ಮಾದಕ ವಸ್ತುಗಳ ಪ್ರಚಾರ, ಒಟಿಟಿಗಳಿಗೆ ಕೇಂದ್ರದ ಎಚ್ಚರಿಕೆ
OTT Content: ಒಟಿಟಿಗಳಲ್ಲಿ ಪ್ರಸಾರವಾಗುವ ಸಿನಿಮಾ, ವೆಬ್ ಸರಣಿಗಳಲ್ಲಿ ಮಾದಕ ವಸ್ತುಗಳ ಬಳಕೆ ಅದರ ವೈಭವೀಕರಣ, ಮಾದಕ ವಸ್ತುಗಳ ಬಗ್ಗೆ ವಿವರಗಳು ಇನ್ನಿತರೆಗಳನ್ನು ತೋರಿಸಿರುವ ಕೆಲವು ಸನ್ನಿವೇಶಗಳು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದೇ ಕಾರಣಕ್ಕೆ ಈಗ ಒಟಿಟಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ‘ಅಂತಹ ಚಿತ್ರಣವು ನೋಡುಗರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ, ವಿಶೇಷವಾಗಿ ಯುವಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ’ ಎಂದಿದೆ.
ಕೋವಿಡ್ ಸಮಯದ ಈಚಿಗೆ ವಿಶ್ವ ಮನೊರಂಜನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮೂಡಿಸಿವೆ ಒಟಿಟಿಗಳು. ಭಾರತ, ಕೊರಿಯಾ ಇನ್ನಿತರೆ ದೇಶಗಳಿಗೆ ಒಟಿಟಿಯಿಂದ ಬಹಳ ದೊಡ್ಡ ಪ್ರಯೋಜನವಾಗಿದೆ. ಸಿನಿಮಾ, ಟಿವಿ ಧಾರಾವಾಹಿಯ ಹೊರತಾಗಿ ಒಟಿಟಿ ಕಂಟೆಂಟ್ ಎಂಬ ಪ್ರತ್ಯೇಕ ಕಂಟೆಂಟ್ ಭಾಷೆಯ ಉಗಮವೇ ಆಗಿದೆ. ಆದರೆ ಒಟಿಟಿ ಸಿನಿಮಾ ಅಥವಾ ವೆಬ್ ಸರಣಿಗಳು ವ್ಯಕ್ತಿಯ ಖಾಸಗಿ ಆಯ್ಕೆ ಆಗಿರುವ ಕಾರಣ ಒಟಿಟಿ ಕಂಟೆಂಟ್ಗಳಲ್ಲಿ ಹಿಂಸೆ, ಲೈಂಗಿಕತೆ, ಮಾದಕ ವಸ್ತುಗಳ ಬಳಕೆ ಇನ್ನಿತರೆಗಳ ಮೇಲೆ ಸೆನ್ಸಾರ್ ಕಡಿಮೆ ಆಗಿದೆ. ಸಿನಿಮಾಗಳಿಗೆ ಇರುವ ಸೆನ್ಸಾರ್ಶಿಪ್ ಒಟಿಟಿಗಳಿಗೆ ಇಲ್ಲದಾಗಿದೆ. ಆದರೆ ಇದರಿಂದ ಕೆಲವು ಸಮಸ್ಯೆಗಳು ಸಹ ಸೃಷ್ಟಿಯಾಗುತ್ತಿದ್ದು, ಇದೀಗ ಇದೇ ವಿಷಯವಾಗಿ ಕೇಂದ್ರ ಸರ್ಕಾರ ಒಟಿಟಿಗಳಿಗೆ ಎಚ್ಚರಿಕೆ ನೀಡಿದೆ.
ಒಟಿಟಿಗಳಲ್ಲಿ ಪ್ರಸಾರವಾಗುವ ಸಿನಿಮಾ, ವೆಬ್ ಸರಣಿಗಳಲ್ಲಿ ಮಾದಕ ವಸ್ತುಗಳ ಬಳಕೆ ಅದರ ವೈಭವೀಕರಣ, ಮಾದಕ ವಸ್ತುಗಳ ಬಗ್ಗೆ ವಿವರಗಳು ಇನ್ನಿತರೆಗಳನ್ನು ತೋರಿಸಿರುವ ಕೆಲವು ಸನ್ನಿವೇಶಗಳು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇದೇ ಕಾರಣಕ್ಕೆ ಈಗ ಒಟಿಟಿಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ‘ಅಂತಹ ಚಿತ್ರಣವು ನೋಡುಗರ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ, ವಿಶೇಷವಾಗಿ ಯುವಕರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ’ ಎಂದಿದೆ.
