ಥೀಯೇಟರ್ ಬಳಿಕ ಒಟಿಟಿಯಲ್ಲೂ ದಾಖಲೆ ಬರೆದ ‘ಧುರಂಧರ್ 2’
Dhurandhar 2 movie: ‘ಧುರಂಧರ್ ದಿ ರಿವೆಂಜ್’ (Dhurandhar The Revenge) ಸಿನಿಮಾ ಕೆಲ ದಿನಗಳ ಹಿಂದಷ್ಟೆ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದ ಈ ಸಿನಿಮಾ ಇದೀಗ ಒಟಿಟಿಯಲ್ಲೂ ದಾಖಲೆ ಬರೆದಿದೆ. ‘ಧುರಂಧರ್ 2’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ 5 ಕೋಟಿ (50 ಮಿಲಿಯನ್) ವೀಕ್ಷಕರನ್ನು ತಲುಪಿದೆ. ಇದು ಚಿತ್ರಮಂದಿರಗಳಲ್ಲಿ ಮೊದಲ ವಾರಾಂತ್ಯದಲ್ಲಿ ‘ಧುರಂಧರ್ 2’ ವೀಕ್ಷಕರ ಸಂಖ್ಯೆಗಿಂತ ಸುಮಾರು 5 ಪಟ್ಟು ಹೆಚ್ಚು.

‘ಧುರಂಧರ್ ದಿ ರಿವೆಂಜ್’ (Dhurandhar The Revenge) ಸಿನಿಮಾ ಕೆಲ ದಿನಗಳ ಹಿಂದಷ್ಟೆ ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಿದೆ. ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆದ ಈ ಸಿನಿಮಾ ಇದೀಗ ಒಟಿಟಿಯಲ್ಲೂ ದಾಖಲೆ ಬರೆದಿದೆ. ‘ಧುರಂಧರ್ 2’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ವಾರಾಂತ್ಯದಲ್ಲೇ 5 ಕೋಟಿ (50 ಮಿಲಿಯನ್) ವೀಕ್ಷಕರನ್ನು ತಲುಪಿದೆ. ಇದು ಚಿತ್ರಮಂದಿರಗಳಲ್ಲಿ ಮೊದಲ ವಾರಾಂತ್ಯದಲ್ಲಿ ‘ಧುರಂಧರ್ 2’ ವೀಕ್ಷಕರ ಸಂಖ್ಯೆಗಿಂತ ಸುಮಾರು 5 ಪಟ್ಟು ಹೆಚ್ಚು.
ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ‘ಧುರಂಧರ್ 2’ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲ ಬಿಡುಗಡೆ ಆಗಿದ್ದು, ಸ್ಟ್ರೀಂ ಆಗುತ್ತಿದೆ. ಥಿಯೇಟರ್ ನಲ್ಲಿ ಅದ್ಧೂರಿ ಪ್ರದರ್ಶನ ಕಂಡ ಬಳಿಕವೂ ಸಿನಿಮಾ ಕುತೂಹಲ ಉಳಿಸಿಕೊಂಡಿದ್ದು ಒಟಿಟಿಯಲ್ಲಿಯೂ ಕೋಟ್ಯಂತರ ಜನರನ್ನು ತಲುಪುತ್ತಿದೆ. ಜಿಯೋ ಹಾಟ್ಸ್ಟಾರ್ನಲ್ಲಿ ಚಿತ್ರದ ಒಟ್ಟು ವೀಕ್ಷಣಾ ಅವಧಿಯಲ್ಲಿ ಸುಮಾರು 60% ರಷ್ಟು ಕನೆಕ್ಟೆಡ್ ಟಿವಿ ಸಾಧನಗಳಿಂದ ಬಂದಿದೆ ಎಂದು ಜಿಯೋ ಹಾಟ್ಸ್ಟಾರ್ ಹೇಳಿದೆ. ಅಂದರೆ ‘ಧುರಂಧರ್ 2’ ಸಿನಿಮಾವನ್ನು ಕುಟುಂಬವೆಲ್ಲ ಕೂತು ಒಟ್ಟಿಗೆ ನೋಡಿದೆ ಎಂಬುದನ್ನು ಈ ಅಂಕಿ-ಸಂಖ್ಯೆ ಹೇಳುತ್ತಿದೆ.
