ಅಪಘಾತಕ್ಕೆ ಈಡಾಗಿದ್ದಾರೆ. ನುಸ್ರತ್ ಭರುಚಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯಲ್ಲಿ ಅವರ ಸ್ಥಿತಿ ತುಸು ಗಂಭೀರವಾಗಿದೆ ಎನ್ನಲಾಗುತ್ತಿದೆ. ನುಸ್ರತ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಬಾಲಿಯಲ್ಲಿ ವೃತ್ತಿಪರ ಕಾರ್ಯಕ್ರಮ ಹಾಗೂ ಪ್ರವಾಸದಲ್ಲಿದ್ದ ನುಶ್ರತ್ ಭರುಚ್ಚಾ ಅವರಿಗೆ ಅನಿರೀಕ್ಷಿತ ಅಪಘಾತ ಸಂಭವಿಸಿದ್ದು, ಅವರ ಬೆನ್ನುಮೂಳೆಗೆ ತೀವ್ರ ಪೆಟ್ಟಾಗಿದೆ. ಚಿತ್ರೀಕರಣದಲ್ಲಿ ತೊಡಗಿರುವಾಗ ಸಂಭವಿಸಿದ ಅಪಘಾತದಲ್ಲಿಯೇ ಅವರ ಬೆನ್ನಿಗೆ ದೊಡ್ಡ ಸ್ವರೂಪದ ಏಟಾಗಿದೆ ಎನ್ನಲಾಗುತ್ತಿದೆ. ಸದ್ಯ ಬಾಲಿಯ ಸ್ಥಳೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾದಲ್ಲಿರುವ ಅವರನ್ನು, ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಏರ್ ಆಂಬ್ಯುಲೆನ್ಸ್ ಮೂಲಕ ಮುಂಬೈಗೆ ಕರೆತರಲು ಸಿದ್ಧತೆ ನಡೆಸಲಾಗಿದೆ.
ಈ ಗಾಯದ ಕಾರಣದಿಂದಾಗಿ ನಟಿ ಮುಂದಿನ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅವರ ಮುಂಬರುವ ಚಿತ್ರಗಳ ಚಿತ್ರೀಕರಣ ಮತ್ತು ಕೆಲಸದ ಬದ್ಧತೆಗಳಿಗೆ ತಾತ್ಕಾಲಿಕವಾಗಿ ವಿರಾಮ ನೀಡಲಾಗಿದೆ. ನುಸ್ರತ್ ಭರೂಚಾ ಅವರಿಗೆ ಅಸಲಿಗೆ ಆಗಿದ್ದೇನು? ಹೇಗೆ ಅಪಘಾತ ಸಂಭವಿಸಿತು ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ ಅವರ ಬೆನ್ನಿಗೆ ತೀವ್ರ ಪೆಟ್ಟಾಗಿದೆ. ಅವರ ಬೆನ್ನುಮೂಳೆಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂಬ ಮಾಹಿತಿಯಷ್ಟೆ ಸದ್ಯಕ್ಕೆ ಹರಿದಾಡುತ್ತಿದೆ.
ಇದನ್ನೂ ಓದಿ:‘ದಿ ಬ್ಯಾಡ್ಸ್ ಆಫ್ ಬಾಲಿವುಡ್ ಸೀಸನ್ 2’ ಮೂಲಕ ಮತ್ತೆ ಬರಲು ರೆಡಿ ಆದ ಆರ್ಯನ್ ಖಾನ್
ನುಶ್ರತ್ ಭರುಚ್ಚಾ ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಒಬ್ಬರು. ಅವರು ‘ಪ್ಯಾರ್ ಕಾ ಪಂಚ್‌ನಾಮಾ’ ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ಅದಾದ ಬಳಿಕ ‘ಸೋನು ಕೆ ಟಿತು ಕಿ ಸ್ವೀಟಿ’, ‘ಡ್ರೀಮ್ ಗರ್ಲ್’, ‘ಛೋರಿ’, ‘ಜನ್‌ಹಿತ್ ಮೇ ಜಾರಿ’, ‘ರಾಮ್ ಸೇತು’, ‘ಅಕೇಲಿ’ ಮುಂತಾದ ವಿಭಿನ್ನ ಕಥಾಹಂದರದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲ ದಕ್ಷಿಣ ಭಾರತದ ಸಿನಿಮಾಗಳಲ್ಲೂ ಅವರು ನಟನೆ ಮಾಡಿದ್ದಾರೆ. ತೆಲುಗಿನ ‘ತಾಜ್ ಮಹಲ್’ ತಮಿಳಿನ ‘ವಾಲಿಬಾ ರಾಜಾ’ ಸಿನಿಮಾಗಳಲ್ಲಿಯೂ ಅವರು ನಟಿಸಿದ್ದಾರೆ. ಅವರು ಶೀಘ್ರದಲ್ಲೇ ಟೈಗರ್ ಶ್ರಾಫ್ ಜೊತೆ ನಟಿಸಲಿರುವ ಹೊಸ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರು. ಆದರೆ ಅಷ್ಟರಲ್ಲೇ ಅವರಿಗೆ ಪೆಟ್ಟಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