ಇದನ್ನೂ ಓದಿ:Pushpa 2: ‘ಪುಷ್ಪ 2’ ಒಟಿಟಿ ರಿಲೀಸ್ ದಿನಾಂಕ ರಿವೀಲ್? ಇಲ್ಲಿದೆ ಮಾಹಿತಿ
‘ಮಾಹಿತಿ ಮತ್ತು ಪ್ರಸಾರ ಕಾಯ್ದೆ ಮತ್ತು ಮಾದಕ ವಸ್ತು ನಿಷೇಧ ಕಾಯ್ದೆಯನ್ನು ಗಮನದಲ್ಲಿಟ್ಟುಕೊಂಡು ಅದರ ಮಾರ್ಗದರ್ಶನಗಳಿಗೆ ಅನುಗುಣವಾಗಿ ಕಂಟೆಂಟ್ ಅನ್ನು ಪ್ರಸಾರ ಮಾಡಬೇಕು’ ಎಂದು ಕೇಂದ್ರ ಸರ್ಕಾರವು ಒಟಿಟಿಗಳಿಗೆ ಸೂಚನೆ ನೀಡಿದೆ. ಮಾದಕ ವಸ್ತುಗಳ ಬಳಕೆಯ ದೃಶ್ಯಗಳು ಬಂದಾಗ ಎಚ್ಚರಿಕೆ ಸಂದೇಶ ಹಾಕುವುದು, ಮಾದಕ ವಸ್ತುವಿನ ಬಳಕೆಯನ್ನು ವೈಭವೀಕರಣ ಮಾಡದೇ ಇರುವುದು. ಮಾದಕ ವಸ್ತುಗಳ ಬಗ್ಗೆ ವಿವರ, ಅದರ ಬಳಕೆ, ಲಭ್ಯತೆ ಇನ್ನಿತರೆಗಳ ಬಗ್ಗೆ ವಿವರಗಳನ್ನು ನೀಡದೇ ಇರುವುದು ಇನ್ನಿತರೆ ಸೂಚನೆಗಳನ್ನು ಕೇಂದ್ರ ಸರ್ಕಾರ, ಒಟಿಟಿಗಳಿಗೆ ನೀಡಿದೆ.
ಈ ಹಿಂದೆಯೂ ಸಹ ಒಟಿಟಿಗಳಲ್ಲಿ ಧಾರ್ಮಿಕ ಸೂಕ್ಷ್ಮ ವಿಚಾರಗಳು, ಅತಿಯಾದ ಲೈಂಗಿಕತೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗುವಂಥಹಾ ಕಂಟೆಂಟ್ಗಳ ಪ್ರಸಾರವಾದಾಗ ಕೇಂದ್ರ ಸರ್ಕಾರ ಆಯಾ ಒಟಿಟಿಗಳಿಗೆ ಎಚ್ಚರಿಕೆ ನೀಡಿತ್ತು. ಕೆಲವು ಒಟಿಟಿ ವೆಬ್ ಸರಣಿಗಳ ದೃಶ್ಯಗಳನ್ನು ಡಿಲೀಟ್ ಸಹ ಮಾಡಿಸಲಾಗಿತ್ತು. ಕೆಲವು ಸಂಭಾಷಣೆಗಳನ್ನು ಮ್ಯೂಟ್ ಸಹ ಮಾಡಿಸಲಾಗಿತ್ತು. ಆ ನಂತರ ಒಟಿಟಿ ಕಂಟೆಂಟ್ನಲ್ಲಿ ಧಾರ್ಮಿಕ ವಿಷಯಗಳ ಬಗ್ಗೆ ಕಂಟೆಂಟ್ ಬರುವುದು ಅಥವಾ ವಿವಾದಾತ್ಮಕ ದೃಶ್ಯ, ಸಂಭಾಷಣೆ ಬರುವುದು ಕಡಿಮೆ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