ಈ ಅಭೂತಪೂರ್ವ ಯಶಸ್ಸಿಗೆ ಚಿತ್ರದ ಭವ್ಯವಾದ ಡಿಜಿಟಲ್ ಪ್ರೀಮಿಯರ್ ಅನುಭವವೂ ಒಂದು ಪ್ರಮುಖ ಕಾರಣವಾಗಿದೆ ಎಂದು ಜಿಯೋ ಹಾಟ್ಸಾರ್ ಹೇಳಿದ್ದು, ಅಭಿಮಾನಿಗಳಿಗೆ ಚಿತ್ರದ ‘ರಾ ಆಂಡ್ ಉಂದೇಖಾ’ ಆವೃತ್ತಿಯ ವಿಶೇಷ ಪ್ರವೇಶದ ಜೊತೆಗೆ, ಚಿತ್ರದ ತಾರಾಗಣದ ಸುಂದರ ಕ್ಷಣಗಳು, ತೆರೆಮರೆಯ ಕಥೆಗಳು ಮತ್ತು ಬಿಹೈಂಡ್ ದಿ ಸೀನ್ಸ್ ಒಳಗೊಂಡ 30 ನಿಮಿಷಗಳ ವಿಶೇಷ ಪ್ರಿ-ಶೋ ಅನ್ನು ಪ್ರದರ್ಶಿಸಲಾಯಿತು. ಇದರ ಪರಿಣಾಮವಾಗಿ, ಇದು ಕೇವಲ ಒಂದು ಸಿನಿಮಾ ವೀಕ್ಷಣೆಯಾಗಿ ಉಳಿಯದೇ, ವೀಕ್ಷಕರನ್ನು ಆಳವಾಗಿ ತೊಡಗಿಸಿಕೊಳ್ಳುವಂತೆ ಮಾಡಿತು ಮತ್ತು ಜನರನ್ನು ಮತ್ತೊಮ್ಮೆ ಸಿನಿಮಾ ನೋಡುವಂತೆ ಪ್ರೇರೇಪಿಸಿತು ಎಂದಿದ್ದಾರೆ ಜಿಯೋ ಹಾಟ್ಸ್ಟಾರ್ ಮುಖ್ಯಸ್ಥ ಅಲೋಕ್ ಜೈನ್.
ಇದನ್ನೂ ಓದಿ:ಜಪಾನಿನಲ್ಲಿ ಬಿಡುಗಡೆಗೆ ಸಜ್ಜಾದ ‘ಧುರಂಧರ್’, ಮುರಿಯುತ್ತಾ ‘ದಂಗಲ್’ ದಾಖಲೆ
‘ಧುರಂಧರ್’ ಚಿತ್ರವು ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ 3.2 ಕೋಟಿಗೂ (32 ಮಿಲಿಯನ್) ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ‘ಧುರಂಧರ್ 2’ ಸಿನಿಮಾ ಸಹ ವೀಕ್ಷಣೆಯಲ್ಲಿ ದಾಖಲೆ ಬರೆದಿದೆ. ಡಿಜಿಟಲ್ ಪ್ರೀಮಿಯರ್‌ಗೆ ಜಾಹೀರಾತುದಾರರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, 50 ಕ್ಕೂ ಹೆಚ್ಚು ಬ್ರಾಂಡ್‌ಗಳು ಮತ್ತು 13 ಪ್ರಮುಖ ಪ್ರಾಯೋಜಕರು ಈ ಚಿತ್ರದೊಂದಿಗೆ ಕೈಜೋಡಿಸಿದ್ದರು ಎಂದು ಜಿಯೋ ಹಾಟ್ಸ್ಟಾರ್ ಹೇಳಿದೆ. ‘ಧುರಂಧರ್ ದಿ ರಿವೆಂಜ್’ ಸಿನಿಮಾ ಈಗ ಜಿಯೋಹಾಟ್‌ಸ್ಟಾರ್‌ನಲ್ಲಿ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ‘ಧುರಂಧರ್ 2’ ಸಿನಿಮಾ ಹೊರದೇಶಗಳಲ್ಲಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆದರೆ, ಭಾರತದಲ್ಲಿ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




